ಬಿಕಿನಿಯಲ್ಲಿ ಓಡಾಡಿದರೆ, ಬೀಚ್‌ನಿಂದ ಚಿಪ್ಪು ಹೆಕ್ಕಿ ತೆಗೆದರೂ ಅಪರಾಧ, ಇಷ್ಟೇ ಅಲ್ಲ ಚಪ್ಪಲಿ ಹಾಕಿ ಡ್ರೈವಿಂಗ್ ಮಾಡಿದರೂ ಬೀಳುತ್ತೆ ಫೈನ್. ಈ ವಿಚಿತ್ರ ಕಾನೂನುಗಳು ಎಲ್ಲಿದೆ? ಈ ಬಗ್ಗೆ ಈಗ ತಿಳಿಯೋಣ.
ವಿದೇಶ ಪ್ರವಾಸ ಅಂದಾಕ್ಷಣ ಸ್ವಾತಂತ್ರ್ಯ, ಬೀಚ್‌ಗಳು, ಪಾರ್ಟಿಗಳು ಮೊದಲು ನೆನಪಾಗುತ್ತವೆ. ಆದರೆ ಯುರೋಪ್‌ನ ಕೆಲವು ದೇಶಗಳಲ್ಲಿ ಪ್ರವಾಸಿಗರು ನಿಯಮಗಳನ್ನು ತಿಳಿದುಕೊಂಡು ಹೋಗಲೇಬೇಕು. ಇಲ್ಲದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ. ನ್ಯಾಯ, ಕಾನೂನುಗಳು ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿ ಇರುತ್ತವೆ. ಒಂದು ಕಡೆ ಅಪರಾಧವಾದದ್ದು, ಇನ್ನೊಂದು ಕಡೆ ಅಪರಾಧ ಆಗಿರುವುದಿಲ್ಲ.
25
ಹೆಚ್ಚುತ್ತಿರುವ ಪ್ರವಾಸೋದ್ಯಮ..
ಇತ್ತೀಚೆಗೆ ಯುರೋಪ್ ದೇಶಗಳಲ್ಲಿ ಪ್ರವಾಸೋದ್ಯಮ ಹೆಚ್ಚಿದೆ. ಬೇಸಿಗೆಯಲ್ಲಿ ಸಣ್ಣ ನಗರಗಳು, ದ್ವೀಪಗಳು ಲಕ್ಷಾಂತರ ಪ್ರವಾಸಿಗರಿಂದ ತುಂಬಿರುತ್ತವೆ. ಇದರಿಂದ ಸ್ಥಳೀಯರ ಜೀವನಕ್ಕೆ ತೊಂದರೆಯಾಗುತ್ತಿದೆ. ಶಬ್ದ ಮಾಲಿನ್ಯ, ಕಸ ಹೆಚ್ಚುತ್ತಿದೆ. ಹೀಗಾಗಿ ಯೂರೋಪ್‌ನ ಹಲವು ದೇಶಗಳಲ್ಲಿ ಕಠಿಣ ನಿಯಮಗಳು ಜಾರಿಯಾಗುತ್ತಿದೆ. ಇದರ ಅರಿವಿಲ್ಲದ ಪ್ರವಾಸಿಗರು ದುಬಾರಿ ದಂಡ ಕಟ್ಟುತ್ತಿದ್ದಾರೆ.
35
ಬೀಚ್‌ಗೆ ಮಾತ್ರ ಬಿಕಿನಿ ಸೀಮಿತ
ಸ್ಪೇನ್, ಇಟಲಿ, ಫ್ರಾನ್ಸ್, ಕ್ರೊಯೇಷಿಯಾದಂತಹ ದೇಶಗಳಲ್ಲಿ ಬಿಕಿನಿ ಅಥವಾ ಸ್ವಿಮ್‌ಸೂಟ್ ಅನ್ನು ಬೀಚ್‌ನಲ್ಲಿ ಮಾತ್ರ ಧರಿಸಬೇಕು. ಇನ್ನು ಬಾರ್ಸಿಲೋನಾ, ವೆನಿಸ್‌ನಂತಹ ನಗರಗಳ ಬೀದಿಗಳಲ್ಲಿ ಬಿಕಿನಿಯಲ್ಲಿ ತಿರುಗಿದರೆ ಭಾರಿ ದಂಡ ವಿಧಿಸಲಾಗುತ್ತದೆ. ಅಪ್ಪಿ ತಪ್ಪಿ ಈ ದೇಶಗಳಿಗೆ ಪ್ರವಾಸ ಮಾಡಿದಾಗ ನಿಯಮ ಪಾಲಿಸಲು ಮರೆಯಬೇಡಿ.
ಯುರೋಪ್ ದೇಶಗಳಲ್ಲಿ ಡ್ರೈವಿಂಗ್ ಜವಾಬ್ದಾರಿಯುತ ವಿಷಯ. ಸ್ಪೇನ್, ಗ್ರೀಸ್, ಇಟಲಿಯಂತಹ ದೇಶಗಳಲ್ಲಿ ಚಪ್ಪಲಿ ಅಥವಾ ಫ್ಲಿಪ್-ಫ್ಲಾಪ್ ಧರಿಸಿ ವಾಹನ ಚಲಾಯಿಸುವುದು ಅಪರಾಧ. ಹೀಗೆ ಮಾಡಿದರೆ 25 ರಿಂದ 30 ಸಾವಿರದವರೆಗೆ ದಂಡ ಬೀಳುತ್ತದೆ. ಇದು ಅಪಘಾತಕ್ಕೆ ಕಾರಣವಾಗಲಿದೆ. ಹೀಗಾಗಿ ಡ್ರೈವಿಂಗ್ ಅತ್ಯಂತ ಗಂಭೀರ ವಿಚಾರವಾಗಿ ಪರಿಗಣಿಸಲಾಗಿದೆ.
55
ಆಲ್ಕೋಹಾಲ್, ಶಬ್ದ, ಪ್ರಕೃತಿ ಹಾನಿ
ಮಲ್ಲೋರ್ಕಾ, ಇಬಿಜಾದಂತಹ ಪಾರ್ಟಿ ಸ್ಥಳಗಳಲ್ಲಿ ರಸ್ತೆ ಮೇಲೆ ಮದ್ಯಪಾನ ನಿಷಿದ್ಧ. ಗ್ರೀಸ್‌ನಲ್ಲಿ ಬೀಚ್‌ನಿಂದ ಮರಳು, ಚಿಪ್ಪುಗಳನ್ನು ತೆಗೆದುಕೊಂಡು ಹೋದರೆ ಶಿಕ್ಷೆ. ವೆನಿಸ್‌ನ ಕಾಲುವೆಗಳಲ್ಲಿ ಈಜುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮಗಳು ಗೊತ್ತಿಲ್ಲದೆ ಪಾರ್ಟಿ ಮಾಡಿ ದುಬಾರಿ ದಂಡದ ಸಂಕಷ್ಟಕ್ಕೆ ಸಿಲುಕ ಬೇಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ