ಸಮುದ್ರದ ಮಧ್ಯದಲ್ಲಿರುವ 2 ಕಂಬಗಳ ಮೇಲೆ ನೆಲೆಗೊಂಡಿದೆ ಪ್ರಪಂಚದ ಅತ್ಯಂತ ಚಿಕ್ಕ ದೇಶ!

Published : Jul 11, 2022, 08:59 AM IST

ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. ಜನಸಂಖ್ಯಾ ದಿನವನ್ನು ಆಚರಿಸುವ ಉದ್ದೇಶವು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು, ಇದರಿಂದ ಪ್ರತಿಯೊಬ್ಬ ವ್ಯಕ್ತಿಯು ಮೂಲಭೂತ ಸೌಲಭ್ಯಗಳನ್ನು ಪಡೆಯಬಹುದು. ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಒಂದು ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. 2022 ರಲ್ಲಿ ಇದರ ಥೀಮ್  ‘A World of 8 Billion: Towards a Resilient Future for All — Harnessing Opportunities and Ensuring Rights and Choices for All.’(ಎ ವರ್ಲ್ಡ್ ಆಫ್ 8 ಬಿಲಿಯನ್: ಎಲ್ಲರಿಗೂ ಚೇತರಿಸಿಕೊಳ್ಳುವ ಭವಿಷ್ಯದ ಕಡೆಗೆ- ಅವಕಾಶಗಳನ್ನು ಬಳಸಿಕೊಳ್ಳುವುದು ಮತ್ತು ಎಲ್ಲರಿಗೂ ಹಕ್ಕುಗಳು ಮತ್ತು ಆಯ್ಕೆಗಳನ್ನು ಖಾತರಿಪಡಿಸುವುದು). ಅಂದಹಾಗೆ, ಚೀನಾ ಮತ್ತು ಭಾರತದಂತಹ ದೇಶಗಳು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಇವೆರಡೂ ಸುಮಾರು 3 ಬಿಲಿಯನ್ ಜನಸಂಖ್ಯೆಯನ್ನು ಹೊಂದಿವೆ. ಆದರೆ ಜನಸಂಖ್ಯೆ ಮತ್ತು ವಿಸ್ತೀರ್ಣ ಬಹಳ ಚಿಕ್ಕದಾಗಿರುವ ದೇಶದ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ  

PREV
18
ಸಮುದ್ರದ ಮಧ್ಯದಲ್ಲಿರುವ 2 ಕಂಬಗಳ ಮೇಲೆ ನೆಲೆಗೊಂಡಿದೆ ಪ್ರಪಂಚದ ಅತ್ಯಂತ ಚಿಕ್ಕ ದೇಶ!

ಸೀಲ್ಯಾಂಡ್ ವಿಶ್ವದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಈ ದೇಶವು ಉತ್ತರ ಸಮುದ್ರದಲ್ಲಿದೆ, ಇಂಗ್ಲೆಂಡ್‌ನಿಂದ ಸುಮಾರು 7.5 ಮೈಲಿ ದೂರದಲ್ಲಿದೆ. ಸೀಲ್ಯಾಂಡ್ ನ ಮೇಲ್ಮೈ ವಿಸ್ತೀರ್ಣ 6 ಸಾವಿರ ಚದರ ಅಡಿಗಳಷ್ಟು ಹರಡಿದೆ.

28

ಸೀಲ್ಯಾಂಡ್ ಇಂಗ್ಲೆಂಡ್‌ನ ಸಫೊಲ್ಕ್‌ನ ಉತ್ತರ ಸಮುದ್ರ ತೀರದಿಂದ ಸುಮಾರು 13 ಕಿಲೋಮೀಟರ್‌ಗಳಷ್ಟು ಪಾಳುಬಿದ್ದ ಸಮುದ್ರ ಕೋಟೆಯ ಮೇಲೆ ನೆಲೆಗೊಂಡಿದೆ. ಈ ದೇಶವು ತುಂಬಾ ಚಿಕ್ಕದಾಗಿದೆ, ಅದನ್ನು Google ಮ್ಯಾಪ್‌ನಲ್ಲೂ ಕಂಡುಹಿಡಿಯಲು ಸಾಧ್ಯವಿಲ್ಲ.
 

38

ಈ ಸೈಟ್ ಅನ್ನು 1943 ರಲ್ಲಿ ಬ್ರಿಟನ್ ವಿಶ್ವ ಸಮರ II ರ ಸಮಯದಲ್ಲಿ ವಿಮಾನ ವಿರೋಧಿ ರಕ್ಷಣಾತ್ಮಕ ಗನ್ ವೇದಿಕೆಯಾಗಿ ನಿರ್ಮಿಸಿತು. ಮೈಕ್ರೋ ನೇಷನ್ ಎಂದು ಕರೆಯಲ್ಪಡುವ ಸೀಲ್ಯಾಂಡ್ ಅನ್ನು ವಿವಿಧ ಜನರು ಆಕ್ರಮಿಸಿಕೊಂಡಿದ್ದಾರೆ. ಆದಾಗ್ಯೂ, ಇದನ್ನು ಸೆಪ್ಟೆಂಬರ್ 2, 1967 ರಂದು ಇಂಗ್ಲೆಂಡ್ ಸ್ವತಂತ್ರಗೊಳಿಸಿತು.
 

48

ವಾಸ್ತವವಾಗಿ, 1967 ರಲ್ಲಿ, ರಾಯ್ ಬೇಟ್ಸ್ ಎಂಬ ಮೇಜರ್ ಸೀಲ್ಯಾಂಡ್ ಅನ್ನು ವಶಪಡಿಸಿಕೊಂಡರು. ನಂತರ ಇದನ್ನು ಇಂಗ್ಲೆಂಡಿನಿಂದ ಪ್ರತ್ಯೇಕ ಸ್ವತಂತ್ರ ದೇಶವೆಂದು ಘೋಷಿಸಲಾಯಿತು. ಅದರ ನಂತರ ರಾಯ್ ಬೇಟ್ಸ್ ತನ್ನ ಕುಟುಂಬದೊಂದಿಗೆ ಇಲ್ಲಿ ವಾಸಿಸಲು ಪ್ರಾರಂಭಿಸಿದರು.
 

58

ಇದರ ನಂತರ, ರಾಯ್ ಬೇಟ್ಸ್ ಅಕ್ಟೋಬರ್ 2012 ರಲ್ಲಿ ನಿಧನರಾದರು. ಬಳಿಕ ಅವರ ಮಗ ಮೈಕೆಲ್ ಬೇಟ್ಸ್ ತನ್ನನ್ನು ಸೀಲ್ಯಾಂಡ್ ರಾಜಕುಮಾರ ಎಂದು ಘೋಷಿಸಿಕೊಂಡರು. ಮೈಕೆಲ್ ಬೇಟ್ಸ್ ಈಗ ಇಲ್ಲಿ ಪತ್ನಿ ಲಾರೆನ್ ಮತ್ತು ಮಗಳು ಕಾರ್ಲೋಟ್ ಜೊತೆ ವಾಸಿಸುತ್ತಿದ್ದಾರೆ. ಈ ಪಾಳುಬಿದ್ದ ಕೋಟೆಯನ್ನು ಸೀಲ್ಯಾಂಡ್ ಜೊತೆಗೆ ರಫ್ ಫೋರ್ಟ್ ಎಂದೂ ಕರೆಯುತ್ತಾರೆ.

68

ರಾಯ್ ಬೇಟ್ಸ್ ಸೀಲ್ಯಾಂಡ್‌ಗಾಗಿ ಅಂಚೆ ಚೀಟಿಗಳು, ಪಾಸ್‌ಪೋರ್ಟ್‌ಗಳು ಮತ್ತು ಅವರ ಸ್ವಂತ ಕರೆನ್ಸಿಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಸೀಲ್ಯಾಂಡ್ ಕರೆನ್ಸಿಯಲ್ಲಿ, ರಾಯ್ ಬೇಟ್ಸ್ ಅವರ ಪತ್ನಿ ಜಾನ್ ಬೇಟ್ಸ್ ಅವರ ಚಿತ್ರವಿದೆ. ಈ ದೇಶವು ತನ್ನದೇ ಆದ ಧ್ವಜವನ್ನು ಹೊಂದಿದೆ, ಇದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣದ್ದಾಗಿದೆ.

78

ಸಮುದ್ರದ ಮಧ್ಯದಲ್ಲಿ ನೆಲೆಗೊಂಡಿರುವ ಸೀಲ್ಯಾಂಡ್‌ನ ಆರ್ಥಿಕತೆಯು ಸಂಪೂರ್ಣವಾಗಿ ದೇಣಿಗೆಯ ಮೇಲೆ ನಿಂತಿದೆ. ಜನರು ಸೀಲ್ಯಾಂಡ್ ಬಗ್ಗೆ ತಿಳಿದುಕೊಂಡಂತೆ, ಅವರು ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಈ ದೇಶದ ಬಗ್ಗೆ ತಿಳಿದ ಅನೇಕ ಮಂದಿ ಸಾಮಾಜಿಕ ಜಾಲತಾಣಗಳಲ್ಲೂ ಹುಡುಕಾಡುತ್ತಿದ್ದಾರೆ.

88

ಅಂತರಾಷ್ಟ್ರೀಯ ಮಟ್ಟದಲ್ಲಿ ಸೀಲ್ಯಾಂಡ್ ಇನ್ನೂ ದೇಶವಾಗಿ ಗುರುತಿಸಲ್ಪಟ್ಟಿಲ್ಲ ಎಂಬುವುದು ಉಲ್ಲೇಖನೀಯ. ಅಂದಹಾಗೆ, ವಿಶ್ವದ ಅತ್ಯಂತ ಚಿಕ್ಕ ದೇಶ ವ್ಯಾಟಿಕನ್ ಸಿಟಿ, ಇದು 0.44 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆ ಸುಮಾರು 800.

click me!

Recommended Stories