'ಬಾಳೆಹಣ್ಣಿ'ನಿಂದ ಗಾಯಗೊಂಡಾತನಿಗೆ ಸಿಕ್ತು 4 ಕೋಟಿ ರೂ. ಪರಿಹಾರ!

First Published Oct 10, 2021, 1:17 PM IST

ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸಿತೆಂದರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಆಸ್ಟ್ರೇಲಿಯಾದ(Australia) ಕ್ವೀನ್ಸ್‌ಲ್ಯಾಂಡ್‌ನ((Queensland, Australia) ನಿವಾಸಿಯಾಗಿರುವ ಕಾರ್ಮಿಕನೊಬ್ಬನ ಅದೃಷ್ಟವೂ ಹೀಗೇ ತೆರೆದಿದೆ. 5 ವರ್ಷಗಳ ಹಿಂದೆ ಬಾಳೆ ಹೊಲದಲ್ಲಿ ಕೆಲಸ ಮಾಡುವಾಗ ಬಾಳೆಹಣ್ಣಿನ(Bananas) ಗೊನೆ ಬಿದ್ದು ಆತ ಗಾಯೊಂಡಿದ್ದ. ಹೀಗಿರುವಾಗ ಆತ ಜಮೀನಿನ ಮಾಲೀಕರ ವಿರುದ್ಧ 5 ಮಿಲಿಯನ್ ಡಾಲರ್ ಮೊಕದ್ದಮೆ ಹೂಡಿದ್ದರು. ಈಗ ನ್ಯಾಯಾಲಯ ಈ ಪ್ರಕರಂದ ತೀರ್ಪು ನೀಡಿದೆ. ಮಾಲೀಕರ ತಪ್ಪನ್ನು ಪರಿಗಣಿಸಿ, ನ್ಯಾಯಾಲಯವು 5 ಲಕ್ಷ 2 ಸಾವಿರದ 7 ನೂರು 40 ಡಾಲರ್ ಅಂದರೆ ಸುಮಾರು 4 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ.

ವರದಿಯ ಪ್ರಕಾರ, ಜೂನ್ 2016 ರಲ್ಲಿ, ಜೈಮ್ ಲಾಂಗ್‌ಬೊಟ್ಟಮ್‌ನ ಕೆಲಸಗಾರ ಎಲ್ & ಆರ್ ಕಾಲಿನ್ಸ್ ತೋಟದಲ್ಲಿ ಬಾಳೆ ಕಟಾವು ಮಾಡುತ್ತಿದ್ದ. ಈ ಸಮಯದಲ್ಲಿ ಅವರು ಅಪಘಾತಕ್ಕೀಡಾಗಿದ್ದರು.

ವಾಸ್ತವವಾಗಿ, ಕುಕ್‌ಟೌನ್ ಬಳಿಯ ಹೊಲದಲ್ಲಿ ಬಾಳೆಗಿಡಗಳ ಬಳಿ ಕೆಲಸ ಮಾಡುತ್ತಿದ್ದಾಗ, ಬಾಳೆಹಣ್ಣಿನ ಗೊನೆ ಜೈಮ್‌ನ ಭುಜದ ಮೇಲೆ ಬಿದ್ದು ಅವನು ನೆಲಕ್ಕೆ ಅಪ್ಪಳಿಸಿದ್ದ.

ಈ ಅಪಘಾತದಲ್ಲಿ ಗಾಯಗೊಂಡ ಜೈಮ್ ಲಾಂಗ್‌ಬೊಟ್ಟಮ್ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅಲ್ಲಿ ಅವರು ಹಲವಾರು ದಿನಗಳವರೆಗೆ ಚಿಕಿತ್ಸೆ ಪಡೆದರು. ಆದರೆ ಈ ಅಪಘಾತದಿಂದ ಅದೆಷ್ಟು ಗಾಯವಾಗಿತ್ತೆಂದರೆ, ಮುಂದೆಂದೂ ಆತ ಕೆಲಸ ಮಾಡಲಾಗದ ಪರಿಸ್ಥಿತಿಗೆ ತಲುಪಿದ್ದ.

ತನಗೆ ಈ ಕೆಲಸ ಮಾಡಲು ಯಾವುದೇ ತರಬೇತಿಯನ್ನು ನೀಡಲಿಲ್ಲ ಮತ್ತು ದೊಡ್ಡ ಬಾಳೆಗಿಡಗಳಿಂದ ಗೊನೆ ಹೇಗೆ ಸಂಗ್ರಹಿಸಬೇಕು ಎಂದು ಹೇಳಿಕೊಟ್ಟಿರಲಿಲ್ಲ. ಕಂಪನಿಯ ನಿರ್ಲಕ್ಷ್ಯದಿಂದ ತನಗೆ ಈ ಪರಿಸ್ಥಿಗೆ ಬಂದೊದಗಿದೆ ಎಂದು ವಾದಿಸಿದ್ದರು. 

ಈ ಘಟನೆಯ ನಂತರ, ಕಾರ್ಮಿಕ 2016 ರಲ್ಲಿ ಜಮೀನಿನ ಮಾಲೀಕರ ವಿರುದ್ಧ 5 ಲಕ್ಷ ಡಾಲರ್ ಮೊಕದ್ದಮೆ ಹೂಡಿದರು. 5 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿದ ನಂತರ, ತೀರ್ಪು ಈ ಕಾರ್ಮಿಕನ ಪರವಾಗಿ ಬಂದಿದೆ.

banana general

ನ್ಯಾಯಾಲಯದಲ್ಲಿ, ನ್ಯಾಯಮೂರ್ತಿ ಕ್ಯಾಥರೀನ್ ಹೋಮ್ಸ್ ತೀರ್ಪು ನೀಡುವಾಗ, "ಬಾಳೆಗಿಡ ಭಾರೀ ಎತ್ತರವಾಗಿದೆ ಮತ್ತು ಬಾಳೆಗೊನೆಯೂ ಬಹಳ ಎತ್ತರದಲ್ಲಿತ್ತು. ಅಲ್ಲದೇ ಈ ಬಾಳೆಗೊನೆ ತೂಕ ಸುಮಾರು ಎಪ್ಪತ್ತು ಕೆಜಿ ಇತ್ತು. ಹೀಗಾಗಿ ಎತ್ತರದಿಂದ ಇಷ್ಟು ತೂಕದ ಬಾಳೆಗೊನೆ ಬಿದ್ದಾಗ ಕಾರ್ಮಿಕ ಗಾಯಗೊಂಡು, ಇವತ್ತಿಗೂ ಆತ ಕೆಲಸಕ್ಕೆ ಹೀಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಜಮೀನಿನ ಮಾಲೀಕರು ತಪ್ಪಿತಸ್ಥರೆಂದು ಕಂಡುಕೊಂಡ ನ್ಯಾಯಾಲಯ, ಆತನಿಗೆ 502,740 ಡಾಲರ್ ಅಂದರೆ ರೂ. 3,77,15,630 ಪಾವತಿಸುವಂತೆ ಆದೇಶಿಸಿತು. ನ್ಯಾಯಾಲಯದ ನಿರ್ಧಾರದ ನಂತರ ಕಾರ್ಮಿಕ ತುಂಬಾ ಸಂತೋಷಗೊಂಡಿದ್ದಾರೆ.

click me!