ಉತ್ತಮ ಪಾಸ್‌ವರ್ಡ್‌ಗಳನ್ನು ಆರಿಸಿಕೊಳ್ಳಿ.
ಒಂದು ದಶಕದ ಹಿಂದೆ, 4 ಕೆ 8 ಎಫ್‌ಜಿ 67ನಂತಹ ಪಾಸ್‌ವರ್ಡ್ ಅನ್ನು ಉತ್ತಮ ಪಾಸ್‌ವರ್ಡ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಇಂದು ನಮ್ಮಲ್ಲಿರುವ ತಂತ್ರಜ್ಞಾನದೊಂದಿಗೆ, ಹ್ಯಾಕರ್‌ಗಳು ಅಂತಹ ಪಾಸ್‌ವರ್ಡ್‌ಗಳನ್ನು ಭೇದಿಸುವುದು ಸುಲಭ.
ಐಡಿಯಲ್ ಪಾಸ್‌ವರ್ಡ್ ಕನಿಷ್ಠ 12 ಅಕ್ಷರಗಳಷ್ಟು ಉದ್ದವಿರಬೇಕು. ಅದು ಆಲ್ಫಾ-ನ್ಯೂಮರಿಕಲ್ ಸಂಯೋಜನೆಯನ್ನು ಹೊಂದಿರಬೇಕು.
ಆದರೆ ಪಾಸ್ವರ್ಡ್ ಅನ್ನು ನಿಮ್ಮ ಹೆಸರು, ಜನ್ಮ ದಿನಾಂಕ ಅಥವಾ ಅಂತಹ ಯಾವುದೇ ವೈಯಕ್ತಿಕ ವಿವರಗಳಿಂದ ಕೂಡಿದ್ದರೆ, ಅದನ್ನು ಕಂಡು ಹಿಡಿಯೋದುತುಂಬಾ ಸುಲಭ.
ನಿಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಪಾಸ್‌ವರ್ಡ್‌ಗಳು ಒಂದೇ ಆಗಿದ್ದರೆ, ಹುಷಾರಾಗಿರಿ. ನೀವು ಅಂತರ್ಜಾಲದಾದ್ಯಂತ ಒಂದೇ ಪಾಸ್‌ವರ್ಡ್ ಬಳಸುತ್ತಿದ್ದರೆ, ಅದು ನೀವು ಮಾಡಿದ ಅತ್ಯಂತ ತಪ್ಪು ಕೆಲಸಗಳಲ್ಲೊಂದು.
2012 ರಲ್ಲಿ ಕುಖ್ಯಾತ ಲಿಂಕ್ಡ್‌ಇನ್ ಹ್ಯಾಕ್ ಅಂತರ್ಜಾಲದಾದ್ಯಂತ ಒಂದೇ ಪಾಸ್‌ವರ್ಡ್ ಅನ್ನು ಇಟ್ಟುಕೊಂಡವರಿಗೆ ಇದು ಒಂದು ಪಾಠವಾಗಿತ್ತು. ಫೇಸ್‌ಬುಕ್ ಮುಖ್ಯಸ್ಥ, ಮಾರ್ಕ್ ಜುಕರ್‌ಬರ್ಗ್ ಅಂತಹವರಲ್ಲಿ ಒಬ್ಬರು .
ನೀವು ಸೈನ್ ಅಪ್ ಮಾಡಿರುವ ಒಂದು ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದರೆ, ನಿಮ್ಮ ಉಳಿದ ಪಾಸ್ ಕೀಗಳಿಗೆ ಪ್ರವೇಶವು ಹೆಚ್ಚು ಸುಲಭವಾಗುತ್ತದೆ. ಆದರೆ ತುಂಬಾ ಪಾಸ್‌ವರ್ಡ್ ನೆನಪಿಟ್ಟುಕೊಳ್ಳುವುದು ಸಹ ಕಷ್ಟ ಅಂತಹ ಸಮಯದಲ್ಲಿ ಪಾಸ್‌ವರ್ಡ್ ಮ್ಯಾನೇಜರ್ ಬಳಿಸಿ.
ಪಾಸ್ವರ್ಡ್ ಮ್ಯಾನೇಜರ್ , ಎಲ್ಲಾ ಪಾಸ್‌ವರ್ಡ್‌ಗಳನ್ನು ಸ್ಟೋರ್ ಮಾಡುವ ಪರ್ಸನಲ್ ಅಸಿಸ್ಟೆಂಟ್ ಮತ್ತು ನಿಮ್ಮಿಂದ ಮಾತ್ರ ಅನ್ಲಾಕ್ ಮಾಡಲು ಸಾಧ್ಯ. ಆದಾಗ್ಯೂ, ಈ ಸಹಾಯದ ಪ್ರಮುಖ ಡ್ರಾಬ್ಯಾಕ್, ನಿಮ್ಮ ಮಾಸ್ಟರ್ ಪಾಸ್‌ವರ್ಡ್ ಲೀಕ್ ಆದರೆ ಹ್ಯಾಕರ್‌ಗಳು ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
ಆದ್ದರಿಂದ,ಬೇರೆ ಬೇರೆ ಮತ್ತು ಸ್ಟ್ರಾಂಗ್ ಮಾಸ್ಟರ್ ಪಾಸ್‌ವರ್ಡ್ ಹೊಂದುವುದು ಅತ್ಯಗತ್ಯವಾಗಿರುತ್ತದೆ. ಅವನ್ನು ಆಗಾಗ ಬದಲಾಯಿಸುತ್ತಿರಿ.