Bill Gates on Jeffrey Epstein: ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ಜಗತ್ತಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಲ್ಸ್, ಜೆಫ್ರಿ ಎಫ್‌ಸ್ಟೀನ್ ಜತೆಗಿನ ಒಡನಾಟ ಹಾಗೂ ತಮ್ಮ ಅಕ್ರಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಹೇಳಿದ್ದೇನು? ನೋಡೋಣ ಬನ್ನಿ
ಮೂರು ಮಹಿಳೆಯರ ಜತೆ ವಿವಾಹೇತರ ಸಂಬಂಧವಿಟ್ಟುಕೊಂಡಿದ್ದ ಬಿಲ್ ಗೇಟ್ಸ್
‘ನಾನು 3 ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೆ. ಲೈಂಗಿಕ ಶೋಷಣೆ ಹಗರಣದ ಆರೋಪಿ ಜೆಫ್ರಿ ಎಪ್‌ಸ್ಟೀನ್ ಇದೇ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ’ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
26
ತಮ್ಮ ಖಾಸಗಿ ಬದುಕಿನ ಹಲವು ಸತ್ಯ ಬಾಯ್ಬಿಟ್ಟ ಬಿಲ್ ಗೇಟ್ಸ್
ಅಮೆರಿಕದ ಇತಿಹಾಸದ ಅತಿದೊಡ್ಡ ಲೈಂಗಿಕ ಹಗರಣದ ಪ್ರಮುಖ ರೂವಾರಿ ಎಪ್‌ಸ್ಟೈನ್‌ನ ಜಾಲ ಮತ್ತು ಒಡನಾಡಿಗಳ ಕುರಿತು ತನಿಖೆ ನಡೆಸುತ್ತಿರುವ ಅಮೆರಿಕದ ಕಾಂಗ್ರೆಸ್ ಪ್ರತಿನಿಧಿಗಳ ಸಭೆಯ ಮೇಲ್ವಿಚಾರಣಾ ಸಮಿತಿ ಮುಂದೆ ಈ ಹೇಳಿಕೆ ನೀಡಿದ್ದಾರೆ.
36
ತಮ್ಮ ಅಕ್ರಮ ಸಂಬಂಧದ ಬಗ್ಗೆ ಬಾಯ್ಬಿಟ್ಟ ಬಿಲ್ ಗೇಟ್ಸ್
ಜೂ.10ರಂದು ಸಮಿತಿ ಮುಂದೆ ಸ್ವಯಂಪ್ರೇರಿತರಾಗಿ ಹಾಜರಾದ ಗೇಟ್ಸ್, ‘ರಷ್ಯಾದ ಕಾರ್ಡ್ಸ್ ಆಟಗಾರ್ತಿ ಮಿಲಾ ಆ್ಯಂಟೊನೋವಾ ಹಾಗೂ ಅಣು ಭೌತವಿಜ್ಞಾನಿ ಕರಿಮಾ ನಿಗ್ಮತುಲಿನಾ ಜತೆಗೆ ನನಗೆ ವಿವಾಹೇತರ ಸಂಬಂಧ ಇತ್ತು. ಅದು ಎಪ್‌ಸ್ಟೀನ್‌ಗೆ ಗೊತ್ತಿತ್ತು. ಬಳಿಕ ವೈದ್ಯಕೀಯ ಉದ್ಯಮಿ ಅಲೈಸ್ ಜಾಕೋಬ್ಸ್ ನೆಸೆಲ್ರೋಡ್ ಜತೆಗೂ ನಾನು ಸಂಬಂಧ ಹೊಂದಿದ್ದೆ.
ಕುಟುಂಬಕ್ಕೆ ನಾನು ಮಾಡಿದ ದ್ರೋಹವನ್ನು ಎಪ್‌ಸ್ಟೀನ್ ನನ್ನ ವಿರುದ್ಧ ಬಳಸಲು ಮುಂದಾಗಿದ್ದ. ಅದರ ಮೇಲೆ ಆತ ಇನ್ನಷ್ಟು ಕಥೆಗಳನ್ನು ಬೇರೆ ಪೋಣಿಸಿದ್ದ. ಈ ಮೂಲಕ ಆತನ ಜತೆಗೆ ಮತ್ತೆ ಸಂಪರ್ಕದಲ್ಲಿರುವಂತೆ ಒತ್ತಡ ಹೇರಿದ್ದ’ ಎಂದರು.
56
ಅಕ್ರಮ ಸಂಬಂಧಕ್ಕೂ ಎಫ್‌ಸ್ಟೀನ್ ಜತೆಗಿನ ಒಡನಾಟಕ್ಕೂ ಯಾವುದೇ ಸಂಬಂಧವಿಲ್ಲ
‘ಈ ಸಂಬಂಧಗಳಿಗೂ ಎಪ್‌ಸ್ಟೀನ್ ಜತೆಗಿನ ಮಾತುಕತೆಗೂ ಯಾವುದೇ ಸಂಬಂಧ ಇಲ್ಲ. ಆತನ ಯಾವುದೇ ಅಪರಾಧಗಳಲ್ಲಿ ನನ್ನ ಪಾತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದ ಗೇಟ್ಸ್, ಆತನ ಜತೆಗೆ ಸಂಪರ್ಕ ಉಳಿಸಿಕೊಂಡಿದ್ದು ನಾನು ಮಾಡಿದ ತಪ್ಪು ಎಂದು ಹೇಳಿಕೊಂಡರು.
66
ಸೀಮಿತ ಅವಧಿಗಷ್ಟೇ ಎಫ್‌ಸ್ಟೀನ್ ಭೇಟಿಯಾಗಿದ್ದೆ ಎಂದ ಗೇಟ್ಸ್
ಆತ ಶಿಕ್ಷೆಗೆ ಗುರಿಯಾಗಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಇತ್ತು. ನಾನು ಆತನನ್ನು ಸೀಮಿತ ಅವಧಿಯ ಭೇಟಿಗಷ್ಟೇ ಅವಕಾಶ ನೀಡಿದ್ದೆ, ಆತನ ಜತೆಗಿನ ಭೇಟಿ ಬಹುತೇಕ ದಾನದ ವಿಚಾರಕ್ಕೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ