ಕೊರೋನಾ ಆತಂಕದ ನಡುವೆ, ಕೈದಿಗಳಿಗೆ ಭಯಾನಕ ಶಿಕ್ಷೆ: ಫೋಟೋ ವೈರಲ್!

First Published Apr 30, 2020, 6:33 PM IST

ಮಧ್ಯ ಅಮೆರಿಕಾದ ಅತ್ಯಂತ ಸಣ್ಣ ಆದರೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಅಲ್ ಸಲ್ವಾಡೋರ್‌ನಲ್ಲಿ ಕೊರೋನಾ ಸೋಂಕು ಹರಡಿದ ಬಳಿಕ ಲಾಕ್‌ಡೌನ್ ಹೇರಲಾಗಿದೆ. ಹೀಗಿದ್ದರೂ ಇಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಿದೆ. ಶುಕ್ರವಾರದಂದು ಅಚಾನಕ್ಕಾಗಿ 22 ಜನರ ಹತ್ಯೆಯಾಗಿದೆ. ಇದಾದ ಬಳಿಕ ಅಲ್ಲಿನ ಅಧ್ಯಕ್ಷ ನಾಯಿಬ್ ಬುಕೇಲೆರವರು, ಇಜೈಲ್ಕೋದ ಜೈಲಿನಲ್ಲಿ ಕೈದಿಗಳಾಗಿರುವ ಗ್ಯಾಂಗ್‌ ಲೀಡರ್‌ಗಳಿಗೆ ಸಾಲಿಟರೀ ಕನ್ಫೈಂಟ್‌ಗೆ ಕಳುಹಿಸಲು ಆದೇಶಿಸಿದ್ದಾರೆ. ಈ ಆದೇಶದ ಬೆನ್ನಲ್ಲೇ ಜೈಲು ಅಧಿಕಾರಿಗಳು ಕೈದಿಗಳಿಗೆ ಕಠಿಣ ಶಿಕ್ಷೆ ನೀಡಲಾರಂಭಿಸಿದ್ದಾರೆ. ಆದರೆ ಇಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮಾತ್ರ ಪಾಲಿಸಲಾಗುತ್ತಿಲ್ಲ. ಇಲ್ಲಿದೆ ನೊಡಿ ಒಂದು ನೋಟ.

ಬುಕೇಲೆ ಅಧಿಕಾರಕ್ಕೇರಿದ ಬಳಿಕ ಇಲ್ಲಿ ಅಪರಾಧ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿವೆ ಎನ್ನಲಾಗಿದೆ.
undefined
ಬುಕೆಲೆ ಕಳೆದ ವರ್ಷ ಜೂನ್‌ನಲ್ಲಿ ಅಧ್ಯಕ್ಷರಾಗಿದ್ದು, ಮಾರ್ಚ್‌ನಲ್ಲಿ ಇಲ್ಲಿ ಲಾಕ್‌ಡೌನ್ ಹೇರಲಾಗಿದೆ. ಅಲ್ ಸಲ್ವಾಡೋರ್‌ನಲ್ಲಿ ಒಟ್ಟು 298 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಮಹಾಮಾರಿ ವ್ಯಾಪಿಸದಿರಲಿ ಎಂದು ಲಾಕ್‌ಡೌನ್ ಹೇರಲಾಗಿದೆ
undefined
ಆದರೆ ಅಪರಾಧಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೀಗಾಗೇ ಅಧ್ಯಕ್ಷ ಬುಕೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
undefined
ಆದರೆ ಜೈಲು ಅಧಿಕಾರಿಗಳು ಶಿಕ್ಷೆ ವಿಧಿಸುತ್ತಿದ್ದರೂ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸಿದ್ದಾರೆ. ಇದರಿಂದಾಗಿ ಕೊರೋನಾ ವೈರಸ್ ಮತ್ತಷ್ಟು ಹೊರಡುವ ಶಂಕೆ ಎದುರಾಗಿದೆ.
undefined
ಅಲ್‌ ಸಲ್ವಾಡೊರ್‌ನ ಅತಿ ದೊಡ್ಡ ಇಜೈಲ್ಕೋದ ಜೈಲಿನಲ್ಲಿ ಬಂಧಿಯಾಗಿರುವ ಕೈದಿಗಳ ಬಟ್ಟೆ ತೆಗೆಸಿ, ಅವರನ್ನು ಬಹಳ ಹತ್ತಿರ ಕುಳ್ಳಿರಿಸಿದ್ದಾರೆ.
undefined
ಕೈದಿಗಳು ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಕಾಪಾಡಿಲ್ಲ. ಅಧಿಕಾರಿಗಳು ಸುರಕ್ಷತೆಯ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ.
undefined
ಕೈದಿಗಳಿಗೆ ಅಧಿಕಾರಿಗಳು ಟಾರ್ಚರ್ ನಿಡಲಾರಂಭಿಸಿದ್ದಾರೆ. ಇದರಿಂದ ಅಸಲಿ ಅಪರಾಧಿಗಳು ಸಿಕ್ಕಿ ಬೀಳುತ್ತಾರೋ ತಿಳಿಯದು ಆದರೆ ಸೋಂಕು ಹರಡುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.
undefined
ಈ ಜೈಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಖತರ್ನಾಕ್ ಅಪರಾಧಿಗಳಿದ್ದಾರೆ. ಇಲ್ಲಿ ಅಕ್ರಮವಾಗಿ ಡ್ರಗ್ಸ್ ವ್ಯವಹಾರ ಮತ್ತು ಗ್ಯಾಂಗ್‌ವಾರ್‌ ಕೂಡಾ ನಡೆಯುತ್ತದೆ.
undefined
ಕೈದಿಗಳ ಕೈಗಳನ್ನು ಹಿಂದೆ ಬಿಗಿಯಾಗಿ ಕಟ್ಟಿ ಅವರನ್ನು ಓಡಿಸುತ್ತಿದ್ದಾರೆ. ಆದರೆ ಇಲ್ಲಿ ಇಂತಹ ಶಿಕ್ಷೆ ಸಾಮಾನ್ಯ ಎನ್ನಲಾಗುತ್ತದೆ. ಅಪರಾಧಿಗಳನ್ನು ಕಂಟ್ರೋಲ್‌ ಮಾಡುವುದೇ ಇಲ್ಲಿ ಬಹುದೊಡ್ಡ ಸವಾಲಂತೆ.
undefined
ಇನ್ನು ಕೈದಿಗಳು ಕುಳಿತಲ್ಲೇ ಇರಬೇಕು, ಕೊಂಚ ಅಲ್ಲಾಡಿದರೂ ಅಧಿಕಾರಿಗಳು ಲಾಠಿ ಬಿಸಿ ಚಳಿ ಬಿಡಿಸುತ್ತಾರೆ.
undefined
ಇಷ್ಟೆಲ್ಲಾ ಆದರೂ ಇಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ, ಅನೇಕ ಅಪರಾಧಿಗಳು ಸ್ವತಂತ್ರವಾಗಿ ಹೊರಗೆ ಓಡಾಡುತ್ತಿದ್ದಾರೆ.
undefined
ಸದ್ಯ ಅಧಿಕಾರಿಗಳ ಈ ನಡೆ ಭಾರೀ ಟೀಕೆಗೊಳಗಗಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಅಧಿಕಾರಿಗಳ ನಡೆ ಟೀಕೆಗೆ ಒಳಗಾಗಿದೆ.
undefined
click me!