ಕುದುರೆ ಸವಾರಿ ಗೆಳೆಯನ ಮದುವೆಯಾದ ದಿಗ್ಗಜ್ ಬಿಲ್ ಗೇಟ್ಸ್ ಮಗಳು!

Published : Oct 18, 2021, 05:54 PM ISTUpdated : Oct 18, 2021, 05:56 PM IST

ನ್ಯೂಯಾರ್ಕ್(ಅ. 8)  ಮೈಕ್ರೋಸಾಫ್ಟ್ ದಿಗ್ಗಜ ಬಿಲ್‍ಗೇಟ್ಸ್ (Bill Gates) ಮತ್ತು ಮೆಲಿಂಡಾ ಗೇಟ್ಸ್ (Melinda Gates) ಮಗಳು ಜೆನಿಫರ್ ಗೇಟ್ಸ್ (Jeniffer Gates) ತನ್ನ ಕುದುರೆ ಸವಾರಿಯ ಗೆಳೆಯ ನಯೆಲ್ ನಾಸರ್ (Nayel Nassar) ಅವರನ್ನು ವಿವಾಹವಾಗಿದ್ದಾರೆ.

PREV
16
ಕುದುರೆ ಸವಾರಿ ಗೆಳೆಯನ ಮದುವೆಯಾದ ದಿಗ್ಗಜ್ ಬಿಲ್ ಗೇಟ್ಸ್ ಮಗಳು!

ಶನಿವಾರ ಅಮೆರಿಕದ ನ್ಯೂಯಾರ್ಕ್‍ನ ವೆಸ್ಟ್‌ಚೆಸ್ಟರ್ ಕೌಂಟಿಯಲ್ಲಿ ವಿವಾಹ ಸಮಾಂಭ ನಡೆದಿದೆ.  ಅತ್ಯಂತ ಸರಳ ಸಮಾರಂಭದಲ್ಲಿ ಜೋಡಿ ದಾಂಪತ್ಯಕ್ಕೆ ಕಾಲಿರಿಸಿತು.

26

2020ರಲ್ಲಿ ಜೆನಿಫರ್ ಮತ್ತು ನಯೆಲ್ ಅವರ ನಿಶ್ಚಿತಾರ್ಥವಾಗಿತ್ತು. ಸುಮಾರು ಒಂದು ವರ್ಷದ ನಂತರ ಇಬ್ಬರು ಸತಿ-ಪತಿಗಳಾಗಿದ್ದಾರೆ. 

36

ಖ್ಯಾತ ವಸ್ತ್ರ ವಿನ್ಯಾಸಕಿ ವೆರಾ ವಾಂಗ್ ವಿನ್ಯಾಸ ಮಾಡಿರುವ  ಗೌನ್ ಧರಿಸಿ ಗೇಟ್ಸ್ ಮಗಳು ಮಿಂಚಿದರು.  ಜೆನಿಫರ್ ಪೋಷಕರಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಜೊತೆಯಾಗಿ ವಿವಾಹದ ವೇದಿಕೆಗೆ ಕರೆದುಕೊಂಡು ಬಂದರು.

46

ಕುದುರೆ ಸವಾರಿಯ ಸಂದರ್ಭದಲ್ಲಿ  ಇಬ್ಬರಿಗೂ ಪರಿಚಿತರಾಗಿತ್ತು.. ನಯೆಲ್ ಈಜಿಪ್ಟ್ ಮೂಲದವರಾಗಿದ್ದು, ಕುವೈತ್ ನಲ್ಲಿ ಇದ್ದಾರೆ.  ಬಿಲ್ ಗೇಟ್ಸ್ ಮತ್ತು ಮೆಲಿಂಡಾ, ಈ ವರ್ಷ ತಮ್ಮ ದೀರ್ಘ ಕಾಲದ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದಿದ್ದರು. 

56

ಡೀವೋರ್ಸ್  ನಂತರ ಇದೇ ಮೊದಲ ಸಾರಿ ಗೇಟ್ಸ್ ಮತ್ತು ಮೆಲೀಂಡಾ ಒಟ್ಟಾಗಿ ಕಾಣಿಸಿಕೊಂಡಿದ್ದಕ್ಕೂ ವಿವಾಹ ಸಾಕ್ಷಿಯಾಯಿತು.  ಮದುವೆಗೆ ಮೂನ್ನೂರು ಜನರನ್ನು ಆಹ್ವಾನಿಸಲಾಗಿತ್ತು.

66

ಜೆನಿಫರ್ ಗೆ ಸೇರಿದ 124 ಎಕರೆ ಪ್ರದೇಶದ ನ್ಯೂಯಾರ್ಕ್ ಕುದುರೆ ಫಾರ್ಮ್  ಹೌಸ್ ನಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು. ಜೆನಿಫರ್ ಪದವಿ ಪೂರೈಸಿದ ಸಂಭ್ರಮಕ್ಕೆ 16 ಮಿಲಿಯನ್ ಡಾಲರ್ ಮೊತ್ತದ ಈ ಫಾರ್ಮ್ ಹೌಸ್ ನ್ನು  2018 ಗೇಟ್ಸ್  ಕೊಡುಗೆಯಾಗಿ ನೀಡಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories