ದುರ್ಬಳಕೆ, ಹ್ಯಾಕ್ ತಡೆಯಲು ಹೊಸ ವರ್ಷಕ್ಕೆ ಫೇಸ್‌ಬುಕ್‌ನಿಂದ ಹೊಸ ರೂಲ್ಸ್!

First Published | Dec 27, 2020, 9:38 PM IST

ಹೊಸ ವರ್ಷದಿಂದ ಫೇಸ್‌ಬುಕ್ ಹೊಸ ಫೀಚರ್ಸ್ ಸೇರಿಸುತ್ತಿದೆ. ಪ್ರಮುಖವಾಗಿ ಫೇಸ್‌ಬುಕ್ ದುರ್ಬಳಕೆ, ಹ್ಯಾಕ್, ಮಾಹಿತಿ, ಫೋಟೋ ಸೋರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಫೇಸ್‌ಬುಕ್ ಮತ್ತಷ್ಟು ಸುರಕ್ಷಿತವಾಗುತ್ತಿದೆ. ಇದಕ್ಕಾಗಿ ಹೊಸ ವರ್ಷದಿಂದ ಕೆಲ ಸೇಫ್ಟಿ ಫೀಚರ್ಸ್ ಸೇರಿಸುತ್ತಿದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಫೇಸ್‌ಬುಕ್ ತರುತ್ತಿರುವ ಹೊಸ ಫೀಚರ್ಸ್ ಏನು? ಇಲ್ಲಿದೆ ವಿವರ.

ಫೇಸ್‌ಬುಕ್ ಈಗಾಗಲೇ ಹಲವು ಫೀಚರ್ಸ್ ಸೇರಿಸಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದೆ. ಇಷ್ಟೂದರೂ ಫೇಸ್‌‌ಬುಕ್ ದುರ್ಬಳಕೆ ಸೇರಿದಂತೆ ಕೆಲ ಭದ್ರತಾ ಫೀಚರ್ಸ್ ಹ್ಯಾಕ್ ಮಾಡಿದ ಹಲವು ಪ್ರಕರಣಗಳು ದಾಖಲಾಗಿದೆ.
ಫೇಸ್‌ಬುಕ್ ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಇದೀಗ ಫೇಸ್‌ಬುಕ್ ಹೊಸ ವರ್ಷದಿಂದ ಹೊಸ ಫೀಚರ್ಸ್ ನೀಡುತ್ತಿದೆ. ಈ ಭದ್ರತಾ ಫೀಚರ್ಸ್ ಮೊಬೈಲ್ ಆ್ಯಪ್ಲಿಕೇಶನ್‌ಗೆ ಅನ್ವಯವಾಗಲಿದೆ.
Tap to resize

ಫೇಸ್‌ಬುಕ್ ಫಿಂಗರ್ ಪ್ರಿಂಟ್ ಅಥವಾ ನಂಬರ್ ಲಾಕ್ ಫೀಚರ್ಸ್ ನೀಡಲಿದೆ. ಈ ಮೂಲಕ ಬಳಕೆದಾರ ಪ್ರತಿ ಭಾರಿ ಲಾಗಿನ್ ಆಗುವಾಗ ಫ್ರಿಂಟ್ ಪ್ರಿಂಟ್ ಲಾಕ್ ಒಪನ್ ಮಾಡಬೇಕಾಗುತ್ತದೆ.
ಐರಿಸ್ ಸ್ಕ್ಯಾನ್, ಫೇಸ್ ರೆಕಗ್ನೀಶನ್ ಫೀಚರ್ಸ್ ಕೂಡ ನೀಡುವ ಸಾಧ್ಯತೆ ಇದೆ. ಈ ಮೂಲಕ ಬಳಕೆದಾರರು ಫೇಸ್ ರೆಕಗ್ನೀಶನ್ ಮೂಲಕ ಮಾತ್ರ ತಮ್ಮ ಖಾತೆ ಲಾಗಿನ್ ಆಗುವ ಅವಕಾಶವಿರುತ್ತದೆ.
ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಕೆ ಮಾಡುವವರು ಈ ಸೆಕ್ಯೂರಿಟಿ ಫೀಚರ್ಸ್‌ ಷರತ್ತು ಒಪ್ಪಿಕೊಂಡುು ಮುಂದುವರಿಯಬೇಕು. ಇಷ್ಟೇ ಅಲ್ಲ ಹೊಸ ಭದ್ರತಾ ಫೀಚರ್ಸ್‌ ಬಳಕೆ ಕಡ್ಡಯವಾಗಿರಲಿದೆ.
ಫೇಸ್‌ಬುಕ್ ದುರ್ಬಳಕೆ ತಪ್ಪಿಸಲು ಈ ರೀತಿಯ ಫೀಚರ್ಸ್ ಸೇರಿಸಲಾಗುತ್ತಿದೆ. ಈ ಮೂಲಕ ಫೇಸ್‌ಬುಕ್ ಮತ್ತಷ್ಟು ಸುರಕ್ಷಿತವಾಗುತ್ತಿದೆ.
ಅಮೆರಿಕದಲ್ಲಿ ಹೊಸ ವರ್ಷದ ಆರಂಭದಲ್ಲೇ ಫೇಸ್‌ಬುಕ್ ಭದ್ರತಾ ಫೀಚರ್ಸ್ ಜಾರಿಗೆ ಬರುತ್ತಿದೆ. ಬಳಿಕ ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಹಂತ ಹಂತವಾಗಿ ಫೇಸ್‌ಬುಕ್ ಸೆಕ್ಯೂರಿಟಿ ಫೀಚರ್ಸ್ ಜಾರಿಯಾಗಲಿದೆ.

Latest Videos

click me!