ಕೊರೋನಾ ತಡೆಯಲು ಫಿನಾಯಿಲ್ ಕುಡಿದ್ರು, ನರಳಾಡ್ತಾ ಪ್ರಾಣ ಬಿಟ್ಟ 700 ಮಂದಿ!

First Published Apr 30, 2020, 5:56 PM IST

ಇಡೀ ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮಿತಿ ಮೀರುತ್ತಿದೆ. ಈವರೆಗೂ 217, 555 ಮಂದಿ ಪ್ರಾಣ ಕಳೆದುಕೊಂಡಿದ್ದು, 3,126,806 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇರಾನ್‌ನಲ್ಲಿ ಬರೋಬ್ಬರಿ 92,584 ಮಂದಿ ಸೋಂಕಿತರಿದ್ದು, 5,877 ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗಲೇ ಯಾರೋ ದುಷ್ಕರ್ಮಿಗಳು ಅಲ್ಲಿ ಮೆಥನಾಲ್ ಕುಡಿದ್ರೆ ಸೋಂಕು ತಗುಲುವುದಿಲ್ಲ ಎಂಬ ವದಂತಿ ಹಬ್ಬಿಸಿದ್ದಾರೆ. ಇದನ್ನು ನಂಬಿದ ಸುಮಾರು 700 ಮಂದಿ ಕೊರೋನಾ ತಮಗೆ ತಾಗಬಾರದೆಂದು ಮೆಥನಾಲ್ ಸೇವಿಸಿದ್ದಾರೆ. ಆದರೆ ಇದು ವಿಷಕಾರಿಯಾಗಿದ್ದು, ಹೀಗಾಗಿ ಇದನ್ನು ಕುಡಿದವರೆಲ್ಲಾ ನರಳಿ ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ ಕೊರೋನಾ ಸಂಬಂಧಿತ ಹೆಚ್ಚಿ ಮಾಹಿತಿ ಹಾಗೂ ಫೋಟೋಗಳು

ಏಷ್ಯಾದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇರಾನ್‌ನಲ್ಲಿ ಕೊರೋನಾಗೆ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ಆದರೀಗ ಮೆಥನಾಲ್ ಸೇವಿಸಿದ ಪರಿಣಾಮ ಮತ್ತೊಂದು ಸಮಸ್ಯೆ ಎದುರಾಗಿದೆ.
undefined
ಇರಾನ್‌ನಲ್ಲಿ ಕೊರೋನಾ ಸೋಂಕು ಕಾನಿಸಿಕೊಂಡ ಬೆನ್ನಲ್ಲೇ ಅಲ್ಲಿನ ಸರ್ಕಾರ ನಿಯಂತ್ರಣ ಕ್ರಮ ಕೈಗೊಂಡಿತ್ತು.
undefined
ಇಲ್ಲಿ ಕೊರೋನಾ ನಿಯಂತ್ರಿಸಲು ಜನರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಿದ್ದರು ಹಾಗೂ ಎಚ್ಚರಿಕೆ ವಹಿಸಿದ್ದರು.
undefined
ಕೊರೋನಾ ನಿಯಂತ್ರಣ ಕ್ರಮಗಳನ್ನು ಇಲ್ಲಿನ ಮಹಿಳೆಯರು ಕಟ್ಟುನಿಟ್ಟಾಗಿ ಪಾಲಿಸಿದ್ದರು.
undefined
ಕೊರೋನಾ ಆರಂಭದ ದಿನಗಳಲ್ಲೇ ಇಲ್ಲಿನ ನಾಗರಿಕರು ತಪ್ಪದೇ ಮಾಸ್ಕ್ ಧರಿಸಲಾರಂಭಿಸಿದ್ದರು. ಅಲ್ಲದೇ ಆರೋಗ್ಯ ಇಲಾಖೆ ನೀಡಿದ್ದ ನಿರ್ದೆಶನಗಳನ್ನು ಪಾಲಿಸಲಾರಂಭಿಸಿದ್ದರು. ಆದರೆ ವದಂತಿಗಳು ಜೋರಾದ ಪರಿಣಾಮ ಅನೇಕ ಮಂದಿ ಇದಕ್ಕೂ ಬಲಿಯಾದರು.
undefined
ಆರಂಭದಲ್ಲಿ ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಹೀಗಾಗಿ ಸಾಮಾಜಿಕ ಅಂತರಕ್ಕೆ ಹೆಚ್ಚು ಮಹತ್ವ ನೀಡಲಿಲ್ಲ.
undefined
ಆದರೆ ಮಹಿಳೆಯರು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದರು.
undefined
ಇನ್ನು ಆರಂಭಿಕ ದಿನಗಳಲ್ಲಿ ಜನರು ಇದನ್ನು ಅಪಾಯಕಾರಿ ಎಂದು ಭಾವಿಸಿರಲಿಲ್ಲ. ಹೀಗಾಗಿ ಮಾಸ್ಕ್ ಧರಿಸದಿದ್ದರೂ, ಸಾಮಾಜಿಕ ಅಂತರ ಪಾಲಿಸಲಿಲ್ಲ.
undefined
ಆದರೆ ಅಪಾಯ ಹೆಚ್ಚಿದಂತೆಲ್ಲಾ ಜನರು ಮನೆಯಿಂದ ಹೊರಬರುವುದನ್ನೇ ನಿಲ್ಲಿಸಿದರು..
undefined
click me!