ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ

Published : Feb 03, 2026, 07:59 PM IST

ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ, ನೆಚ್ಚಿನ ಫೋಟೋ, ಬ್ಯಾಂಕ್ ಖಾತೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗವು ಸಾಧ್ಯತೆಗಳಿವೆ. ಹೀಗಾಗಿ ಕೆಲ ಆ್ಯಪ್ ಬಗ್ಗೆ ಎಚ್ಚರ ಅಗತ್ಯ.

PREV
15
ಆ್ಯಪ್ ಬಗ್ಗೆ ಇರಲಿ ಎಚ್ಚರ

ರಹಸ್ಯ ಮಾಹಿತಿಗಳಿಂದ ಹಿಡಿದು ಎಲ್ಲವೂ ಫೋನ್‌ನಲ್ಲೇ ಸ್ಟೋರ್ ಆಗಿರುತ್ತದೆ. ನಮ್ಮ ವೈಯಕ್ತಿಕ ಮಾಹಿತಿಯೆಲ್ಲಾ ಸ್ಮಾರ್ಟ್‌ಫೋನ್‌ನಲ್ಲಿರುವುದು ಸಾಮಾನ್ಯ. ಖಾಸಗಿ ಫೋಟೋ, ವಿಡಿಯೋಗಳಿಂದ ಹಿಡಿದು ರಹಸ್ಯ ಮಾಹಿತಿಯವರೆಗೆ ಎಲ್ಲವನ್ನೂ ಫೋನ್‌ನಲ್ಲೇ ಇಟ್ಟಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ ನಮ್ಮ ಡೇಟಾ ಸೋರಿಕೆಯಾಗಬಹುದು. ನಾವು ಇನ್‌ಸ್ಟಾಲ್ ಮಾಡುವ ಕೆಲವು ಆ್ಯಪ್‌ಗಳು ನಮ್ಮ ಡೇಟಾವನ್ನು ಕದಿಯುವ ಸಾಧ್ಯತೆ ಹೆಚ್ಚು.

25
ಯಾವ ಆ್ಯಪ್‌ನಿಂದ ಅಪಾಯ
ಉಚಿತ ವಿಪಿಎನ್ ಆ್ಯಪ್‌ಗಳು ತುಂಬಾ ಅಪಾಯಕಾರಿ. ವಿಪಿಎನ್ ಸಂಪರ್ಕವು ಇಂಟರ್ನೆಟ್ ಅನ್ನು ಖಾಸಗಿಯಾಗಿ ಬ್ರೌಸ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಆದರೆ, ಉಚಿತ ವಿಪಿಎನ್​ಗಳು ನಿಮ್ಮ ಬ್ರೌಸಿಂಗ್ ಡೇಟಾವನ್ನು ತಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ನಂತರ ಇದನ್ನು ಮಾರಿ ಹಣ ಮಾಡಿಕೊಳ್ಳಬಹುದು.
35
ಸ್ಮಾರ್ಟ್‌ಫೋನ್ ಚೆಕ್ ಮಾಡಿ
ಫ್ಲ್ಯಾಶ್‌ಲೈಟ್, ಕ್ಲೀನರ್, ಬೂಸ್ಟರ್‌ನಂತಹ ಆ್ಯಪ್‌ಗಳು ಕೂಡ ಅಪಾಯಕಾರಿ. ಈಗಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್ ಫ್ಲ್ಯಾಶ್‌ಲೈಟ್ ಇರುತ್ತದೆ. ಆದರೂ, ಥರ್ಡ್-ಪಾರ್ಟಿ ಫ್ಲ್ಯಾಶ್‌ಲೈಟ್ ಆ್ಯಪ್‌ಗಳು ಲಭ್ಯವಿವೆ. ಇವು ನಿಮ್ಮ ಡೇಟಾವನ್ನು ಕದಿಯುವ ಸಾಧ್ಯತೆ ಹೆಚ್ಚು. ಉಚಿತ ಕ್ಲೀನರ್ ಆ್ಯಪ್‌ಗಳು ಫೋನ್ ಕ್ಲೀನ್ ಮಾಡುವುದರ ಜೊತೆಗೆ, ಬ್ರೌಸಿಂಗ್ ಡೇಟಾ ಸೇರಿ ಸೂಕ್ಷ್ಮ ಮಾಹಿತಿ ಕದಿಯುತ್ತವೆ ಎನ್ನುತ್ತಾರೆ ತಜ್ಞರು.
45
ಎಡಿಟಿಂಗ್ ಆ್ಯಪ್ ಬಗ್ಗೆ ಇರಲಿ ಎಚ್ಚರ
ಫೇಸ್ ಫಿಲ್ಟರ್, ಫೋಟೋ ಮತ್ತು ವಿಡಿಯೋ ಎಡಿಟಿಂಗ್ ಆ್ಯಪ್‌ಗಳು ಈಗ ಬಹಳ ಜನಪ್ರಿಯ. ಜನರು ತಮ್ಮ ರೀಲ್ಸ್ ವಿಡಿಯೋ, ಫೋಟೋಗಳನ್ನು ಎಡಿಟ್ ಮಾಡಲು ಇಂತಹ ಆ್ಯಪ್‌ಗಳನ್ನು ಹೆಚ್ಚು ಬಳಸುತ್ತಾರೆ. ಈ ಆ್ಯಪ್‌ಗಳ ಮೂಲಕ ನಿಮ್ಮ ಮುಖದ ಡೇಟಾ ಅವರ ಸರ್ವರ್‌ಗಳನ್ನು ತಲುಪುತ್ತದೆ.
55
ಅನುಮತಿ ಕೇಳಿದಾಗ ಏನು ಮಾಡಬೇಕು
ಕೆಲವು ಆ್ಯಪ್‌ಗಳು ಎಲ್ಲದಕ್ಕೂ ಅನುಮತಿ ಕೇಳುತ್ತವೆ. ಫೋಟೋ, ಫೋನ್ ಕಾಲ್, ಸೆಟ್ಟಿಂಗ್ಸ್, ಕ್ಯಾಮೆರಾ, ಮೆಸೇಜ್, ಬ್ರೌಸಿಂಗ್ ಡೇಟಾ ಹೀಗೆ ಎಲ್ಲವನ್ನೂ ಆ್ಯಕ್ಸೆಸ್ ಮಾಡಲು ಪರ್ಮಿಷನ್ ಕೇಳುತ್ತವೆ. ಒಂದು ಫೋಟೋ ಎಡಿಟಿಂಗ್ ಆ್ಯಪ್‌ಗೆ ನಿಮ್ಮ ಮೆಸೇಜ್ ಯಾಕೆ ಬೇಕು? ಹಾಗಾಗಿ, ಆ್ಯಪ್‌ಗಳು ಅನುಮತಿ ಕೇಳಿದಾಗ, ಎಲ್ಲದಕ್ಕೂ ಅಲೋ ಮಾಡಬೇಡಿ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories