ಮಾಲ್ಡೀವ್ಸ್ ಮರೆತುಬಿಡಿ, ಲಕ್ಷದ್ವೀಪಕ್ಕೆ ಲೈಕ್ ಹಾಕಿ; ಸೋಶ್ಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಅಬ್ಬರ

Published : Jan 08, 2024, 05:23 PM IST

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಖ್ಯಾತೆ ತೆಗೆದಿತ್ತು. ಭಾರತೀಯರು ಕೊಳಕರು ಎಂದು ಸೂಚಿಸುವ ಮಾಲ್ಡೀವ್ಸ್‌ನ ಪಿಪಿಎಂ ಸದಸ್ಯ ಮಾಡಿದ ಜನಾಂಗೀಯ ಹೇಳಿಕೆಗೆ ಹಲವಾರು ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದರು.  ಈ ಸಂಬಂಧ ಟ್ರೋಲ್ ಪೇಜ್‌ಗಳು  ಕೂಡಾ ಲಕ್ಷದ್ವೀಪ, ಉಡುಪಿ ಸೇರಿದಂತೆ ನಮ್ಮ ದೇಶದ ಸುಂದರ ಸಮುದ್ರ ತಾಣಗಳನ್ನು ಪ್ರಮೋಟ್ ಮಾಡಲು ತೊಡಗಿವೆ. ಜೊತೆಗೇ ಬೈಕಾಟ್ ಮಾಲ್ಡೀವ್ಸ್‌ ಟ್ರೆಂಡ್‌ಗೆ ಕೈ ಜೋಡಿಸಿವೆ.  

PREV
18
ಮಾಲ್ಡೀವ್ಸ್ ಮರೆತುಬಿಡಿ, ಲಕ್ಷದ್ವೀಪಕ್ಕೆ ಲೈಕ್ ಹಾಕಿ; ಸೋಶ್ಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಅಬ್ಬರ

'ನಮಗೆ ಮಾಲ್ಡೀವ್ಸ್‌ನಲ್ಲಿ ಆಸಕ್ತಿ ಇಲ್ಲ. ಏಕೆಂದರೆ ನಮಗೆ ನಮ್ಮದೇ ಆದ ಸಾಗರ ಸೌಂದರ್ಯವಿದೆ- ಲಕ್ಷದ್ವೀಪ

ಮಾಲ್ಡೀವ್ಸ್ ಬೈಕಾಟ್ ಮಾಡಿ, ಲಕ್ಷದ್ವೀಪ ಎಕ್ಸ್‌ಪ್ಲೋರ್ ಮಾಡಿ- ಏಕೆಂದರೆ ಲಕ್ಷದ್ವೀಪವು ಮಾಲ್ಡೀವ್ಸ್‌ಗಿಂತ ಎಷ್ಟೋ ಪಾಲು ಚೆನ್ನಾಗಿದೆ.'

28

ನಂಬಿದ್ರೆ ನಂಬಿ, ಬಿಟ್ರೆ ಬಿಡಿ- ಇದು ಮಾಲ್ಡೀವ್ಸ್ ಅಲ್ಲ, ಆಂಧ್ರಪ್ರದೇಶದ ಕಕಿನಾಡದಲ್ಲಿರುವ ಸೌಂದರ್ಯದ ಖನಿ ಹೋಪ್ ಐಲ್ಯಾಂಡ್. 

38

ನಮ್ಮದೇ ಆದ ಸುಂದರ ದ್ವೀಪ ಇರುವಾಗ ಮಾಲ್ಡೀವ್ಸ್‌ಗೆ ಹೋಗೋದೇಕೆ? ಲಕ್ಷದ್ವೀಪಕ್ಕೆ ಹೋಗೋಕೆ ಯಾವುದೇ ಪಾಸ್ಪೋರ್ಟ್, ವೀಸಾ ಬೇಕಾಗಿಲ್ಲ!

48

ಮಾಲ್ಡೀವ್ಸ್ ವಿರುದ್ಧ ತಿರುಗಿ ಬಿದ್ದು, ಭಾರತದ ತಾಣಗಳನ್ನು ಪ್ರಮೋಟ್ ಮಾಡುತ್ತಿರುವ ಬಾಲಿವುಡ್, ಕ್ರಿಕೆಟ್ ಸೆಲೆಬ್ರಿಟಿಗಳು. ನಮ್ಮ ನಟರ ಮೇಲೆ ಹೆಚ್ಚಿದೆ ಗೌರವ ಎಂದ ಟ್ರೋಲ್ ಪೇಜ್‌ಗಳು

58

ಮಾಲ್ಡೀವ್ಸ್ ಸಚಿವರ ಜನಾಂಗೀಯ ನಿಂದನೆಯಿಂದಾಗಿ ಇನ್ನು ಲಕ್ಷದ್ವೀಪದ ಹೋಟೆಲ್ ಮಾಲೀಕರು ಲಕ್ಷಲಕ್ಷವನ್ನು ದಿನದಲ್ಲೇ ದುಡಿದರೆ, ಮಾಲ್ಡೀವ್ಸ್ ಹೋಟೆಲ್ ಮಾಲಿಕರಿಗೆ ಕಣ್ಣೀರೊಂದೇ ಗತಿ ಎನ್ನುತ್ತಿದೆ ಈ ಟ್ರೋಲ್.. 

68

ಲಕ್ಷದ್ವೀಪದಲ್ಲಿ ಮೋದಿಯ ಫೋಟೋಗಳು ಮಾಲ್ಡೀವ್ಸ್‌ನ ಪ್ರಕೃತಿ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲವಾಗಿಸಿವೆ!

78

ಲಕ್ಷದ್ವೀಪ ಕರೆಯುತ್ತಿದೆ, ದ್ವೀಪವನ್ನು ಎಕ್ಸ್‌ಪ್ಲೋರ್ ಮಾಡುವ ಸಮಯ.. ಈ ಸುಂದರ ದ್ವೀಪಕ್ಕೆ ಹೋಗುವವರು ನನ್ನನ್ನೂ ನಿಮ್ಮೊಂದಿಗೆ ಸೇರಿಸಿಕೊಳ್ಳಿ..

88

ಕರ್ನಾಟಕದ ಉಡುಪಿಯೂ ಯಾವ ಮಾಲ್ಡೀವ್ಸ್‌ಗೂ ಕಡಿಮೆ ಇಲ್ಲ. ಲಕ್ಷದ್ವೀಪ, ಉಡುಪಿಗೆ ಪ್ರವಾಸ ಪ್ಲ್ಯಾನ್ ಮಾಡಲು ಟ್ರೋಲ್ ಪೇಜ್‌ಗಳು ಉತ್ತೇಜಿಸುತ್ತಿವೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories