ಸಾವಿನ ವದಂತಿಗೆ ಬ್ರೇಕ್: ಕೋಟೆಯಿಂದ ಹೊರಬಂದ ಕಿಮ್ ಹೇಗಿದ್ದಾರೆ? ಇಲ್ಲಿದೆ ಫೋಟೋಸ್

First Published | May 2, 2020, 9:20 AM IST

ಮೆದುಳು ನಿಷ್ಕ್ರಿಯ, ಸರ್ಜರಿ ವಿಫಲ, ಸಾವು ಹೀಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಸಂಬಂಧ ಹಲವಾರು ವದಂತಿಗಳು ಹಬ್ಬಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದ್ದು, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದಾರೆ. . ಈಗ ಅವರು ಹೇಗಿದ್ದಾರೆ? ಭಾಗಿಯಾದ ಕಾರ್ಯಕ್ರಮ ಯಾವುದು? ಇಲ್ಲಿದೆ ವಿವರ

ಕಿಮ್ ಜಾಂಗ್ ಉನ್ ಆರೋಗ್ಯ ಚೆನ್ನಾಗಿಲ್ಲ, ಮೆದುಳು ನಿಷ್ಕ್ರಿಯಗೊಂಡಿದೆ, ಸಾವನ್ನಪ್ಪಿದ್ದಾರೆಂಬ ವರದಿಗಳು ಇತ್ತೀಚೆಗೆ ಭಾರೀ ಸದ್ದು ಮಾಡಿದ್ದವು.
ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದ್ದು, ಕಿಮ್ ಜಾಂಗ್ ಉನ್ ತನ್ನ ಅಜ್ಜನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಗೈರಾಗಿದ್ದು. ಅಲ್ಲದೇ ಚೀನಾ ವೈದ್ಯರ ತಂಡವೂ ಉತ್ತರ ಕೊರಿಯಾಗೆ ಭೇಟಿ ನೀಡಿದ್ದು, ಈ ಸುದ್ದಿಗೆ ಮತ್ತಷ್ಟು ಬಲ ನೀಡಿತ್ತು.
Tap to resize

ಹೀಗಿದ್ದರೂ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಮಾತ್ರ ಕಿಮ್ ಚೆನ್ನಾಗಿದ್ದಾರೆ,, ಆರೋಗ್ಯವಾಗೇ ಇದ್ದಾರೆ ಎಂದು ತನ್ನ ಗುಪ್ತಚರ ವರದಿಗಳ ಆಧಾರದ ಮೇಲೆ ತಿಳಿಸಿತ್ತು.
ಆದರೀಗ ಬರೋಬ್ಬರಿ 21 ದಿನಗಳಿಂದ ಮಾಧ್ಯಮಗಳಿಂದ, ಹೊರ ಜಗತ್ತಿನಿಂದ ದೂರವಿದ್ದ ಕಿಮ್ ತನ್ನ ಕೋಟೆ ಬಿಟ್ಟು ಹೊರ ಬಂದಿದ್ದಾರೆ.
ಇದೀಗ ಈ ವರದಿ ಬೆನ್ನಲ್ಲೇ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ
ಕಿಮ್ ಜಾಂಗ್ ಉನ್ ಸಂಬಂಧ ವರದಿ ಪ್ರಸಾರ ಮಾಡಿರುವ ಉತ್ತರ ಕೊರಿಯಾ ಮಾಧ್ಯಮಗಳು, ಅವರುಸಂಚೋನ್ ಫರ್ಟಿಲೈಸರ್ ಫ್ಯಾಕ್ಟರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿವೆ.
ಈ ಕಾರ್ಯಕ್ರಮ ಅಂತಾರಾಷ್ಟ್ಈಯ ಕಾರ್ಮಿಕರ ದಿನ ಮೇ. ೧ರಂದೇ ನಡೆದಿರುವುದು ವಿಶೇಷ.
ಈ ಕಾರ್ಯಕ್ರಮದಲ್ಲಿ ಕಿಮ್ ಕಿಮ್ ಜಾಂಗ್ ತಂಗಿ ಯೋ ಜಾಂಗ್ ಕೂಡಾ ಭಾಗವಹಿಸಿದ್ದರು.
ಆದರೀಗ ಕಿಮ್ ಫೋಟೋಗಳು ಮತ್ತೆ ಕೆಲ ಅನುಮಾನಗಳನ್ನು ಹುಟ್ಟು ಹಾಕಿದ್ದು, ನೆಟ್ಟಿಗರು ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಮ್ ಜಾಂಗ್ ಉನ್ ಎಂದಿನಂತೆ ತಾನು ಕೈಗೆ ಧರಿಸುತ್ತಿದ್ದ ವಾಚ್ ಹಾಗೂ ಕೋಟಿನ ಮೇಲೆ ಹಾಕಿಕೊಳ್ಳುತ್ತಿದ್ದ ಬ್ಯಾಡ್ಜ್ ಹಾಕದಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.
ಇಷ್ಟೇ ಅಲ್ಲದೇ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ಇದು ಗ್ರೀನ್ ಮ್ಯಾಟ್ ಎದುರು ತೆಗೆಸಿಕೊಂಡ ಫೋಟೋಗಳು. ಹಿಂಬದಿಯನ್ನು ಫೋಟೋಶಾಪ್ ಮೂಲಕ ಹಾಕಲಾಗಿದೆ ಎಂದೂ ಸೋಶಿಯಲ್ ಮಿಡಿಯಾದಲ್ಲಿ ಕಮೆಂಟ್ ಮಾಡಲಾಗಿದೆ
ಇನ್ನು ಈ ಹಿಂದೆ ಕಿಮ್‌ ಕೊರೋನಾ ಭಯದಿಂದ ಹೊರ ಬರುತ್ತಿಲ್ಲ ಎಂದೂ ಹೇಳಲಾಗಿತ್ತು. ಚೀನಾ ಮಾಧ್ಯಮಗಳು ಕೂಡಾ ಅವರಿಗೆ ಕೊರೋನಾ ಅಂಟಿಕೊಂಡಿತ್ತು ಎಂದು ವರದಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಕಿಮ್ ಕ್ವಾರಂಟೈನ್‌ನಲ್ಲಿದ್ದರು, ಹೀಗಾಗಿ ಇಪ್ಪತ್ತೊಂದು ದಿನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ ಎಂಬ ಮಾತೂ ಜೋರಾಗಿದೆ.

Latest Videos

click me!