ಹಾರುವ ವಿಮಾನದಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟ ಭಾರತೀಯ ಉದ್ಯಮಿ! ವಿಡಿಯೋ ವೈರಲ್

Published : Nov 27, 2023, 03:38 PM IST

ದುಬೈನಲ್ಲಿ ಭಾರತೀಯ ಮೂಲದ ಉದ್ಯಮಿ ಮಗಳ ವಿಶಿಷ್ಟ ಮದುವೆ ನಡೆದಿದೆ. ಮದುವೆಗಾಗಿಯೇ ಬೋಯಿಂಗ್ 747 ವಿಮಾನವನ್ನು ತಮಗೆ ಬೇಕಾದ ರೀತಿಯಲ್ಲಿ ನವೀಕರಣಗೊಳಿಸಿ 3 ಗಂಟೆಗಳ ಪ್ರಯಾಣದಲ್ಲಿ ವಿಮಾನದೊಳಗೆ ಮಗಳ ಮದುವೆ ಮಾಡಿ ಕೊಟ್ಟಿದ್ದಾರೆ.

PREV
16
ಹಾರುವ ವಿಮಾನದಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟ ಭಾರತೀಯ ಉದ್ಯಮಿ! ವಿಡಿಯೋ ವೈರಲ್

ದುಬೈನಲ್ಲಿ ನಡೆದ ವಿಶಿಷ್ಟ ಆಚರಣೆಯಲ್ಲಿ, ಭಾರತೀಯ ದಂಪತಿಗಳಾದ ವಿಧಿ ಪಾಪ್ಲಿ ಮತ್ತು ಹೃದೇಶ್ ಸೈನಾನಿ ಅಸಾಧಾರಣ ರೀತಿಯಲ್ಲಿ  ಮದುವೆಯಾಗಿದ್ದಾರೆ.  ನವೆಂಬರ್ 24 ರಂದು ಮಾರ್ಪಡಿಸಿದ ಬೋಯಿಂಗ್ 747 ವಿಮಾನದಲ್ಲಿ ನಡೆಸಲಾಯಿತು. ಈ ಮದುವೆಯನ್ನು  ವಧುವಿನ ತಂದೆ, ಭಾರತೀಯ ಮೂಲದ  ಯುಎಇ ಪ್ರಮುಖ  ಉದ್ಯಮಿ ದಿಲೀಪ್ ಪೋಪ್ಲಿ ಆಯೋಜಿಸಿದ್ದರು. 

26

ನಿಕಟ ಸ್ನೇಹಿತರು, ಆಪ್ತರು, ಕುಟುಂಬ ಸದಸ್ಯರು ಮತ್ತು ಮಾಧ್ಯಮ ಸಿಬ್ಬಂದಿ ಸೇರಿದಂತೆ ಸುಮಾರು 350 ಅತಿಥಿಗಳು ಈ ಖಾಸಗಿ ಕಾರ್ಯಕ್ರಮವನ್ನು ವೀಕ್ಷಿಸಲು ದುಬೈ ಸೌತ್‌ನಲ್ಲಿರುವ ಜೆಟೆಕ್ಸ್ ಖಾಸಗಿ ಟರ್ಮಿನಲ್‌ನಲ್ಲಿ ಜಮಾಯಿಸಿದರು.  ಉದ್ಯಮಿ ದಿಲೀಪ್ ಪೋಪ್ಲಿ  ಮಗಳ ಮದುವೆಯನ್ನು ವಿಶೇಷವಾಗಿ ಮಾಡಲು ಕಾರಣ  28 ವರ್ಷಗಳ ಹಿಂದೆ ಇವರು ಕೂಡ ತಮ್ಮದೇ ಆದ ರೀತಿಯಲ್ಲಿ "ಆಕಾಶದಲ್ಲಿ ಮದುವೆ" ಮೂಲಕ ಸುದ್ದಿ ಮಾಡಿದ್ದರು. ಏರ್ ಇಂಡಿಯಾ ವಿಮಾನವನ್ನು ಮದುವೆಯ ಸ್ಥಳವಾಗಿ ಪರಿವರ್ತಿಸಿದ್ದರು. 1994 ರಲ್ಲಿ ಅವರ ತಂದೆ ಲಕ್ಷ್ಮಣ್ ಪಾಪ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಾಹವಾದರು.

36

ಯುಎಇ ಮತ್ತು ಭಾರತದಲ್ಲಿನ ಆಭರಣ ಮತ್ತು ವಜ್ರದ ಮಳಿಗೆಗಳ ಪ್ರತಿಷ್ಠಿತತೆಗೆ ಹೆಸರುವಾಸಿಯಾದ ಪೊಪ್ಲಿ ಕುಟುಂಬವು ದುಬೈನಿಂದ ಒಮಾನ್‌ಗೆ ಮೂರು ಗಂಟೆಗಳ ಪ್ರಯಾಣದ ಸಮಯದಲ್ಲಿ  ಅಸಾಮಾನ್ಯವಾಗಿ ಮಗಳ ವಿವಾಹವನ್ನು ಆಯೋಜಿಸಿತ್ತು. ಇದೊಂದು ವಿಶೇಷವಾದ 'ಗಾಳಿಯಲ್ಲಿ ಮದುವೆ'ಯನ್ನು ಆಯೋಜಿಸಿತ್ತು.

46

ರೋಮಾಂಚನಕಾರಿಯಾದ ಲೆಹೆಂಗಾಗಳು ಮತ್ತು ಸ್ಟೈಲಿಶ್ ಕುರ್ತಾಗಳಲ್ಲಿ ಅಲಂಕೃತಗೊಂಡ ಅತಿಥಿಗಳು, ತುಂಬಾ ಉತ್ಸಾಹದಿಂದ, ನಗುತ್ತಾ, ಕೈಬೀಸುತ್ತಾ, ಉತ್ಸಾಹಭರಿತ ಬಾಲಿವುಡ್ ಹಾಡುಗಳನ್ನು ಹಾಡುತ್ತಾ.  ಮದುವೆಯ ಮೆರವಣಿಗೆ ನಡೆಸಿದರು.  ದುಬೈನ ಅಲ್ ಮಕ್ತೌಮ್ ವಿಮಾನ ನಿಲ್ದಾಣದ ಬಳಿಯಿರುವ ಜೆಟೆಕ್ಸ್ ವಿಐಪಿ ಟರ್ಮಿನಲ್‌ಗೆ ಆಗಮಿಸಿ ಮದುವೆ ಮೆರವಣಿಗೆ ಅದ್ದೂರಿಯಾಗಿ ಬರುವ ಮದುವೆಯ ಶಾಸ್ತ್ರಗಳು ಪ್ರಾರಂಭವಾದವು. ಬೋರ್ಡಿಂಗ್ ಮಾಡುವ ಮೊದಲು, ಅತಿಥಿಗಳು ತಮ್ಮ ಬೋರ್ಡಿಂಗ್ ಪಾಸ್‌ಗಳೊಂದಿಗೆ ಆ ಕ್ಷಣಗಳನ್ನು ಕ್ಯಾಮಾರಾದಲ್ಲಿ ಸೆರೆಹಿಡಿದರು, ನಂತರ ಸಂಪೂರ್ಣ ಮದುವೆ ಶಾಸ್ತ್ರದ ಸಮಾರಂಭವು ವಿಮಾನದಲ್ಲೇ ನಡೆಯಿತು. 

56

ವಿವಾಹ ಸಮಾರಂಭಕ್ಕಾಗಿ ವಿಮಾನವನ್ನು ವಿಶೇಷವಾಗಿ ಕಸ್ಟಮೈಸ್ ಮಾಡಲಾಗಿತ್ತು. ಪ್ರತಿ ವಿಭಾಗವು ಸಣ್ಣ ಪ್ರೊಜೆಕ್ಟರ್‌ನೊಂದಿಗೆ ಸುಸಜ್ಜಿತವಾಗಿತ್ತು. ಪ್ರತಿಯೊಬ್ಬರೂ ಕೂಡ ಶಾಸ್ತ್ರದ ಪ್ರಕ್ರಿಯೆಗಳಿಗೆ ಸಾಕ್ಷಿಯಾಗಲು ಅನುವು ಮಾಡಿಕೊಡುವಂತಿತ್ತು. ಸಮಾರಂಭವು ಆರಂಭವಾದಂತೆ ಅತಿಥಿಗಳು ಸ್ಟ್ಯಾಂಡರ್ಡ್ ಬ್ರೆಡ್ ಮತ್ತು ಬೆಣ್ಣೆಯ ಜೊತೆಗೆ ತರಕಾರಿ ಝಲ್ಫ್ರಾಜಿ, ಮಶ್ರೂಮ್ ಪುಲಾವ್, ಪಾಲಕ್ ಪನೀರ್ ಮತ್ತು ದಾಲ್ ಮಸಾಲದಂತಹ ಭಕ್ಷ್ಯಗಳನ್ನು ಒಳಗೊಂಡಂತೆ ಎಲ್ಲವೂ  ವಿಮಾನದೊಳಗೆ ಸಿದ್ದಪಡಿಸಲಾಗಿತ್ತು.

66

ವಿಮಾನದ ಒಳಗೆ ಅತಿಥಿಗಳು ಬಾಲಿವುಡ್ ಟ್ಯೂನ್‌ಗಳಿಗೆ ನೃತ್ಯ ಮಾಡುವುದರೊಂದಿಗೆ ಉತ್ಸಾಹಭರಿತ ವಾತಾವರಣವು ಮುಂದುವರೆಯಿತು. ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು, ವಿಡಿಯೋದ ಕೊನೆಯಲ್ಲಿ, ವರನು ತನ್ನ ಮಾವ ಮತ್ತು ಅವನ ತಂದೆಗೆ ಧನ್ಯವಾದಗಳನ್ನು ಅರ್ಪಿಸುತ್ತಾನೆ. ವಧು ಕೂಡ  ತಾನು ಈ ರೀತಿಯ ಅನುಭವ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾಳೆ.

 

click me!

Recommended Stories