ನಿಮ್ಮ ಟಿವಿ ಸ್ಕ್ರೀನ್ ಮೇಲೂ ಕಾಣುತ್ತಾ ಇಂತಹ ನಂಬರ್? ಕಡೆಗಣಿಸಬೇಡಿ, ಎಚ್ಚರ!

First Published Dec 28, 2020, 3:24 PM IST

ಇಂದು ಬಹುತೇಕ ಎಲ್ಲರ ಮನೆಯಲ್ಲೂ ಟಿವಿ ಇದೆ, ಹಾಗೂ ಇಸನ್ನು ವೀಕ್ಷಿಸುವವರಿದ್ದಾರೆ. ಇನ್ನು ಇದನ್ನು ವೀಕ್ಷಿಸುವ ಪರಿ ಬಹುತೇಕ ಎಲ್ಲರದ್ದೂ ಸಮನಾಗಿರುತ್ತದೆಡ. ಎಲ್ಲಿಯವರೆಗೆ ಟಿವಿಯಲ್ಲಿ ಬರುವ ಕಾರ್ಯಕ್ರಮ ಹಿಡಿಸುತ್ತದೋ ಅಲ್ಲಿಯವರೆಗೆ ವೀಕ್ಷಿಸುತ್ತಿರುತ್ತಾರೆ. ಬಳಿಕ ಚಾನೆಲ್ ಬದಲಾಯಿಸುತ್ತಾರೆ. ಹೀಗಾಗಿ ವೀಕ್ಷಕರ ಗಮನ ಚಾನೆಲ್ ಮೇಲಿರುತ್ತದೆ. ಆದರೆ ನೀವು ಯಾವತ್ತಾದರೂ ಟಿವಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ನಂಬರ್ ಗಮನಿಸಿದ್ದೀರಾ? ಯಾವತ್ತೂ ಈ ನಂಬರ್ ಸ್ಕ್ರೀನ್ ಮೇಲಿರುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ಈ ನಂಬರ್ ಮಾಯವಾಗುತ್ತವೆ. ಆದರೆ ನೆನಪಿರಲಿ ಈ ನಂಬರ್ ಸುಮ್ ಸುಮ್ಮನೆ ಟಿವಿಯಲ್ಲಿ ಕಾಣಿಸುವುದಿಲ್ಲ. ಇದಕ್ಕೇನು ಕಾರಣ? ಇಲ್ಲಿದೆ ವಿವರ

2020ರಲ್ಲಿ ಅನೇಕ ಮಂದಿ ವಿಡಿಯೋ ವೀಕ್ಷಿಸಲು ಫೋನ್ ಬಳಸುತ್ತಾರೆ. ಹೀಗಿದ್ದರೂ ಮನೆಯಲ್ಲಿ ಟಿವಿ ಇದ್ದೇ ಇರುತ್ತದೆ. ಅದೆಷ್ಟೇ ಆನ್‌ಲೈನ್‌ನಲ್ಲಿ ವಿಡಿಯೋ ವೀಕ್ಷಿಸಿದರೂ ಟಿವಿ ಅದೊಂದು ಮೂಲೆಯಲ್ಲಿ ಆನ್ ಆಗಿರುತ್ತದೆ. ಹೀಗಿರುವಾಗ ಟಿವಿಯಲ್ಲಿ ರ್ಯಾಂಡಮ್ ನಂಬರ್‌ ಕಾಣಿಸಿಕೊಳ್ಳುತ್ತವೆ. ಆದರೆ ಇವು ಯಾಕೆ ಕಾಣಿಸಿಕೊಳ್ಳುತ್ತವೆ ಎಂದು ನೀವೆಂದಾದರೂ ಯೋಚಿಸಿದ್ದೀರಾ?
undefined
ಟಿವಿಯಲ್ಲಿ ಕಾಣಿಸಿಕೊಳ್ಳುವ ಈ ನಂಬರ್‌ನ್ನು ಜನರು ಅನೇಕ ಬಾರಿ ಕಡೆಗಣಿಸುತ್ತಾರೆ. ಇಲ್ಲವೆಂದಾದರೆ ಇವು ಹೋಗಲಿ ಎಂದು ಕಾಯುತ್ತಿರುತ್ತಾರೆ, ಯಾಕೆಂದರೆ ಇವನ್ನು ರಿಮೋಟ್ ಮೂಲಕ ಎಕ್ಸಿಟ್ ಮಾಡಲು ಆಗುವುದಿಲ್ಲ. ಆದರೆ ನೆನಪಿರಲಿ ಇದು ನಿಮಗೆ ಕಿರಿ ಕಿರಿಯುಂಟು ಮಾಡಲು ಪರದೆ ಮೇಲೆ ಕಾಣಿಸಿಕೊಳ್ಳುವುದಲ್ಲ.
undefined
ಸರಿ ಸುಮಾರು ಎಲ್ಲಾ ಪ್ರಸಿದ್ಧ ಟಿವಿ ಕಾರ್ಯಕ್ರಮಗಳು ಪ್ರಸಾರವಾಗುವಾಗ ಇವು ಕಾಣಿಸಿಕೊಳ್ಳುತ್ತವೆ. ಅದು ಲೈವದ ಆಗಿರಲಿ ಅಥವಾ ರೆಕಾರ್ಡೆಡ್ ಆಗಿರಲಿ ಇವು ಕಾಣಿಸಿಕೊಳ್ಳುತ್ತವೆ. ಈ ಸಂಖ್ಯೆ ನಿಮ್ಮ ಸೆಟ್‌ ಟಾಪ್‌ ಬಾಕಗ್ಸ್‌ನಿಂದ ಜನರೇಟ್ ಆಗಿರುತ್ತವೆ. ಹೀಗಾಗಿ ಈ ನಂಬರ್ ಬೇರಾವ ಟಿವಿಯಲ್ಲಿ ಕಾಣಿಸುವುದಿಲ್ಲ.
undefined
ನಿಮ್ಮ ಟಿವಿ ಪರದೆಯಲ್ಲಿ ನಂಬರ್ ಕಾಣಿಸಿಕೊಂಡಾಗ ಬೇರೆ ಟಿವಿಯಲ್ಲೂ ಕಾಣಿಸಿಕೊಳ್ಳುವ ನಂಬರ್ ನೀವು ಹೋಲಿಕೆ ಮಾಡಿಕೊಂಡರೆ ಇದು ಒಂದೇ ಆಗಿರುವುದಿಲ್ಲ. ಪ್ರತಿಯೊಂದು ಬಾಕ್ಸ್ ಕಾರ್ಯಕ್ರಮದ ವೇಳೆ ತನ್ನದೇ ಆದ ವಿಭಿನ್ನ ನಂಬರ್ ಜನರೇಟ್ ಮಾಡಿಕೊಳ್ಳುತ್ತದೆ. ಪೈರೆಸಿ ತಡೆಯಲು ಹೀಗೆ ಮಾಡಲಾಗುತ್ತದೆ.
undefined
ಅನೇಕ ಬಾರಿ ಜನರು ಲೈವ್ ಬರುವ ಮ್ಯಾಚ್ ಅಥವಾ ಪ್ರಸಿದ್ಧ ಕಾರ್ಯಕ್ರಮ ರೆಕಾರ್ಡ್ ಮಾಡಲು ಯತ್ನಿಸುತ್ತಾರೆ. ಬಳಿಕ ಇದನ್ನು ಸೋಶಿಯಲ್ ಮಿಡಿಯಾ ಮೂಲಕ ಸೇರ್ ಮಾಡಿಕೊಳ್ಳುತ್ತಾರೆ. ಇದು ಹಿಂದಿಯ ಪ್ರಸಿದ್ಧ ಶೋ ಕೌನ್ ಬನೇಗಾ ಕರೋಡ್‌ಪತಿಯಿಂದ ಹಿಡಿದು ಬಿಗ್‌ ಬಾಸ್‌ ಶೋವರೆಗೆ ಎಲ್ಲಕ್ಕೂ ನಡೆಯುತ್ತದೆ. ಹೀಗಿರುವಾಗ ಇಂತಹ ಕಾರ್ಯಕ್ರಮ ರೆಕಾರ್ಡ್‌ ಮಾಡುವಾಗ ಈ ನಂಬರ್ ಕಾಣಿಸಿಕೊಂಡರೆ ಅವರು ಇದನ್ನು ಎಲ್ಲಿಯೂಈ ಅಪ್ಲೋಡ್ ಮಾಡಲು ಸಾಧ್ಯವಿಲ್ಲ.
undefined
ರೆಕಾರ್ಡ್‌ ಮಾಡುವ ವೇಳೆ ಈ ನಂಬರ್ ಕೂಡಾ ರೆಕಾರ್ಡ್‌ ಆಗುತ್ತದೆ. ಈ ನಂಬರ್ ವಿಭಿನ್ನವಾಗಿರುವುದರಿಂದ ಇದನ್ನು ರೆಕಾರ್ಡ್ ಮಾಡಿದ್ದು ಯಾರೆಂದು ಕಂಡು ಹಿಡಿಯುವುದು ಅತಿ ಸುಲಭ. ಹೀಗಿರುವಾಗ ಇಂತಹವರ ವಿರುದ್ಧ ಸಂಬಂಧಪಟ್ಟವರು ಕೇಸ್ ದಾಖಲಿಸಬಹುದು.
undefined
ಕೇಬಲ್‌ನಲ್ಲಿ ಪ್ರಸಾರವಾಗುವಾಗ ಯಾರು ಬೇಕಾದರೂ ಯಾವುದೇ ಅಡೆ ತಡೆ ಇಲ್ಲದೇ ರೆಕಾರ್ಡ್ ಮಾಡಬಹುದಾಗಿತ್ತು. ಇದೇ ಕಾರಣಕ್ಕೆ ಸರ್ಕಾರ ಸೆಟ್‌ ಟಾಪ್‌ ಬಾಕ್ಸ್‌ಗೆ ಒತ್ತು ನೀಡಿತ್ತು. ಹೀಗಾಗಿ ಪೈರೆಸಿ ಕಾಟ ಕೊಂಚ ಕಡಿಮೆಯಾಗಿದೆ.
undefined
click me!