ಅಮೆರಿಕದ ಚುನಾವಣೆ ಗೆದ್ದ ಭಟ್ಕಳದ ಅಳಿಯ; ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಗೆ ಸೋಲು

Published : Nov 04, 2026, 01:42 PM IST

ಅಮೆರಿಕದ ಮಿಶಿಗನ್ ಸೆನೆಟ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿ ಡಾ. ಅಬ್ದುಲ್ ಅಲ್ ಸಯೀದ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಈಜಿಪ್ಟ್ ಮೂಲದ ಅಮೆರಿಕನ್ ಆಗಿದ್ದಾರೆ.

PREV
15
ಭಟ್ಕಳದ ಅಳಿಯ ಡಾಕ್ಟರ್ ಅಬ್ದುಲ್ ಅಲ್ ಸಯೀದ್

ಕರ್ನಾಟಕದ ಭಟ್ಕಳದ ಅಳಿಯ ಡಾಕ್ಟರ್ ಅಬ್ದುಲ್ ಅಲ್ ಸಯೀದ್ (Abdul El-Sayed) ಅಮೆರಿಕದಲ್ಲಿ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ (Michigan Senate battle) ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಅಬ್ದುಲ್ ಅಲ್ ಸಯೀದ್ ಸೋಲಿಸುವ ಮೂಲಕ ಗೆಲುವನ್ನು ದಾಖಲಿಸಿದ್ದಾರೆ.

25
ಮೊದಲ ಮುಸ್ಲಿಂ ಮತ್ತು ಈಜಿಪ್ಟ್ ಮೂಲದ ಅಮೆರಿಕನ್

ಅಮೆರಿಕಾದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಈಜಿಪ್ಟ್ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಅಬ್ದುಲ್ ಅಲ್ ಸಯೀದ್ ಪಾತ್ರರಾಗಿದ್ದಾರೆ. ಈ ಹಿಂದೆ ಸಾರ್ವಜನಿಕ ಸಭೆಗಳಲ್ಲಿ ಅರಬ್ ಮುಸ್ಲಿಮರ ಹೆಸರನ್ನು ಹೇಳಲು ತಡವರಿಸಿ ಡೊನಾಲ್ಡ್ ಟ್ರಂಪ್ ಮತ್ತು ಜೆಡಿ ವ್ಯಾನ್ಸ್ ವ್ಯಂಗ್ಯದ ಮಾತುಗಳನ್ನಾಡಿದ್ದರು

35
ಸೆನೆಟರ್

ಡೊನಾಲ್ಡ್ ಟ್ರಂಪ್ ಮತ್ತು ವ್ಯಾನ್ಸ್ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ಅಲ್-ಸಯೀದ್, ಮುಂದೆ ನೀವು ನಮ್ಮನ್ನು ಸೆನೆಟರ್ ಎಂದು ಕರೆಯಬೇಕಾಗುತ್ತದೆ ಎಂದು ಹೇಳಿದ್ದರು. ಇದೀಗ ಅಬ್ದುಲ್ ಅಲ್ ಸಯೀದ್ ಮಾತು ನಿಜವಾಗಿದೆ. ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಟ್ರಂಪ್ ಸೇರಿದಂತೆ ಎಲ್ಲರೂ ಸೆನೆಟ್‌ಗೆ ಆಯ್ಕೆಯಾದವರನ್ನು ಸೆನೆಟರ್ ಎಂದು ಕರೆಯುವ ಮೂಲಕ ಗೌರವಿಸಬೇಕಾಗುತ್ತದೆ.

45
ಯಾರು ಈ ಅಲ್ ಸಯೀದ್?

31ನೇ ಅಕ್ಟೋಬರ್ 1984ರಂದು ಮಿಶಿಗನ್‌ನ ಹಿಲ್ಸ್‌ನಲ್ಲ ಜನಿಸಿರುವ ಅಲ್ ಸಯೀದ್ ಅವರ ತಂದೆ ಮೊಹಮ್ಮದ್ ಅಲ್ ಸಯೀದ್ ಶಿಕ್ಷಣಕ್ಕಾಗಿ ಅಮೆರಿಕಾಗೆ ವಲಸೆ ಬಂದಿದ್ದರು. ಅಬ್ದುಲ್ ಅಲ್ ಸಯೀದ್ ಅವರ ತಾಯಿ ಫತ್ತೆನ್-ಅಲ್-ಕೆಮಿ ನರ್ಸ್ ಆಗಿ ಕೆಲಸ ಮಾಡಿದ್ದಾರೆ. ಅಲ್-ಸಯೀದ್ ಜೀವಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರದಲ್ಲಿ ಮಿಶಿಯನ್ ಯುನಿವರ್ಸಿಟಿಯಿಂದ ಪದವಿಯನ್ನು ಪಡೆದುಕೊಂಡಿದ್ದಾರೆ.

55
ಅಲ್‌-ಸಯೀದ್‌ ಅವರಿಗೆ ಭಟ್ಕಳದ ನಂಟು

ಸೆನೆಟರ್ ಆಗಿರುವ ಅಬ್ದುಲ್ ಅಲ್ ಸಯೀದ್ ಅವರ ಪತ್ನಿ ಡಾ.ಸಾರಾ ಜುಕಾಕು ಭಟ್ಕಳ ಮೂಲದವರು. ಡಾಕ್ಟರ್ ಸಾರಾ ಅಮೆರಿಕದ ಖ್ಯಾತ ವೈದ್ಯ ಡಾ.ತಯ್ಯಬ್ ಜುಕಾಕ್ ಅವರ ಪುತ್ರಿಯಾಗಿದ್ದಾರೆ. ಡಾ.ತಯ್ಯಬ್ ಅವರ ತಂದೆ ದಿ.ಶಂಸುದ್ಧೀನ್ ಅವರು ಭಟ್ಕಳದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಮತ್ತು ರಾಜಕೀಯ ಮುಖಂಡರಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ಅಬ್ದುಲ್ ಅಲ್ ಸಯೀದ್ ಮತ್ತು ಸಾರಾ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories