WhatsApp: ಟೆಲಿಗ್ರಾಂ, ಟ್ವೀಟರ್ ಸೇರಿ ಹಲವು ಸೋಷಿಯಲ್ ಮೀಡಿಯಾಗಳ ಮಾದರಿಯಲ್ಲಿ ವಾಟ್ಸಪ್ ಕೂಡ ಬಳಕೆದಾರರ ಖಾಸಗಿತನ ಕಾಪಾಡಲು ಮೊಬೈಲ್ ನಂಬರ್(mobile number) ಬದಲು ‘ಯೂಸರ್‌ನೇಮ್(Username)’ ಮೂಲಕ ಸಂವಹನ ನಡೆಸುವ ಆಯ್ಕೆ ಪರಿಚಯಿಸಿದೆ.
Whatsapp Chat without Mobile number: ಫೋನ್ ನಂಬರ್ ಇಲ್ಲದೇ ವಾಟ್ಸಾಪ್ ಚಾಟ್!
ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ವಾಟ್ಸಪ್ ಮೂಲಕ ವೈಯಕ್ತಿಕ ನಂಬರ್ ಸಂಗ್ರಹಿಸಿ ವಂಚಿಸುವ ಜಾಲ ಸಕ್ರಿಯವಾಗಿದೆ. ಹೀಗಾಗಿ ಮೆಟಾ ಇದೀಗ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ಟೆಲಿಗ್ರಾಂ, ಟ್ವೀಟರ್ ಸೇರಿ ಹಲವು ಸೋಷಿಯಲ್ ಮೀಡಿಯಾಗಳ ಮಾದರಿಯಲ್ಲಿ ವಾಟ್ಸಪ್ ಕೂಡ ಬಳಕೆದಾರರ ಖಾಸಗಿತನ ಕಾಪಾಡಲು ಮೊಬೈಲ್ ನಂಬರ್(mobile number) ಬದಲು ‘ಯೂಸರ್‌ನೇಮ್(Username)’ ಮೂಲಕ ಸಂವಹನ ನಡೆಸುವ ಆಯ್ಕೆ ಪರಿಚಯಿಸಿದೆ.
ಈ ಮೂಲಕ ಬಳಕೆದಾರರು ಇನ್ನೊಬ್ಬರ ಜತೆಗೆ ಅವರ ಮೊಬೈಲ್ ನಂಬರ್ ಬಹಿರಂಗಪಡಿಸದೆ ಕೇವಲ ಬಳಕೆದಾರರ ಹೆಸರಿನಲ್ಲಷ್ಟೇ ಚಾಟ್ ಮಾಡಬಹುದಾಗಿದೆ!
24
Whatsapp Chat without mobile number: ವಾಟ್ಸಪ್‌ನ ಈ ಹೊಸ ಸೌಲಭ್ಯ ಯಾರಿಗೆ?
ಈ ಹೊಸ ಸೌಲಭ್ಯವು ತನ್ನ 300 ಕೋಟಿ ಬಳಕೆದಾರರಿಗೆ ತಮ್ಮನ್ನು ಯಾರು ಸಂಪರ್ಕ ಮಾಡಬೇಕು, ಯಾರು ಸಂಪರ್ಕಿಸಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ ಎಂದು ವಾಟ್ಸಪ್ ಹೇಳಿಕೊಂಡಿದೆ.
34
ವಾಟ್ಸಪ್ ಯೂಸರ್‌ನೇಮ್ ಬುಕಿಂಗ್ ಯಾವಾಗ ಆರಂಭ?
ಮೆಟಾ(Meta) ಮಾಲೀಕತ್ವದ ಈ ಸಾಮಾಜಿಕ ತಾಣವು ಬಳಕೆದಾರರಿಗೆ ಈ ವಾರದಿಂದಲೇ ವಿಶೇಷ ಯೂಸರ್ ನೇಮ್ ಅನ್ನು ಮೀಸಲಿಡುವ ಬುಕ್ಕಿಂಗ್ ಆರಂಭಿಸಿದೆ. ಸೆಟ್ಟಿಂಗ್‌ಗೆ ಹೋಗಿ ಯೂಸರ್ ನೇಮ್ ದಾಖಲು ಮಾಡಿಕೊಳ್ಳಬಹುದು.
ಈ ಹೊಸ ಸೌಲಭ್ಯದಿಂದಾಗಿ ಹೊಸಬರ ಜತೆಗಿನ ಸಂವಹನದ ವೇಳೆ ಬಳಕೆದಾರರ ಹೆಸರು ಮಾತ್ರ ಕಾಣಿಸಿಕೊಳ್ಳಲಿದ್ದು, ಈಗಿನಂತೆ ಅವರ ಮೊಬೈಲ್ ಸಂಖ್ಯೆ ಬಹಿರಂಗವಾಗುವುದಿಲ್ಲ. ಬಳಕೆದಾರರು ಬಯಸಿದರೆ ತಮ್ಮ ಮೊಬೈಲ್ ನಂಬರ್ ಅನ್ನು ಈಗಿನಂತೆ ಎಲ್ಲರಿಗೂ ಕಾಣಿಸುವ ರೀತಿಯ ಸೌಲಭ್ಯವನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
Whatsapp Username: ವಾಟ್ಸಪ್ ಯೂಸರ್ ನೇಮ್ ಎಷ್ಟು ಅಕ್ಷರ ಇರಬೇಕು?
ಎಷ್ಟು ಅಕ್ಷರ ಇರಬೇಕು?:
ಬಳಕೆದಾರರಿಗೆ ಕನಿಷ್ಠ 3 ಅಕ್ಷರಗಳಿಂದ 35 ಅಕ್ಷರಗಳ ವರೆಗೆ ಯೂಸರ್ ನೇಮ್ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಸೆಲೆಬ್ರಿಟಿಗಳು, ಸಾರ್ವಜನಿಕ ವ್ಯಕ್ತಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಯೂಸರ್‌ನೇಮ್ ಅನ್ನು ಅವರಿಗಷ್ಟೇ ಕಾಪಿಡಲಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.