ಬ್ರಿಟನ್ ರಾಜಮನೆತನದ ಪಾಲಿನ ಡರ್ಟಿ ಡಯಾನಾ: ಇಂದಿಗೂ ನೆನೆಯುತ್ತಾರೆ ಈಕೆಯನ್ನ ಜನ

First Published Sep 16, 2022, 9:38 AM IST

ಬ್ರಿಟನ್ ಅನ್ನು ಸುಧೀರ್ಘ ಕಾಲ ಆಳಿದ ರಾಣಿ ಎಂಬ ಖ್ಯಾತಿಗೆ ಪಾತ್ರರಾದ ರಾಣಿ ಎಲಿಜಬೆತ್ ಕಳೆದ ಗುರುವಾರ ಲಂಡನ್‌ ಬಾಲ್ಮೋರ್ ಕಾಸ್ಟೆಲ್‌ನಲ್ಲಿ ನಿಧನರಾದರೂ, ತುಂಬು ಜೀವನ ನಡೆಸಿ ಇಹಲೋಕ ತ್ಯಜಿಸಿದ ರಾಣಿಯ ಸಾವಿಗೆ ಜನ ಶೋಕಿಸುವ ಬದಲು 25 ವರ್ಷ ಹಿಂದೆ ಅಗಲಿದ ಡಯಾನಾಳಿಗಾಗಿ ಜನ ಈಗಲು ಶೋಕಿಸುತ್ತಿದ್ದಾರೆ.  ಮತಪಟ್ಟು 25 ವರ್ಷಗಳೇ ಕಳೆದರೂ ಡಯಾನ ಇಂದಿಗೂ ಪ್ರಸ್ತುತ ಎನಿಸುವ ಫ್ಯಾಷನ್ ಐಕಾನ್ ಎನಿಸಿದ್ದಾರೆ. ಅವರ ಫ್ಯಾಷನ್ ತುಂಬಿದ ಬ್ಯೂಟಿಫುಲ್ ಫೋಟೋಗಳು ಇಲ್ಲಿವೆ. 

ರಾಜಮನೆತನದ ಎಲ್ಲಾ ನಿಯಮಗಳನ್ನು ಉಸಿರು ಕಟ್ಟಿಸುವ ಬಂಧನ, ನೀತಿ ನಿಯಮಗಳನ್ನು ಗಾಳಿಗೆ ತೂರಿ ಬಿಂದಾಸ್ ಆಗಿ ಜನಸಾಮಾನ್ಯರೊಂದಿಗೆ ಬೆರೆತು ಬದುಕಿದ ಡಯಾನಾಳ ಬದುಕು ಒಂದು ದುರಂತ ಎಂದರೆ ತಪ್ಪಾಗಲಾರದು. 1961ರ ಜುಲೈ 29ರಂದು ಇಂಗ್ಲೆಂಡ್‌ನ ನೋರ್‌ಪೋಕ್‌ನಲ್ಲಿ(Norefolk) ಜನಿಸಿದ ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್ 1981ರ ಜುಲೈ 29 ರಂದು ಬ್ರಿಟನ್ ರಾಜಕುಮಾರ ಚಾರ್ಲ್ಸ್‌ನನ್ನು ಲಂಡನ್‌ನ  ಸೇಂಟ್ ಪೌಲ್ ಚರ್ಚ್‌ನಲ್ಲಿ ಮದುವೆಯಾಗುತ್ತಾರೆ.

 ಡಯನಾ ಅತ್ತೆ ರಾಣಿ ಎಲಿಜಬೆತ್(elizabeth) ನಿಧನರಾಗುತ್ತಿದ್ದಂತೆ ರಾಜನಾಗಿ ಚಾರ್ಲ್ಸ್‌ಗೆ ಪಟ್ಟಾಭಿಷೇಕವಾಗಿದೆ.  ಚಾರ್ಲ್ಸ್‌ ಮೊದಲ ಪತ್ನಿ ಡಯಾನಾ ಬದುಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಬ್ರಿಟನ್ ಜನ ಹಲಬುತ್ತಿದ್ದಾರೆ. 

ಡಯಾನಾ ಹಾಗೂ ಚಾರ್ಲ್ಸ್‌ನ ಸಾಂಸಾರಿಕ ಕಲಹ, ವಿಚ್ಛೇದನ ಅದರಲ್ಲೂ ಡಯಾನಾಳ ಅಸಾಧಾರಣ ಸೌಂದರ್ಯ, ಫ್ಯಾಷನ್ (Fashion), ಪತಿಯ ನಿರ್ಲಕ್ಷ್ಯದ ನಡುವೆಯೂ ಬದುಕಿನ ಬಗ್ಗೆ ಆಕೆ ಹೊಂದಿದ್ದ ಅಪಾರವಾದ ಆಸಕ್ತಿ ಅಮೋಘವಾದುದು.

ಜನ ಸಾಮಾನ್ಯರ ಮೇಲೆ ಆಕೆಗಿದ್ದ ಪ್ರೀತಿ, ರಾಜ ಮನೆತನದ ವಿರೋಧದ ನಡುವೆಯೂ ಆಕೆ ಜನರೊಂದಿಗೆ ಬೆರೆತ ರೀತಿ ಆಕೆಯ ಸಾಮಾಜಿಕ ಸೇವೆ 25 ವರ್ಷಗಳ ಬಳಿಕವೂ ಆಕೆಯನ್ನು ಜೀವಂತವಾಗಿರಿಸಿದೆ.

1961ರ ಜುಲೈ 29ರಂದು ಇಂಗ್ಲೆಂಡ್‌ನ ನೋರ್‌ಪೋಕ್‌ನಲ್ಲಿ(Norefolk) ಜನಿಸಿದ ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್ 1981ರ ಜುಲೈ 29 ರಂದು ಬ್ರಿಟನ್ ರಾಜಕುಮಾರ ಚಾರ್ಲ್ಸ್‌ನನ್ನು ಲಂಡನ್‌ನ  ಸೇಂಟ್ ಪೌಲ್ ಚರ್ಚ್‌ನಲ್ಲಿ ಮದುವೆಯಾಗುತ್ತಾರೆ.

ಆದರೆ ಮದುವೆಗೂ ಮೊದಲೇ ಕಮಿಲ್ಲಾ ಪ್ರೀತಿಯಲ್ಲಿ ಬಿದ್ದಿದ್ದ ರಾಜಕುಮಾರ ಚಾರ್ಲ್ಸ್‌ ಪತ್ನಿ ಡಯಾನಾಳನ್ನು ತೀವ್ರವಾಗಿ ನಿರ್ಲಕ್ಷಿಸಿದ್ದ.  ಗಂಡ ಚಾರ್ಲ್ಸ್‌ ನ ನಿರ್ಲಕ್ಷ್ಯ ಡಯಾನಾಗೆ ಅರಗಿಸಿಕೊಳ್ಳಲಾಗದ ನೋವು ನೀಡಿದವು.

ಈ ಮಧ್ಯೆ 1982 ರಲ್ಲಿ ಪ್ರಿನ್ಸ್‌ ಹೆನ್ರಿ ಹಾಗೂ 1984ರಲ್ಲಿ ಪ್ರಿನ್ಸ್ ಚಾರ್ಲಿಗೆ ಜನ್ಮ ನೀಡಿದ ಡಯಾನಾ ಹಾಗೂ ಚಾರ್ಲ್ಸ್ ಸಾಂಸಾರಿಕ ಕಲಹ ಅರಮನೆ ದಾಟಿ ಹೊರಬಂದು ಲಂಡನ್ ಜನರ ಬಾಯಲ್ಲೂ ಹರಿದಾಡುವಂತಾಗಿತ್ತು. 

ನಂತರ 1992ರಲ್ಲಿ ಇಬ್ಬರು ಒಪ್ಪಿ ವಿಚ್ಛೇದನ ಪಡೆದರು. ಇವರ ಈ ವಿಚ್ಛೇದನ ರಾಣಿ ಎಲಿಜಬೆತ್‌ಗೂ ಸಹಿಸಲಾಗದ ಆಘಾತ ನೀಡಿತ್ತು.  ವಿಚ್ಛೇದನದ ನಂತರ ಡಯಾನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದರು.

ಈ ವೇಳೆ ವಿಚ್ಛೇದನ ನಿಮಗಿಷ್ಟವಿತ್ತೇ ಎಂದು ಸಂದರ್ಶಕ ಕೇಳಿದಾಗ ಡಯಾನ ಇಲ್ಲ ಇದು ಚಾರ್ಲ್ಸ್‌ ನಿರ್ಧಾರವಾಗಿತ್ತು. ಡಿವೋರ್ಸ್ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ ನಾನು ಎಂದಿಗೂ ಡಿವೋರ್ಸ್ ಬಗ್ಗೆ ಯೋಚಿಸಿರಲಿಲ್ಲ. ಆದರೆ ಚಾರ್ಲ್ಸ್ ಡಿವೋರ್ಸ್ ಪಡೆಯುವ ಮನಸ್ಸು ಮಾಡಿದ್ದ ಎಂದು ಡಯಾನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ತನ್ನ ಖಾಸಗಿ ಬದುಕಿನಲ್ಲಿ ನೆಮ್ಮದಿ ಇಲ್ಲದಿರುವುದು ಸಾರ್ವಜನಿಕ ಬದುಕಿನ ಒತ್ತಡ ಇವೆಲ್ಲವನ್ನು ಡಯಾನಾ 1995ರಲ್ಲಿ ದೂರದರ್ಶನವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ರಾಜಕುಮಾರಿಯಾದರೂ ಅರಮನೆಯ ಬಂಧನ ಬಯಸದ ರಾಜಕುಮಾರಿ ಡಯಾನ ಸ್ವತಂತ್ರವಾಗಿ ಬದುಕಲು ಬಯಸಿದ್ದರು. ಹೀಗಾಗಿ ರಾಜಮನೆತನದ ಹಲವು ನಿಯಮಗಳನ್ನು ಗಾಳಿಗೆ ತೂರಿ ಬಿಂದಾಸ್ ಆಗಿರಲು ಬಯಸಿದ್ದ ಆಕೆ ರಾಣಿ ಎಲಿಜಬೆತ್ ಕೆಂಗಣ್ಣಿಗೂ ಗುರಿಯಾಗಿದ್ದರು.

ಬ್ಯಾಲೆ ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಡಯಾನ ಅರಮನೆಯಲ್ಲಿ ರಹಸ್ಯವಾಗಿ ತರಬೇತಿಗಾರನಿಂದ ಬ್ಯಾಲೆ ನೃತ್ಯ ತರಬೇತಿ ಪಡೆದಿದ್ದು, ಅದನ್ನು ವೇದಿಕೆಯಲ್ಲಿಯೇ ಪ್ರದರ್ಶನವನ್ನು ಕೂಡ ಮಾಡಿದ್ದರು. ಇದು ಚಾರ್ಲ್ಸ್‌ನ್ನು ಅಕ್ಷರಶಃ ಉರಿದು ಬೀಳುವಂತೆ ಮಾಡಿತ್ತು. ಡರ್ಟಿ ಡಯಾನ ಎಂದು ಜನ ಕರೆಯಲಾರಂಭಿಸಿದ್ದರು. 

ಡಯಾನಾ ಹರ್ ಟ್ರೂ ಸ್ಟೋರಿ ಡಯಾನಾಳ ಉದಾರ ವ್ಯಕ್ತಿತ್ವದ ಸಂಪೂರ್ಣ ಚಿತ್ರಣವನ್ನು ಜಗತ್ತಿಗೆ ತೆರೆದಿಟ್ಟಿದೆ. ವಿಚ್ಛೇದನದ ಬಳಿಕ ಹಾಗೂ 1997ರಲ್ಲಿ ತನ್ನ ಸಾವಿಗೂ ಮೊದಲು ಡಯಾನಾ ಹಲವು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ತನ್ನ ಧಿರಿಸುಗಳಿಂದ ಬ್ರಿಟನ್ ಯುವ ಸಮೂಹದ ಪಾಲಿನ ಫ್ಯಾಷನ್ ಐಕಾನಿಕ್ ಎನಿಸಿದ್ದ ಡಯಾನಾ ತಮ್ಮ ಹಲವರು ಧಿರಿಸುಗಳನ್ನು ಹರಾಜಿಗೆ ಹಾಕಿ ಅವುಗಳಿಂದ ಬಂದ ಹಣವನ್ನು ಚಾರಿಟಿಗಳಿಗೆ ದಾನ ನೀಡಿದ್ದರು.  1997ರ ಆಗಸ್ಟ್‌ 31 ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಡಯಾನ 1997ರ ಜುಲೈ 1 ರಂದು ತಮ್ಮ ಕೊನೆಯ ಹಾಗೂ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು

click me!