ವ್ಯಾಟ್ಯ್ಆ್ಯಪ್ ಪ್ರೈವೈಸಿ ಪಾಲಿಸಿ ಭಾರಿ ವಿವಾದ ಸೃಷ್ಟಿಸಿದೆ. ಬಳಕೆದಾರರ ವೈಯುಕ್ತಿಕ ಮಾಹಿತಿ ಹಾಗೂ ಗೌಪ್ಯತೆ ಕುರಿತು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಲಿಸಿ ಒಪ್ಪಿಕೊಳ್ಳುವುದು, ತಿರಸ್ಕರಿಸುವುದು ಜನರಿಗೆ ಬಿಟ್ಟಿದ್ದು. ಆದರೆ ಮಾಹಿತಿ ಸೋರಿಕೆ, ಗೌಪ್ಯತೆ ಸೇರಿದಂತೆ ಕೆಲ ವಿಚಾರಗಳ ಕುರಿತು ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತಿಸಿದೆ.
ಈ ಬೆಳವಣಿಗೆಗಳ ನಡುವೆ ಕೇಂದ್ರ ಸರ್ಕಾರ ಇದೀಗ ವ್ಯಾಟ್ಸ್ಆ್ಯಪ್‌ಗೆ ಸೂಚನೆ ನೀಡಿದೆ. ಪ್ರೈವೈಸಿ ಪಾಲಿಸಿಯನ್ನು ಹಿಂಪಡೆಯುವಂತೆ ಸರ್ಕಾರ ಹೇಳಿದೆ
ಪ್ರೈವೈಸಿ ಪಾಲಿಸಿ ವಾಪಸ್ ಪಡೆಯುವುದು ಮಾತ್ರವಲ್ಲ, ಬಳಕೆದಾರರ ವೈಯುಕ್ತಿ ಮಾಹಿತಿ, ಡೇಟಾ ಸಂಬಂಧಿಸಿದ ಮಾಹಿತಿಗಳ ಸುರಕ್ಷತೆಗೆ ಯಾವುದೇ ಧಕ್ಕೆ ಬರಬಾರದು ಎಂದು ಸೂಚಿಸಿದೆ.
ವ್ಯಾಟ್ಸ್ಆ್ಯಪ್ CEO ವಿಲ್ ಕ್ಯಾಥ್‌ಕಾರ್ಟ್‌ಗೆ ಈ ಕುರಿತು ಸರ್ಕಾರ ಮಹತ್ವದ ಸೂಚನೆ ನೀಡಿದೆ. ಹೊಸ ಪ್ರೈವೈಸಿ ಪಾಲಿಸಿಯಿಂದ ಬಳಕೆದಾರರ ಮಾಹಿತಿ ಸೋರಿಕೆ ಆತಂಕ ಎದುರಾಗಿದೆ. ಹೀಗಾಗಿ ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದೆ.
ನೂತನ ಪ್ರೈವೈಸಿ ಪಾಲಿಸಿ ಪ್ರಕಾರ ವ್ಯಾಟ್ಸ್ಆ್ಯಪ್ ಬಳಕೆದಾರರು ವೈಯುಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳಬೇಕಿದೆ. ಇದಕ್ಕೆ ಬಳಕೆದಾರರು ಒಪ್ಪಿಗೆ ಸೂಚಿಸಬೇಕು
ಫೇಸ್‌ಬುಕ್ ಒಡೆತನ ವ್ಯಾಟ್ಸ್‌ಆ್ಯಪ್ ನೂತನ ಪಾಲಿಯನ್ನು ಒಪ್ಪಿಕೊಂಡರೆ ಮಾತ್ರ ವ್ಯಾಟ್ಸ್ಆ್ಯಪ್ ಕಾರ್ಯನಿರ್ವಹಿಸಲಿದೆ. ಇಲ್ಲದಿದ್ದರೆ, ನಿಷ್ಕ್ರೀಯವಾಗಲಿದೆ.
ಇದರ ನಡುವೆ ವ್ಯಾಟ್ಸ್ಆ್ಯಪ್ ಬಳಕೆದಾರರ ಖಾಸಗಿ ಮಾಹಿತಿ ಬಹಿರಂಗ ಪಡಿಸುವುದಿಲ್ಲ. ಇಷ್ಟೇ ಅಲ್ಲ ಯಾವ ಡೇಟಾ ಸೋರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿದೆ.