ಆನ್‌ಲೈನ್ ಶಾಪರ್ಸ್ ಗುರಿಯಾಗಿಸಿ ಭಾರತದ ಮೇಲೆ ಚೀನಾ ರಹಸ್ಯ ಸೈಬರ್ ದಾಳಿ!

First Published | Dec 19, 2020, 9:04 PM IST

ಭಾರತದ ಮೇಲೆ ಚೀನಾ ರಹಸ್ಯ ಸೈಬರ್ ದಾಳಿ ನಡೆಸಲಾಗಿದೆ ಅನ್ನೋ ಆಘಾತಕಾರಿ ಮಾಹಿತಿ ಬಯಲಾಗಿದೆ. ಸೈಬರ್ ಸೆಕ್ಯೂರಿಟಿ ಹಾಗೂ ಸೈಬರ್ ಪೀಸ್ ಫೌಂಡೇಶನ್ ಬಿಡುಗಡೆ ಮಾಡಿದ ವರದಿ, ಚೀನಾ ಕುತಂತ್ರವನ್ನು ಬಯಲು ಮಾಡಿದೆ.

ಭಾರತದ ಮೇಲೆ ಚೀನಾ ರಹಸ್ಯವಾಗಿ ಸೈಬರ್ ದಾಳಿ ನಡೆಸಿದೆ. ಈ ಕುರಿತು ಮಾಹಿತಿಗಳು ಸೈಬರ್ ಸೆಕ್ಯೂರಿಟಿ ಥಿಂಕ್ ಟ್ಯಾಂಕ್ ಹಾಗೂ ಸೈಬರ್ ಪೀಸ್ ಫೌಂಡೇಶನ್ ವರದಿಯಲ್ಲಿ ಬಯಲಾಗಿದೆ.
ಚೀನಾದ ಗೌಂದೌಂಗ್ ಹಾಗೂ ಹೆನನ್ ಪ್ರಾಂತ್ಯದ ಹ್ಯಾಕರ್ಸ್ ಭಾರತದಲ್ಲಿನ ಹಬ್ಬದ ಆನ್‌ಲೈನ್ ಸೇಲ್ ವೇಳೆ ಹ್ಯಾಕ್ ಮಾಡಿದ್ದಾರೆ. ಅಕ್ಟೋಬರ್, ನವೆಂಬರ್ ತಿಂಗಳಳಲ್ಲಿ ಚೀನಾ ಹ್ಯಾಕರ್ಸ್ ಭಾರತದ ಆನ್‌ಲೈನ್ ಶಾಪರ್ಸ್ ಮೇಲೆ ರಹಸ್ಯ ಸಬೈರ್ ದಾಳಿ ನಡೆಸಿದ್ದಾರೆ ಎಂದು ವರದಿ ಮಾಡಿದೆ.
Tap to resize

ನವರಾತ್ರಿ, ದೀಪಾವಳಿ ಹಬ್ಬದ ವೇಳೆ ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಗರಿಷ್ಠ ವ್ಯವಹಾರ ನಡೆಸುತ್ತದೆ. ಈ ಸಮಯದಲ್ಲೇ ಚೀನಾ ಹ್ಯಾಕರ್ಸ್, ಭಾರತದ ಲಕ್ಷಾಂತರ ಆನ್‌ಲೈನ್ ಶಾಪರ್ಸ್ ಮೇಲೆ ಸೈಬರ್ ದಾಳಿ ನಡೆಸಲಾಗಿದೆ.
ಫ್ಲಿಪ್‌ಕಾರ್ಟ್, ಅಮೇಜಾನ್ ಸೇರಿದಂತೆ ಆನ್‌ಲೈನ್ ಶಾಂಪಿಂಗ್ ಸೈಟ್ ಮೇಲೆ ಸೈಬರ್ ದಾಳಿ ನಡೆಸಲಾಗಿದೆ. ಫೇಕ್ URL ಬಳಸಿ ಗ್ರಾಹಕರ ಹಾದಿ ತಪ್ಪಿಸಲಾಗಿದೆ.
ಫ್ಲಿಪ್‌ಕಾರ್ಟ್, ಅಮೇಜಾನ್ ಫೇಕ್ URL ಬಳಸಿ ವ್ಯಾಟ್ಸಾಪ್‌ ಮೂಲಕ ಲಿಂಕ್ ಹರಿಬಿಡಲಾಗಿದೆ. ಜೊತೆಗೆ ಆಫರ್, ಬಹುಮಾನ, ಫ್ರೀ ಸೇರಿದಂತೆ ಬೋಗಸ್ ಪ್ರೈಜ್ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗಿದೆ.
ಈ ಲೀಂಕ್ ಕ್ಲಿಕ್ ಮಾಡಿ ಹಣ ಪಾವತಿ ಮಾಡಿದವರಿಗೆ ಉತ್ಪನ್ನವೂ ಇಲ್ಲ, ಹಣವೂ ಇಲ್ಲದಂತಾಗಿದೆ. ಬಿಗ್ ಬಿಲಿಯನ್ ಡೇ ಸೇಲ್ ವೇಳೆ ಸ್ಪಿನ್ ವೀಲ್, ಲಕ್ಕಿ ವೀಲ್ ಲಿಂಕ್‌ಗಳು ವ್ಯಾಟ್ಸಾಪ್ ಮೂಲಕ ಹರಿದಾಡಿದೆ. ಇದೆಲ್ಲವೂ ಫೇಕ್ ಆಗಿತ್ತು ಅನ್ನೋದು ವರದಿಯಲ್ಲಿ ಬಹಿರಂಗವಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕವೂ ಈ ರೀತಿ ಫೇಕ್ URL ಗ್ರಾಹಕರಿಗೆ ಮೋಸ ಮಾಡಲಾಗಿದೆ. 10 ಜನರಿಗೆ ಫಾರ್ವಡ್ ಮಾಡಿ, ಕೇವಲ 10 ರೂಪಾಯಿಯಲ್ಲಿ ಮೊಬೈಲ್ ಸೇರಿದಂತೆ ಹಲವು ಬೋಗಸ್ ಪ್ರೈಜ್ ಚೀನಾದ ಹ್ಯಾಕರ್ಸ್ ಮಾಡಿದ ಕೆಲಸವಾಗಿದೆ ಎಂದು ವರದಿ ಹೇಳಿದೆ.
ಫ್ಲಿಪ್‌ಕಾರ್ಟ್ ಮತ್ತು ಅಮೇಜಾನ್ ಬಿಗ್ ಬಿಲಿಯನ್ ಡೇ ಘೋಷಣೆಗೂ ಎರಡು ದಿನ ಮೊದಲು ಚೀನಾ ಹ್ಯಾಕರ್ಸ್ ಸ್ಪಿನ್ ಲಕ್ಕಿ ವೀಲ್ ಸ್ಕಾಮ್(Spin the lucky wheel scam) ನಡೆಸಿದೆ.
ಗ್ರಾಹಕರು ಅಧೀಕೃತ ವೆಬ್‌ಸೈಟ್ ಮೂಲಕವೇ ವಸ್ತುಗಳನ್ನು, ಉತ್ಪನ್ನಗಳನ್ನು ಖರೀದಿಸಬೇಕು. ಖರೀದಿಗೂ ಮುನ್ನ URL ನಿಗದಿತ ವೆಬ್‌ಸೈಟ್ ಸೂಚಿಸಿತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದಿದೆ. ಇಷ್ಟೇ ಅಲ್ಲ ವ್ಯಾಟ್ಸಾಪ್, ಸಾಮಾಜಿಕ ಜಾಲತಾಣದಲ್ಲಿ ಬರುವ ಬೋಗಸ್ ಪ್ರೈಜ್‌ಗೆ ಮರುಳಾಗಬಾರದು ಎಂದು ವರದಿ ಸೂಚಿಸಿದೆ.

Latest Videos

click me!