ಪಾಕಿಸ್ತಾನಕ್ಕೆ ಅಮೆರಿಕಾ ನೀಡಿದ ಹಣವೆಷ್ಟು? ಲೆಕ್ಕ ಬಿಚ್ಚಿಟ್ಟ ಭಟ್ಕಳದ ಅಳಿಯ ಅಬ್ದುಲ್ ಅಲ್-ಸಯೀದ್

Published : Nov 15, 2026, 01:40 PM IST

ಅಮೆರಿಕದ ಸೆನೆಟರ್ ಅಬ್ದುಲ್ ಅಲ್-ಸಯೀದ್ ಅವರು ಪಾಕಿಸ್ತಾನಕ್ಕೆ ನೀಡುತ್ತಿರುವ ಹಣಕಾಸು ಮತ್ತು ಸೇನಾ ನೆರವಿನ ಬಗ್ಗೆ ತೀವ್ರ ಪ್ರಶ್ನೆ ಎತ್ತಿದ್ದಾರೆ. ಅಮೆರಿಕದ ತೆರಿಗೆ ಹಣ ಮಿಲಿಟರಿ ಕಾರ್ಯಾಚರಣೆಗಳ ಹೆಸರಿನಲ್ಲಿ ಹೇಗೆ ಬಳಕೆಯಾಗುತ್ತಿದೆ ಎಂಬುದರ ಅಂಕಿ-ಅಂಶಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

PREV
15
ಅಬ್ದುಲ್ ಅಲ್-ಸಯೀದ್ ಪ್ರಶ್ನೆ

ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಅಬ್ದುಲ್ ಅಲ್-ಸಯೀದ್, ಪಾಕಿಸ್ತಾನಕ್ಕೆ ನೀಡುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಮೆರಿಕಾ ನಾಗರೀಕರ ತೆರಿಗೆ ಹಣವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸೇರಿದಂತೆ ಯುದ್ದೋಪಕರಣಗಳು ನೀಡಲು ಇಲ್ಲ. ಕಳೆದ 10 ವರ್ಷಗಲ್ಲಿ ಅಮೆರಿಕಾದಿಂದ ಪಾಕಿಸ್ತಾನಕ್ಕೆ ಸುಮಾರು 36 ಸಾವಿರ ಕೋಟಿ ರೂಪಾಯಿ ಹಣ ಹೋಗಿದೆ ಎಂದು ಹೇಳಿದ್ದಾರೆ.

25
ಪಾಕಿಸ್ತಾನಕ್ಕೆ ಆರ್ಥಿಕ ನೆರವು

ಅಮೆರಿಕಾ ಕಾಂಗ್ರೆಸ್‌ ಸಂಶೋಧನೆ ಪ್ರಕಾರ, 2002 ರಿಂದ 2016ರ ನಡುವೆ ಪಾಕಿಸ್ತಾನಕ್ಕೆ 75 ಸಾವಿರ ಕೋಟಿ ರೂಪಾಯಿ ರಕ್ಷಣಾ ನೆರವು ನೀಡಿದೆ. ಇದರ ಜೊತೆಯಲ್ಲಿ ವಿವಿಧ ಮಿಲಿಟರಿ ಕಾರ್ಯಾಚರಣೆ ವೇಳೆ ಅಮೆರಿಕಾವು ಪಾಕಿಸ್ತಾನಕ್ಕೆ ಸುಮಾರು 1.38 ಲಕ್ಷ ಕೋಟಿ ರೂಪಾಯಿ ಪಾವತಿಸಿದೆ. 2018ರಲ್ಲಿ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡೋದನ್ನು ಅಮೆರಿಕಾ ನಿಲ್ಲಿಸಿತ್ತು.

35
22 ಸಾವಿರ ಕೋಟಿ

ಜೋ ಬೈಡನ್ ತಮ್ಮ ಅವಧಿಯಲ್ಲಿ ಅಂದ್ರೆ 2022ರ ವೇಳೆ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನಗಳ ನಿರ್ವಹಣೆ ಮತ್ತು ತಾಂತ್ರಿಕ ಸಹಾಯಕ್ಕಾಗಿ 4 ಸಾವಿರ ಕೋಟಿ ರೂ.ವರೆಗಿ ಅನುದಾನಕ್ಕೆ ಪ್ರಸ್ತಾವನೆಯನ್ನು ಅನುಮೋದಿಸಿತ್ತು. 2025ರಲ್ಲಿ ಪಾಕಿಸ್ತಾನಕ್ಕೆ 18,000 ಕೋಟಿ ನೆರವಿನ (ಶೇ.98 ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಯೋಜನೆಗಳು ಮತ್ತು ಶೇ.2 ಮಿಲಿಟರಿ) ಪ್ರಸ್ತಾವನೆಯನ್ನು ಅಮೆರಿಕಾ ಅನುಮೋದಿಸಿತ್ತು.

45
ಪಾಕಿಸ್ತಾನಕ್ಕೆ ಸಹಾಯ ಮಾಡೋದೇಕೆ ಅಮೆರಿಕಾ?
  • ಪರಮಾಣ ಶಸ್ತ್ರಾಸ್ತ್ರಗಳ ಅಕ್ರಮ ಸರಬರಾಜು ತಡೆಯುವ ಉದ್ದೇಶ
  • ಗಡಿಯಲ್ಲಿ ಭಯತ್ಪಾದಕ ಚಟುವಟಿಕೆಗಳನ್ನು ತಡೆಯಲು ನೆರವು
  • ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಕಾಪಾಡುವ ಉದ್ದೇಶ
55
ಸೌದಿ ಅರೇಬಿಯಾಗೆ ಶಸ್ತ್ರಾಸ್ತ್ರಗಳ ಮಾರಾಟ

ಸೌದಿ ಅರೇಬಿಯಾಗೆ ಅಮೆರಿಕಾ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತದೆ. ಇದರ ಜೊತೆಯಲ್ಲಿ ಸೌದಿ ಸೇನೆಗೆ ಅಮೆರಿಕವು ತರಬೇತಿ, ತಾಂತ್ರಿಕ ಸಲಹೆ ಮತ್ತು ಭದ್ರತಾ ಉಪಕರಣಗಳನ್ನು ಒದಗಿಸುತ್ತದೆ. ಈ ತರಬೇತಿ ಮತ್ತು ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕಾಗೆ ಸೌದಿ ಅರೇಬಿಯಾ ಹಣ ಪಾವತಿಸುತ್ತದೆ. ವರದಿಗಳ ಪ್ರಕಾರ, ಡಿಸೆಂಬರ್ 2025 ರಲ್ಲಿ ಯುಎಸ್ ಸೌದಿ ಅರೇಬಿಯಾಕ್ಕೆ ₹4,717 ಕೋಟಿ ಮೌಲ್ಯದ ಮಿಲಿಟರಿ ಉಪಕರಣಗಳ ಸಂಭಾವ್ಯ ಮಾರಾಟವನ್ನು ಅನುಮೋದಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories