ಡೆಸ್ಕ್‌ಟಾಪ್, ಲ್ಯಾಪ್‌ಟಾಪ್‌ನಲ್ಲೂ ವ್ಯಾಟ್ಸ್ಆ್ಯಪ್ ವಿಡಿಯೋ ಕಾಲ್ ಸೇವೆ!

First Published Dec 6, 2020, 8:38 PM IST

whatsapp ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಅಪ್‌ಡೇಟ್ ಮಾಡುತ್ತಲೇ ಇದೆ. ಈ ಮೂಲಕ ಬಳಕೆಗಾರರಿಗೆ ಹೆಚ್ಚಿನ ಫೀಚರ್ಸ್ ಹಾಗೂ ಎಲ್ಲಾ ಸೇವೆ ಲಭ್ಯವಾಗುವಂತೆ ಮಾಡುತ್ತಿದೆ. ಚಾಟಿಂಗ್ ಆ್ಯಪ್, ಇದೀಗ ಹಣದ ವರ್ಗಾವಣೆ, ಬಿಲ್ ಪಾವತಿ ವರೆಗೂ ಬಂದು ನಿಂತಿದೆ. ಇದೀಗ  ವ್ಯಾಟ್ಸ್‌ಆ್ಯಪ್ ಹೊಸ ವಿಡಿಯೋ ಕಾಲ್ ಸೇವೆ ಆರಂಭಿಸುತ್ತಿದೆ.

ಭಾರತದಲ್ಲಿ whatsapp ಬಳಕೆದಾರರ ಸಂಖ್ಯೆ 40 ಕೋಟಿಗೂ ಅಧಿಕ. ಇತರ ಎಲ್ಲಾ ಆ್ಯಪ್‌ಗಳಿಂದ ವಿಶ್ವದಲ್ಲೇ ಅತೀ ಹೆಚ್ಚು ಬಳಕೆದಾರರ ಹೊಂದಿರುವ ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ಸ್ ನೀಡುತ್ತಿದೆ.
undefined
ಈಗಾಗಲೇ whatsapp ಹಲವು ಫೀಚರ್ಸ್‌ಗಳನ್ನು ಹೊಸದಾಗಿ ನೀಡಿದೆ. ಇಷ್ಟೇ ಅಲ್ಲ ಹಲವು ಫೀಚರ್ಸ್‌ಗಳನ್ನು ಅಪ್‌ಗ್ರೇಡ್ ಮಾಡಿ ನೀಡಿದೆ. ಇದೀಗ ವ್ಯಾಟ್ಸ್‌ಆ್ಯಪ್ ವಾಯ್ಸ್ ಹಾಗೂ ವಿಡಿಯೋ ಕಾಲ್‌ ವಿಸ್ತರಣೆ ಮಾಡಿದೆ.
undefined
ಮೊಬೈಲ್ ಆ್ಯಪ್‌ನಲ್ಲಿ ವ್ಯಾಟ್ಸ್ಆ್ಯಪ್ ವಿಡಿಯೋ ಕಾಲ್ ವಾಯ್ಸ್ ಕಾಲ್ ಸಾಮಾನ್ಯ. ಇದೀಗ ಡೆಸ್ಕ್‌ಟಾಪ್ ಬಳಕೆದಾರರಿಗೂ ವಿಡಿಯೋ ಕಾಲ್ ಅವಕಾಶವನ್ನು whatsapp ನೀಡುತ್ತಿದೆ.
undefined
whatsapp ವೆಬ್ ಮೂಲಕ ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್ ಮೂಲಕ whatsapp ಬಳಸುವ ಅವಕಾಶವಿದೆ. ಇನ್ನು ಡೆಸ್ಕ್‌ಟಾಪ್ ಅಪ್ಲೀಕೇಶನ್ ಕೂಡ whatsappನಲ್ಲಿದೆ.
undefined
ಡೆಸ್ಕ್‌ಟಾಪ್ ಆಪ್ಲಿಕೇಶನ್ ಬಳಕೆದಾರರಿಗೆ ವಾಯ್ಸ್ ಹಾಗೂ ವಿಡಿಯೋ ಕಾಲ್ ಆಯ್ಕೆ ನೀಡಲು whatsapp ಸಜ್ಜಾಗಿದೆ. ಈಗಾಗಲೇ ಎಲ್ಲಾ ತಯಾರಿ ಮುಗಿದಿದ್ದು, ಶೀಘ್ರದಲ್ಲೇ ಹೊಸ ಸೇವೆ ಬಳಕೆದಾರರಿಗೆ ಲಭ್ಯವಾಗಲಿದೆ.
undefined
ಡೆಸ್ಕ್‌ಟಾಪ್ ಬಳಕೆದಾರರಿಗೆ ಹೆಚ್ಚಿನ ಫೀಚರ್ಸ್ ನೀಡುವ ಸಲುವಾಗಿ whatsapp ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ವರ್ಕ್ ಫ್ರಮ್ ಹೋಮ್, ಕಚೇರಿ ಕೆಲಸಗಳು, ಮೀಟಿಂಗ್‌ಗಳನ್ನು ವ್ಯಾಟ್ಸ್‌ಆ್ಯಪ್ ಮತ್ತಷ್ಟು ಸುಲಭವಾಗಿಸಿದೆ.
undefined
ಡೆಸ್ಕ್‌ಟಾಪ್ ವಿಡಿಯೋ ಕಾಲ್ ಬಳಿಕ ವ್ಯಾಟ್ಸಾಪ್ ಹೊಸ ಷರತ್ತು ನಿಯಮಗಳನ್ನು ಪ್ರಕಟಿಸಲಿದೆ. ಬಳಕೆದಾರರ ಮಾಹಿತಿ ಡೇಟಾ ಕುರಿತು ವಿವರವಾದ ಮಾಹಿತಿ ಪ್ರಕಟಿಸಲಿದೆ.
undefined
2021ರ ಫೆಬ್ರವರಿಯಲ್ಲಿ ನವೀಕರಿಸಿದ ಷರತ್ತುಗಳನ್ನು ಬಳಕೆಗಾರರು ಒಪ್ಪಿಕೊಂಡರೆ ಮಾತ್ರ ವ್ಯಾಟ್ಸ್ಆ್ಯಪ್ ಕಾರ್ಯನಿರ್ವಹಿಸಲಿದೆ.
undefined
click me!