ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಮತ್ತು ಭಟ್ಕಳದ ಅಳಿಯ ಅಬ್ದುಲ್ ಎಲ್-ಸಯೀದ್, ಪಾಕಿಸ್ತಾನ ಸೇರಿ ಇತರ ದೇಶಗಳಿಗೆ ನೀಡುವ ಆರ್ಥಿಕ ನೆರವನ್ನು ವಿರೋಧಿಸಿದ್ದಾರೆ. ತೆರಿಗೆದಾರರ ಹಣವನ್ನು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವ ದೇಶಗಳಿಗೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನೂತನವಾಗಿ ಸೆನೆಟರ್ ಆಗಿ ಆಯ್ಕೆಯಾದ ಈಜಿಪ್ಟ್ ಮೂಲದ, ಭಟ್ಕಳದ ಅಳಿಯ ಅಬ್ದುಲ್ ಎಲ್-ಸಯೀದ್ ಅವರು ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಆರ್ಥಿಕ ನೆರವನ್ನು ವಿರೋಧಿಸಿದ್ದಾರೆ. ‘ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಲು ಅಮೆರಿಕದ ಹಣವನ್ನು ಬಳಸುವ ದೇಶಗಳಿಗೆ ನೀಡಲಾಗುತ್ತಿರುವ ಆರ್ಥಿಕ ಮತ್ತು ಮಿಲಿಟರಿ ಸಹಾಯವನ್ನು ಮರುಪರಿಶೀಲಿಸಬೇಕಿದೆ’ ಎಂದು ಪಾಕಿಸ್ತಾನ, ಈಜಿಪ್ಟ್, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳನ್ನು ಹೆಸರಿಸಿ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
25
ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್
ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿರುವ ಇವರು ಎಬಿಸಿ ಜತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ, ‘ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಆರೋಪಗಳನ್ನು ಎದುರಿಸುತ್ತಿರುವ ದೇಶಗಳನ್ನು ಬೆಂಬಲಿಸಲು ಅಮೆರಿಕದ ತೆರಿಗೆದಾರರ ಹಣವನ್ನು ಬಳಸಬಾರದು. ನನ್ನ ಕುಟುಂಬಕ್ಕೆ ಒಂದೊಮ್ಮೆ ನೆಲೆಯಾಗಿದ್ದ ಈಜಿಪ್ಟ್, ಪಾಕಿಸ್ತಾನ ಮತ್ತು ಜೋರ್ಡಾನ್ಗಳ ವಿಷಯದಲ್ಲೂ ನಾನು ಇದೇ ನಿಲಯವು ಹೊಂದಿದ್ದೇನೆ’ ಎಂದು ಹೇಳಿದ್ದಾರೆ.ಇದೇ ವೇಳೆ, ಇಸ್ರೇಲ್ ನೀಡಲಾಗುತ್ತಿರುವ ಸೇನಾ ನೆರವನ್ನು ತಗ್ಗಿಸುವ ಅಧ್ಯಕ್ಷ ಟ್ರಂಪ್ ಅವರ ನಿರ್ಧಾರವನ್ನು ಅಬ್ದುಲ್ ಬೆಂಬಲಿಸಿದ್ದಾರೆ.
35
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ರೆಹಮಾನ್ ಮೊಹಮ್ಮದ್ ಎಲ್-ಸಯೀದ್
ಮಿಚಿಗನ್ನಲ್ಲಿ ನಡೆದ ಅಮೆರಿಕ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ರೆಹಮಾನ್ ಮೊಹಮ್ಮದ್ ಎಲ್-ಸಯೀದ್ ಅವರು ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸುವ ಮೂಲಕ ಸೆನೆಟ್ ಪ್ರವೇಶ ಪಡೆದ ಮೊದಲ ಮುಸ್ಲಿಂ ಅಭ್ಯರ್ಥಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದು, ಇವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಳಿಯ ಎನ್ನುವುದು ವಿಶೇಷವಾಗಿದೆ.
ಡಾ. ಸಾರಾ ಅವರು ದಿ. ಜೆ.ಎಚ್. ಶಂಶುದ್ಧೀನ್ ಜುಕಾಕೊ ಅವರ ಮೊಮ್ಮಗಳು. ಇವರು ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ನೇತೃತ್ವದ ಮೈಸೂರು ರಾಜ್ಯ ಸರ್ಕಾರದಲ್ಲಿ ಹಣಕಾಸು ಉಪ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಖ್ಯಾತ ವಕೀಲರು ಮತ್ತು ಸಾರ್ವಜನಿಕ ವ್ಯಕ್ತಿಯಾಗಿದ್ದ ಶಂಶುದ್ಧೀನ್ ಜುಕಾಕೋ ಅವರು ಭಟ್ಕಳದ ಮೊದಲ ವಕೀಲರೆಂದು ಗುರುತಿಸಲ್ಪಟ್ಟಿದ್ದಲ್ಲದೇ ಇಲ್ಲಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರೆನ್ನುವ ಹೆಗ್ಗಳಿಕೆ ಇದೆ.
55
ಭಟ್ಕಳದೊಂದಿಗೆ ನಿಕಟ ಸಂಪರ್ಕ
ಡಾ. ಸಾರಾ ಮತ್ತು ಅಬ್ದುಲ್ ರೆಹಮಾನ್ ಮೊಹಮ್ಮದ್ ಎಲ್- ಸಯೀ ದ್ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ಬಾರಿಗೆ ಭೇಟಿಯಾದರು ಮತ್ತು 2006ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಾರಾ ಅವರ ಸೋದರ ಸಂಬಂಧಿಯೊಬ್ಬರ ಪ್ರಕಾರ, ಈ ಕುಟುಂಬವು ಭಟ್ಕಳದೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡಿದೆ. ಕುಟುಂಬದ ಸಮಾರಂಭಗಳಲ್ಲಿ ಭಾಗವಹಿಸಲು ಸಾರಾ ಹಲವು ಬಾರಿ ಭಟ್ಕಳ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ