iPhone ನಿಂದ iCar:ಬರುತ್ತಿದೆ ಅತ್ಯಾಧುನಿಕ ತಂತ್ರಜ್ಞಾನದ Apple ಎಲೆಕ್ಟ್ರಿಕ್ ಕಾರು!

First Published | Dec 22, 2020, 2:28 PM IST

ಆ್ಯಪಲ್ ಐಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಉತ್ಪನ್ನಗಳು ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹವಾಗಿದೆ. ಸ್ಮಾರ್ಟ್‌ಫೋನ್ ವಿಭಾಗದಲ್ಲಿ ವಿಶ್ವದಲ್ಲೇ ಹೊಸ ಸಂಚಲನ ಮೂಡಿಸಿರುವ ಆ್ಯಪಲ್ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಆ್ಯಪಲ್ ಹೊಚ್ಚ ಹೊಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಐಕಾರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ.

ಆ್ಯಪಲ್ ಹೊಸ ಘೋಷಣೆ ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಆ್ಯಪಲ್ ಇದೀಗ ಐಫೋನ್‌ನಿಂದ ಐಕಾರ್ ಉತ್ಪಾದನೆಗೆ ಮುಂದಾಗಿದೆ. ಆ್ಯಪಲ್ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಾಡುತ್ತಿದೆ.
undefined
ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ಆ್ಯಪಲ್, ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ.
undefined

Latest Videos


ಐಕಾರುಗಳಲ್ಲಿ ವಿಶೇಷ ತಂತ್ರಜ್ಞಾನ ಒಳಗೊಂಡ ಬ್ಯಾಟರಿ ಅಳವಡಿಸಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಬ್ಯಾಟರಿ ಉತ್ಪಾದನೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರು ಇದಾಗಿರಲಿದೆ.
undefined
ಐಫೋನ್ ಬ್ಯಾಟರಿ ಉತ್ಪಾದನೆ ಘಟಕದಲ್ಲಿ ಐಕಾರು ಬ್ಯಾಟರಿ ಉತ್ಪಾದನೆಯಾಗಲಿದೆ. ಪ್ಯಾಸೆಂಜರ್ ವೆಹಿಕಲ್, ಡ್ರೈವರ್ ರಹಿತ ಎಲೆಕ್ಟ್ರಿಕ್ ಕಾರು, ಬಸ್ ಟ್ರಕ್ ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನ ರಸ್ತೆಗಳಿಯಲಿದೆ.
undefined
ಆರಂಭಿಕ ಹಂತದಲ್ಲಿ ಆ್ಯಪಲ್ ಘಟಕದಲ್ಲಿ ನಿರ್ಮಾಣವಾಗುವ ಎಲೆಕ್ಟ್ರಿಕ್ ಕಾರುಗಳನ್ನು ತನ್ನ ಕಂಪನಿ ಉದ್ದೇಶಕ್ಕೆ ಬಳಸಲಿದೆ. ನೌಕರರಿಗೆ, ಕಂಪನಿ ಅಗತ್ಯಗಳಿಗೆ, ವಸ್ತುಗಳ ಸಾಗಾಟಕ್ಕೆ ಆ್ಯಪಲ್ ಕಾರುಗಳನ್ನು ಬಳಸಲಾಗುತ್ತದೆ.
undefined
2024ರಲ್ಲಿ ಆ್ಯಪಲ್ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿದೆ ಎಂದು ಆ್ಯಪಲ್ ಹೇಳಿದೆ. ಕೊರೋನಾ ವೈರಸ್ ಕಾರಣ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎಂದಿದೆ.
undefined
ಆ್ಯಪಲ್ ಎಲೆಕ್ಟ್ರಿಕ್ ಕಾರು ಘೋಷಣೆ ಬೆನ್ನಲ್ಲೇ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಷೇರುಗಳು 6.5% ಕುಸಿತ ಕಂಡಿದೆ. ಇನ್ನು ಆ್ಯಪಲ್ ಷೇರುಗಳ ಮೌಲ್ಯ 1.24% ಹೆಚ್ಚಳವಾಗಿದೆ.
undefined
click me!