ತಾಲಿಬಾನಿಯರಿಂದ ರಕ್ಷಿಸಿಕೊಳ್ಳಲು ಮರುಭೂಮಿಯಲ್ಲಿ ಗರ್ಭಿಣಿ, ವೃದ್ಧರ ರೇಸ್!

First Published Sep 1, 2021, 5:24 PM IST

ಯುಎಸ್ ಮತ್ತು ಬ್ರಿಟನ್ ಅಫ್ಘಾನಿಸ್ತಾನದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಸೈನಿಕರು ತಮ್ಮ ದೇಶಕ್ಕೆ ಮರಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈಗ ಅಲ್ಲಿ ಸಿಲುಕಿರುವ ಜನರ ವಿಶ್ವಾಸ ಮುರಿದು ಬಿದ್ದಿದೆ. ತಾವಿನ್ನು ದೇಶದಿಂದ ಹೊರ ಹೋಗಲು ಸಾಧ್ಯವಿಲ್ಲ ಎಂಬ ಆತಂಕ ಆವರಿಸಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಮತ್ತು ಇರಾನ್ ಗಡಿಯ ಬಳಿ ಇರುವ ಮರುಭೂಮಿಯ ಕೆಲವು ಚಿತ್ರಗಳು ವೈರಲ್ ಆಗಿದ್ದು, ಸಾವಿರಾರು ಮಂದಿ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಮತ್ತು ಇರಾನ್‌ಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ದೃಶ್ಯಗಳಿವೆ.

ಮರುಭೂಮಿಯಲ್ಲಿ ವೃದ್ಧರು, ಗರ್ಭಿಣಿಯರ ಕಾಲ್ನಡಿಗೆ

ಮಾಧ್ಯಮ ವರದಿಗಳ ಪ್ರಕಾರ, ವೃದ್ಧರು ಮತ್ತು ಗರ್ಭಿಣಿಯರು ಕೂಡ ಅಫ್ಘಾನಿಸ್ತಾನದಿಂದ ಪಲಾಯನ ಮಾಡಲಾರಂಭಿಸಿದ್ದಾರೆ. ಮರುಭೂಮಿಯಲ್ಲಿ ನಡೆಯುವುದು ಕಷ್ಟ, ಆದರೆ ಹೇಗಾದರೂ ಮಾಡಿ ತಾಲಿಬಾನಿಯರಿಂದ ತಪ್ಪಿಸಿಕೊಳ್ಳಬೇಕೆಂದು ಇಂತಹುದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತಾಲಿಬಾನ್ ಯಾವುದೇ ಸಮಯದಲ್ಲಿ ತಮ್ಮ ಮೇಲೆ ಗುಂಡು ಹಾರಿಸಬಹುದು ಎಂಬ ಆತಂಕವೂ ಅವರಲ್ಲಿದೆ.

ಅಫ್ಘಾನಿಸ್ತಾನ ಗಡಿಯು ಪಾಕಿಸ್ತಾನ ಮತ್ತು ಇರಾನ್‌ನ ಗಡಿಯೊಂದಿಗೆ ಸಂಪರ್ಕ ಹೊಂದಿದೆ. ಈ ಗಡಿಗಳಲ್ಲಿ ಭಾಗದಲ್ಲಿ ನಿರಾಶ್ರಿತರ ಶಿಬಿರಗಳಿರುವ ಅನೇಕ ಸ್ಥಳಗಳಿವೆ. ಜನರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಆ ಶಿಬಿರದಲ್ಲಿ ಆಸರೆ ಪಡೆಯುವ ಧಾವಂತದಲ್ಲಿದ್ದಾರೆ. 

ನಿರಾಶ್ರಿತನೊಬ್ಬ ತನ್ನ ನಾಲ್ಕು ಗಂಟೆಗಳ ಪ್ರಯಾಣದ ಬಗ್ಗೆ ಮಾಹಿತಿ ನೀಡಿದ್ದು, ಅವನು ತಾನು ಕಲ್ಲು ಗುಡ್ಡದ ಹಾದಿಯಲ್ಲಿ ಬಂದಿದ್ದೇನೆ. ತನ್ನೊಂದಿಗೆ ಪಾಕಿಸ್ತಾನಕ್ಕೆ ಬರಲು ಬಯಸುವ ಅನೇಕ ಜನರಿದ್ದರು. ಅಫ್ಘಾನಿಸ್ತಾನದಿಂದ ಹೊರಬರಲು ಅನೇಕ ಇರಾನಿಯನ್ನರು ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.
 

ಅಫ್ಘಾನ್ ಜನರ ಪ್ರಯಾಣವು ಕಡಿಮೆ ಜನಸಂಖ್ಯೆ ಹೊಂದಿರುವ ನಿಮ್ರುಜ್ ಪ್ರಾಂತ್ಯದಿಂದ ಆರಂಭವಾಯಿತು. ಈ ಪ್ರದೇಶವು ಮರುಭೂಮಿ ಮತ್ತು ಪರ್ವತಗಳಿಂದ ಆವೃತವಾಗಿದೆ.

ಅಫ್ಘನ್ನರಿಗೆ ಸಹಾಯ ಮಾಡುತ್ತಿದ್ದಾರೆ ಇರಾನಿನ ಕಳ್ಳಸಾಗಾಣಿಕೆದಾರರು 

ಡೈಲಿ ಮೇಲ್‌ನ ವರದಿಯ ಪ್ರಕಾರ, ಕೆಲವರು ರಾತ್ರಿ 10 ರ ಸುಮಾರಿಗೆ ಇರಾನ್ ಗಡಿಯನ್ನು ತಲುಪಿದ್ದಾರೆ. ಅಲ್ಲಿ ಅವರ ಬಳಿ ಒಂದು ಕೋಡ್ ಕೇಳಲಾಯಿತು. ಈ ಕೋಡ್ ಅವರಿಗೆ ಅವರ ಕಳ್ಳಸಾಗಣೆದಾರ ನೀಡಿರುತ್ತಾರೆ. ಇಲ್ಲಿ ಪ್ರತಿ ಗುಂಪಿನಿಂದ ಒಬ್ಬ ಕಳ್ಳಸಾಗಣೆದಾರ ಇದ್ದಾನೆ.
 

ಇರಾನ್‌ಗೆ ತೆರಳುತ್ತಿರುವ ಅಪ್ಘನ್ ನಿರಾಶ್ರಿತರು ಸಾವಿರಾರು ಜನರು ತಮ್ಮೊಂದಿಗೆ ಇದ್ದರು ಎಂದು ಹೇಳಿದ್ದಾರೆ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಎಲ್ಲರೂ ಅಲ್ಲಿದ್ದರು. ಮಕ್ಕಳ ಕೂಗು ಪ್ರತಿಧ್ವನಿಸುತ್ತಿತ್ತು ಎಂದಿದ್ದಾರೆ.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಇರಾನ್ ಕಳೆದ ವರ್ಷ ಅಫ್ಘಾನಿಸ್ತಾನದಿಂದ ಅತಿ ಹೆಚ್ಚು ನಿರಾಶ್ರಿತರನ್ನು ಕಂಡಿವೆ. UNHCR ಮಾಹಿತಿಯ ಪ್ರಕಾರ, 2020 ರಲ್ಲಿ ಸುಮಾರು 1.5 ಮಿಲಿಯನ್ ಜನರು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ. ಇರಾನ್‌ನಲ್ಲಿ ಅವರ ಸಂಖ್ಯೆ 780,000. 180,000 ಕ್ಕಿಂತಲೂ ಹೆಚ್ಚು ಇದೆ. ಜರ್ಮನಿಯು ಮೂರನೇ ಸ್ಥಾನದಲ್ಲಿದೆ. ಟರ್ಕಿಯಲ್ಲಿ ಸುಮಾರು 130,000 ಜನರಿದ್ದಾರೆ.

click me!