ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳುವ ಬಗ್ಗೆ ಹಲವು ಸುದ್ದಿಗಳು ಬಂದಿವೆ, ಆದರೆ ಚಾರ್ಜ್ ಮಾಡುವಾಗ ಮೊಬೈಲ್ ಫೋನ್‌ಗಳು ಹೆಚ್ಚಾಗಿ ಸ್ಫೋಟಗೊಳ್ಳುವುದು ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಫೋನ್ ಚಾರ್ಜ್ ಮಾಡುವಾಗ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಬ್ಯಾಟರಿಗೆ ಹಾನಿ ಉಂಟುಮಾಡುವುದಲ್ಲದೆ, ಕೆಲವೊಮ್ಮೆ ಸ್ಫೋಟದ ಅಪಾಯಕ್ಕೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನೀವು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ, ಇಂದೇ ಎಚ್ಚೆತ್ತುಕೊಳ್ಳಿ.
ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ
ಅನೇಕರು ಫೋನ್ ಚಾರ್ಜ್‌ಗೆ ಹಾಕಿಕೊಂಡೇ ವಿಡಿಯೋ ನೋಡುವುದು, ಗೇಮ್ ಆಡುವುದು ಅಥವಾ ಮಾತನಾಡುವುದು ಮಾಡುತ್ತಾರೆ. ಹೀಗೆ ಮಾಡಿದರೆ ಬ್ಯಾಟರಿ ಹೆಚ್ಚು ಬಿಸಿಯಾಗುವ ಸಾಧ್ಯತೆ ಇರುತ್ತದೆ. ಅಧಿಕ ತಾಪಮಾನವು ಬ್ಯಾಟರಿ ಊದಿಕೊಳ್ಳಲು ಅಥವಾ ಅಪರೂಪದ ಸಂದರ್ಭಗಳಲ್ಲಿ ಸ್ಫೋಟಗೊಳ್ಳಲು ಕಾರಣವಾಗಬಹುದು.
24
ದಿಂಬಿನ ಕೆಳಗೆ ಅಥವಾ ಬಿಸಿ ಸ್ಥಳದಲ್ಲಿ ಚಾರ್ಜ್ ಮಾಡಬೇಡಿ
ಕೆಲವರು ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹಾಸಿಗೆಯ ಮೇಲೆ ಇಟ್ಟು ರಾತ್ರಿಯಿಡೀ ಚಾರ್ಜ್ ಮಾಡುತ್ತಾರೆ. ಇದರಿಂದ ಫೋನ್‌ನಿಂದ ಹೊರಬರುವ ಶಾಖ ಹೊರಹೋಗಲು ಸಾಧ್ಯವಾಗದೆ ಬ್ಯಾಟರಿ ಹೆಚ್ಚು ಬಿಸಿಯಾಗುತ್ತದೆ. ಇದು ಬೆಂಕಿ ಅಥವಾ ಸ್ಫೋಟದ ಅಪಾಯವನ್ನು ಹೆಚ್ಚಿಸಬಹುದು.
100% ಚಾರ್ಜ್ ಮಾಡುವುದು ಯಾವಾಗಲೂ ಉತ್ತಮವಲ್ಲ
ಮೊಬೈಲ್ ಬ್ಯಾಟರಿಯನ್ನು ಪ್ರತಿಬಾರಿಯೂ 100% ಚಾರ್ಜ್ ಮಾಡುವುದು ಅದರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅನೇಕ ತಜ್ಞರ ಪ್ರಕಾರ, ಬ್ಯಾಟರಿಯನ್ನು 20% ರಿಂದ 80% ನಡುವೆಯೇ ಇಟ್ಟುಕೊಳ್ಳುವುದು ಉತ್ತಮ. ಇದು ಬ್ಯಾಟರಿಯ ಆಯುಷ್ಯವನ್ನು ಹೆಚ್ಚಿಸಲು ಸಹಕಾರಿ.
34
ರಾತ್ರಿಯಿಡೀ ಚಾರ್ಜ್‌ನಲ್ಲಿ ಬಿಡಬೇಡಿ
ಫೋನ್ ಸಂಪೂರ್ಣವಾಗಿ ಚಾರ್ಜ್ ಆದ ನಂತರವೂ ಅದನ್ನು ಚಾರ್ಜರ್‌ಗೆ ಸಂಪರ್ಕದಲ್ಲೇ ಇಡುವುದು ಬ್ಯಾಟರಿ ಮತ್ತು ಚಾರ್ಜರ್ ಎರಡಕ್ಕೂ ಹಾನಿಕಾರಕವಾಗಬಹುದು. ವಿಶೇಷವಾಗಿ ರಾತ್ರಿಯಿಡೀ ಚಾರ್ಜ್‌ಗೆ ಹಾಕುವ ಅಭ್ಯಾಸವನ್ನು ತಪ್ಪಿಸುವುದು ಉತ್ತಮ.
ನಕಲಿ ಅಥವಾ ಕಳಪೆ ಗುಣಮಟ್ಟದ ಚಾರ್ಜರ್ ಬಳಸಬೇಡಿ
ಕಡಿಮೆ ಬೆಲೆಯ ನಕಲಿ ಚಾರ್ಜರ್‌ಗಳು ಸರಿಯಾದ ವೋಲ್ಟೇಜ್ ಮತ್ತು ಸುರಕ್ಷತಾ ಮಾನದಂಡಗಳನ್ನು ಹೊಂದಿರುವುದಿಲ್ಲ. ಇವು ಬ್ಯಾಟರಿಯನ್ನು ಹಾನಿಗೊಳಿಸುವುದಲ್ಲದೆ, ಶಾರ್ಟ್ ಸರ್ಕ್ಯೂಟ್ ಮತ್ತು ಸ್ಫೋಟದ ಅಪಾಯವನ್ನೂ ಹೆಚ್ಚಿಸಬಹುದು. ಆದ್ದರಿಂದ ಯಾವಾಗಲೂ ಕಂಪನಿಯ ಮೂಲ ಚಾರ್ಜರ್ ಅಥವಾ ಪ್ರಮಾಣೀಕೃತ ಚಾರ್ಜರ್ ಬಳಸುವುದು ಸುರಕ್ಷಿತ.
44
ಬ್ಯಾಟರಿ ಸುರಕ್ಷತೆಗೆ ಈ ಸಲಹೆಗಳನ್ನು ಪಾಲಿಸಿ
ಫೋನ್ ಅನ್ನು ನೇರ ಸೂರ್ಯನ ಬೆಳಕಿನಲ್ಲಿ ಚಾರ್ಜ್ ಮಾಡಬೇಡಿ.
ಚಾರ್ಜ್ ಮಾಡುವಾಗ ದಪ್ಪ ಕವರ್ ಇದ್ದರೆ ತೆಗೆದುಹಾಕಿ.
ಬ್ಯಾಟರಿ ಊದಿಕೊಂಡಿದ್ದರೆ ತಕ್ಷಣ ಸರ್ವಿಸ್ ಸೆಂಟರ್‌ಗೆ ತೋರಿಸಿ.
ಚಾರ್ಜಿಂಗ್ ಪೋರ್ಟ್ ಬಿಸಿ ಆಗುತ್ತಿದ್ದರೆ ಅಥವಾ ವಿಚಿತ್ರ ವಾಸನೆ ಬಂದರೆ ಬಳಸುವುದನ್ನು ನಿಲ್ಲಿಸಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.