ಸಾಮಾನ್ಯವಾಗಿ ವೇತನ ಪಡೆಯುವ ಉದ್ಯೋಗಿಗಳಿಗೆ ವಾರದಲ್ಲಿ ಒಂದು ರಜಾ ದಿನವಿರುತ್ತದೆ. ಆದರೆ ಐಟಿ ಬಿಟಿ ಸೇರಿದಂತೆ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳು ವಾರದಲ್ಲಿ 2 ದಿನದ ರಜೆ ಪಡೆಯುತ್ತಾರೆ.
ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಬಳಿಕ ಶನಿವಾರ ಹಾಗೂ ಭಾನುವಾರ ರಜಾ ದಿನ. 2 ದಿನ ವೀಕೆಂಡ್ ಮಸ್ತಿ ಬಳಿಕ ಮತ್ತೆ ಕಾರ್ಪೋರೇಟ್ ಉದ್ಯೋಗಿಗಳು ಸೋಮವಾರದಿಂದ ಕೆಲಸಕ್ಕೆ ಹಾಜರಾಗುತ್ತಾರೆ. ಇದೀಗ Google ತನ್ನ ಉದ್ಯೋಗಿಗಳಿ ವಾರದಲ್ಲಿ 3 ದಿನದ ರಜೆ ನೀಡಿದೆ.
ಗೂಗಲ್ ತನ್ನ ನೌಕರರಿಗೆ ಶನಿವಾರ, ಭಾನುವಾರ ಮಾತ್ರವಲ್ಲ ಇದೀಗ ಶುಕ್ರವಾರವೂ ರಜಾ ದಿನವಾಗಿ ಘೋಷಿಸಿದೆ. ಈ ಮೂಲಕ Google ನೌಕರರಿಗೆ ವಾರದಲ್ಲಿ 4 ದಿನ ಕೆಲಸ ಹಾಗೂ 3 ದಿನ ರಜೆಯಾಗಿದೆ.
ಕೊರೋನಾ ವೈರಸ್ ವಕ್ಕರಿಸಿದ ಬಳಿಕ Google ತನ್ನ ಬಹುತೇಕ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿತ್ತು. ಮನೆಯಿಂದ ಹೆಚ್ಚುವರಿ ಕೆಲಸ ಮಾಡಿ ದಣಿದಿರುವ ನೌಕರರಿಗೆ ಇದೀಗ Google ವೀಕ್ ಆಫ್ ಹೆಚ್ಚಿಸಿದೆ.
ರಜಾ ದಿನ3 ದಿನಕ್ಕೆ ವಿಸ್ತರಿಸಿದರೂ ವೇತನದಲ್ಲಿ ಯಾವುದೇ ಕಡಿತವಿಲ್ಲ. ಕಂಪನಿಗಾಗಿ ಶ್ರಮಿಸಿದ್ದಾರೆ. ಇದೀಗ ಅವರಿಗೆ ವಾರದಲ್ಲಿ 4ದಿನ ಕೆಲಸ ಮಾಡಿ ವಿಶ್ರಾಂತಿಯ ಅಗತ್ಯವಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಗೂಗಲ್ ನೌಕರರು ಶುಕ್ರವಾರ ಕೆಲಸ ಮಾಡಿ ಈ ರಜಾ ದಿನವನ್ನು ಬೇರೆ ದಿನ ತೆಗೆದುಕೊಳ್ಳಲು ಇಚ್ಚಿಸಿದರೆ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಸಂಪೂರ್ಣವಾಗಿ ನೌಕರರ ದೃಷ್ಟಿಯಿಂದ ಹೊಸ ಯೋಜನೆಯನ್ನು Google ಜಾರಿ ಮಾಡಿದೆ.
ಗೂಗಲ್ 3 ದಿನದ ರಜಾ ಆಫರ್ ಉದ್ಯೋಗಿಗಳಿಗೆ ಮಾತ್ರವಲ್ಲ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇಂಟರ್ನಿಗಳಿಗೂ ಅನ್ವಯವಾಗಲಿದೆ.
ಗೂಗಲ್ ನಿರ್ಧಾರ ಇದೀಗ ಸಾಮಾಜಿಕ ಜಾಲತಾಣಲ್ಲಿ ಸಂಚಲನ ಮೂಡಿಸಿದೆ. ಇತರ ಕಂಪನಿಯ ಹಲವು ಉದ್ಯೋಗಿಗಳು ತಮ್ಮ ಕಂಪನಿ ಕೂಡ ಇದೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಶಿಸಿದ್ದಾರೆ.