ರೆಪ್ರುವಾ ನದಿ
ಜಾರ್ಜಿಯಾ ಸಮೀಪದ ಅಬ್ಖಾಜಿಯಾ ಪ್ರದೇಶದಲ್ಲಿ ರೆಪ್ರುವಾ ನದಿ ಹರಿಯುತ್ತೆ. ಇದು ಕೂಡ ಜಗತ್ತಿನ ಅತಿ ಚಿಕ್ಕ ನದಿಗಳಲ್ಲಿ ಒಂದು. ಇದರ ಉದ್ದ ಕೇವಲ 27 ಮೀಟರ್. ಅಂತರ್ಜಲದ ಬುಗ್ಗೆಯಿಂದ ಹುಟ್ಟುವ ಈ ನದಿ ಕಪ್ಪು ಸಮುದ್ರವನ್ನು ಸೇರುತ್ತೆ. ಉದ್ದ ಕಡಿಮೆಯಿದ್ದರೂ, ನೀರಿನ ಹರಿವು ಮಾತ್ರ ಭಾರಿ ಪ್ರಮಾಣದಲ್ಲಿರುತ್ತೆ.
ಈ ನದಿಯ ಮತ್ತೊಂದು ವಿಶೇಷ ಅಂದ್ರೆ ನೀರಿನ ತಾಪಮಾನ. ಇಲ್ಲಿನ ನೀರು ಯಾವಾಗಲೂ 10-11 ಡಿಗ್ರಿ ಸೆಲ್ಸಿಯಸ್ ಇರುತ್ತೆ, ಅಂದ್ರೆ ಸಖತ್ ತಂಪಾಗಿರುತ್ತೆ.
ಕೊವಾಸೆಲ್ವಾ ನದಿ
ನಾರ್ವೆಯ ಹಿಟ್ರಾ ದ್ವೀಪದಲ್ಲಿರುವ ಕೊವಾಸೆಲ್ವಾ ನದಿಯನ್ನು ಕೂಡ ಜಗತ್ತಿನ ಅತಿ ಚಿಕ್ಕ ನದಿಗಳಲ್ಲಿ ಒಂದು ಅಂತಾರೆ. ಇದರ ಉದ್ದ ಕೇವಲ 20 ರಿಂದ 22 ಮೀಟರ್. ಕೊವಾಸ್ವತ್ನೆಟ್ ಸರೋವರದಿಂದ ಹುಟ್ಟುವ ಈ ನದಿ ನೇರವಾಗಿ ಸಮುದ್ರ ಸೇರುತ್ತೆ.
ಒಂಬ್ಲಾ ನದಿ
ಕ್ರೊಯೇಷಿಯಾದ ಡುಬ್ರೊವ್ನಿಕ್ ಬಳಿ ಒಂಬ್ಲಾ ನದಿ ಇದೆ. ಇದರ ಉದ್ದ ಕೇವಲ 30 ಮೀಟರ್. ಆದ್ರೆ ನೀರಿನ ಪ್ರಮಾಣದಲ್ಲಿ ಇದು ತುಂಬಾನೇ ಸ್ಪೆಷಲ್. ಕಾರ್ಸ್ಟ್ ನೀರಿನ ಬುಗ್ಗೆಯಿಂದ ಈ ನದಿ ಹುಟ್ಟುತ್ತೆ. ಕೇವಲ 30 ಮೀಟರ್ ಹರಿದರೂ, ಪ್ರತಿ ಸೆಕೆಂಡಿಗೆ 23.9 ಘನ ಮೀಟರ್ ನೀರು ಹರಿಯುತ್ತೆ ಅಂತ ಕ್ರೊಯೇಷಿಯಾದ ಜಲಸಂಪನ್ಮೂಲ ಸಂಸ್ಥೆ ಹೇಳಿದೆ. ಇದು ಅಡ್ರಿಯಾಟಿಕ್ ಸಮುದ್ರವನ್ನು ಸೇರುತ್ತೆ.
ಜೆಜೆರ್ನಿಕಾ ನದಿ
ಸ್ಲೊವೇನಿಯಾದ ಇಡ್ರಿಜಾ ಪ್ರದೇಶದಲ್ಲಿ ಜೆಜೆರ್ನಿಕಾ ನದಿ ಹರಿಯುತ್ತೆ. ಇದರ ಉದ್ದ ಸುಮಾರು 55 ಮೀಟರ್. ಡಿವ್ಜೆ ಜೆಜೆರೊ ಎಂಬ ಸರೋವರದಿಂದ ಹುಟ್ಟುವ ಈ ನದಿ ಕೇವಲ 55 ಮೀಟರ್ ಹರಿದು ಮುಕ್ತಾಯವಾಗುತ್ತೆ.