ಫೇಸ್‌ಬುಕ್‌ನಲ್ಲಿ ಬರೋ ಜಾಹೀರಾತು ಕ್ಲಿಕ್ ಮಾಡುವ ಮುನ್ನ ಎಚ್ಚರ

ಫೇಸ್‌ಬುಕ್‌ನಲ್ಲಿ ಅಸಲಿ ಜಾಹೀರಾತು, ನಕಲಿ ಜಾಹೀರಾತು ಗುರುತಿಸುವುದು ಕಷ್ಟ. ಯಾವದಕ್ಕೂ ನೀವು ಜಾಹೀರಾತುಗಳಿಂದ ಎಚ್ಚರವಾಗಿರಿ, ಕಾರಣ ಹೀಗೆ ಜಾಹೀರಾತು ಕ್ಲಿಕ್ ಮಾಡಿದ ವ್ಯಕ್ತಿ 5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ  

Stay away from Facebook ad scams Cyber crime alert for users

ಸೈಬರ್ ವಂಚನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿದಿನ ಪತ್ರಿಕೆಗಳಲ್ಲಿ ಇಂತಹ ಸುದ್ದಿಗಳು ಬರುತ್ತವೆ. ಆದರೆ ಪ್ರತಿ ದಿನ ಹೊಸ ಹೊಸ ವಿಧಾನದ ಮೂಲಕ ಸೈಬರ್ ವಂಚನೆ ನಡೆಯುತ್ತಿದೆ. ಪ್ರತಿಯೊಬ್ಬರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡಲಾಗುತ್ತದೆ. ಹೀಗಾಗಿ ಬಳಕೆದಾರರು ಸಂಪೂರ್ಣವಾಗಿ ಎಚ್ಚರವಾಗಿರಬೇಕು. 

Stay away from Facebook ad scams Cyber crime alert for users

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ವೇಗವಾಗಿ ಹೆಚ್ಚುತ್ತಿವೆ. ಜನರನ್ನು ವಿವಿಧ ರೀತಿಯಲ್ಲಿ ವಂಚಿಸಲಾಗುತ್ತಿದೆ.ವಿವಿಧ ರೀತಿಯಲ್ಲಿ ಮೂರ್ಖರನ್ನಾಗಿಸಿ ದುಷ್ಕರ್ಮಿಗಳು ವ್ಯಕ್ತಿಯ ಜೀವಮಾನದ ಉಳಿತಾಯವನ್ನು ಕಸಿದುಕೊಳ್ಳುತ್ತಿದ್ದಾರೆ.ಇತ್ತೀಚೆಗೆ ಹೊಸ ರೀತಿಯ ವಂಚನೆಯ ಸುದ್ದಿ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಸುಳ್ಳು ಜಾಹೀರಾತುಗಳ ಮೂಲಕ ವಂಚನೆ ಮಾಡಲಾಗುತ್ತಿದೆ.


ಫೇಸ್‌ಬುಕ್‌ನಲ್ಲಿ ನಾವೆಲ್ಲರೂ ವಿವಿಧ ರೀತಿಯ ಜಾಹೀರಾತುಗಳನ್ನು ನೋಡುತ್ತೇವೆ. ಅಗತ್ಯವಿದ್ದಾಗ ಅನೇಕರು ಅದರ ಮೇಲೆ ಕ್ಲಿಕ್ ಮಾಡುತ್ತಾರೆ. ಹೀಗೆ ಕ್ಲಿಕ್ ಮಾಡುವ ಮುನ್ನ ಎಚ್ಚರವಿರಲಿ. ಈ ಪೈಕಿ ಹಲವು ಜಾಹೀರಾತುಗಳು ನಕಲಿ. ಈ ಜಾಹೀರಾತು ಕ್ಲಿಕ್ ಮಾಡಿದರೆ ನಿಮ್ಮ ಖಾತೆ ಖಾಲಿಯಾಗಲಿದೆ. ಹಣದ ಜೊತೆಗೆ ನೆಮ್ಮದಿ ಕೂಡ ಕಳೆದುಕೊಳ್ಳುತ್ತೀರಿ. 

ಹೀಗೆ ನಕಲಿ ಜಾಹೀರಾತು ಕ್ಲಿಕ್ ಮಾಡಿದ ಮುಂಬೈ ಮೂಲದ  ವ್ಯಕ್ತಿಯೊಬ್ಬರು 5 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಇವೆಲ್ಲವೂ ಕ್ಷಣಾರ್ಧಲ್ಲಿ ನಡೆದು ಹೋಗುತ್ತದೆ. ಹೀಗಾಗಿ ಮೋಸ ಹೋದ ಬಳಿಕ ಅಥವಾ ಹಣ ಕಳೆದುಕೊಂಡ ಬಳಿಕವಷ್ಟೇ ತಾವು ಮೋಸ ಹೋಗಿರುವುದಾಗಿ ತಿಳಿಯುತ್ತದೆ. 

ನವಿ ಮುಂಬೈನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಫೇಸ್‌ಬುಕ್ ಸ್ಕ್ರಾಲ್ ಮಾಡುವಾಗ ವ್ಯಕ್ತಿಯೊಬ್ಬರು ಜಾಹೀರಾತನ್ನು ನೋಡಿದ್ದಾರೆ. ಇದು ಹೂಡಿಕೆ ಕುರಿತು ಜಾಹೀರಾತು. ಹೀಗಾಗಿ ವ್ಯಕ್ತಿ ಈ ಜಾಹಿರಾತಿನ ಮೇಲೆ ಕ್ಲಿಕ್ ಮಾಡಿ ನೋಡಿದ್ದಾರೆ. ನಕಲಿ ಜಾಹೀರಾತು ಗುರುತಿಸಲು ವಿಫಲರಾಗಿದ್ದಾರೆ. ಇದರ ಪರಿಣಾಮ ಘೋರವಾಗಿದೆ. 

ಹೆಚ್ಚು ಯೋಚಿಸದೆ ಆ ವ್ಯಕ್ತಿ ತನ್ನ ವಿವರಗಳನ್ನು ಭರ್ತಿ ಮಾಡಿದ್ದಾರೆ. ಇದರಿಂದಾಗಿ ನಕಲಿ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆ ಮಾಡುವಾಗ ಮೊದಲು ಸಣ್ಣ ಮೊತ್ತ ಹೂಡಿಕೆ ಮಾಡಿದ್ದಾರೆ.  ಈ ಹಣ ಹೋದರೂ ಪರ್ವಾಗಿಲ್ಲ. ಪರಿಶೀಲನೆಗಾಗಿ ಸಣ್ಣ ಮೊತ್ತ ಹೂಡಿಕೆ ಮಾಡಿದ್ದಾರೆ. 

ಆದರೆ ಬಳಕೆದಾರರಿಗಿಂತ ವಂಚಕರು ಮತ್ತಷ್ಟು ಚಾಲಾಕಿಗಳಾಗಿರುತ್ತಾರೆ. ಮೊದಲಿಗೆ ಅವರಿಗೆ ಸ್ವಲ್ಪ ಪ್ರಮಾಣದ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಯಿತು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ತಾನು ಹಾಕಿದ ಹಣಕ್ಕಿಂತ ಹೆಚ್ಚಿನ ಹಣ ವಾಪಸ್ ಬಂದಿದೆ. ಹೀಗಾಗಿ ಒಂದಷ್ಟು ಮೊತ್ತ ಹಾಕಿ ಡಬಲ್ ಮಾಡಲು ವ್ಯಕ್ತಿ ಮುದಾಗಿದ್ದಾರೆ. 

ಹೀಗಾಗಿ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆ್ಯಪ್‌ನಲ್ಲಿ ನೋಡಿದಾಗ ಈ ಹೂಡಿಕೆ ಹಣ ಲಾಭ 12.2 ಕೋಟಿ ರೂಪಾಯಿ ಎಂದು ತೋರಿಸಲಾಯಿತು. ಹಿರಿ ಹಿರಿ ಹಿಗ್ಗಿದ ವ್ಯಕ್ತಿ ಅಸಲು ಉಳಿಸಿಕೊಂಡು ಲಾಭಾಂಶ ಮಾತ್ರ ವಾಪಸ್ ಪಡೆಯಲು ಮುಂದಾಗಿದ್ದರು. ತನ್ನ 5 ಕೋಟಿ  ಹೂಡಿಕೆಯ ಅಸಲು ಮೊತ್ತ ಹಾಗೇ ಉಳಿಸಿದರೆ, ಲಾಭದ ಹಣ ಸರಿಸುಮಾರು 7 ಕೋಟಿ ರೂಪಾಯಿ ಇದೆ. ಈ ಲೆಕ್ಕಾಚಾರದಲ್ಲಿ ಹಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಆದರೆ ಅವರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಅದೇನೇ ಪ್ರಯತ್ನಿಸಿದರೂ ಖಾತೆ ಬ್ಲಾಕ್  ಆಗಿದೆ. ಸಂಪರ್ಕಿಸಲು ಸಾಧ್ಯಾವಾಗಿಲ್ಲ. ತಾನು ಮೋಸ ಹೋಗಿರವುದಾಗಿ ಅರಿವಾಗಿದೆ. ಪೊಲೀಸರಿಗೆ ದೂರು ನೀಡಲಾಗಿದೆ. ಸೈಬರ್ ಕ್ರೈಮ್ ಪೋಲೀಸರು ತನಿಖೆ ಆರಂಭಿಸಿದ್ದಾರೆ. 

Latest Videos

vuukle one pixel image
click me!