ಚುನಾವಣೆ ಗೆಲ್ಲಲು ಗರಿಷ್ಠ ಹಣ ಖರ್ಚು ಮಾಡಿದ TMC;ರಾಜಕೀಯ ಜಾಹೀರಾತು ಪಟ್ಟಿ ರಿಲೀಸ್!

First Published Mar 25, 2021, 5:52 PM IST

ಪಶ್ಚಮ ಬಂಗಾಳ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದೆ. ರೋಡ್ ಶೋ, ರ್ಯಾಲಿ ಸಂಘಟಿಸಿ ಮತದಾರರ ಗಮನಸೆಳೆಯುವ ಪ್ರಯತ್ನ ಮಾಡಿದೆ. ಇದರ ಜೊತೆ ಸಾಮಾಜಿಕ ಜಾಲತಾಣದಲ್ಲೂ ಭರ್ಜರಿ ಜಾಹೀರಾತು ನೀಡಿದೆ. ಇದೀಗ ಪಶ್ಚಿ ಬಂಗಾಳ ಚುನಾವಣೆಗೆ ಗೆಲ್ಲಲು ಫೆಸ್‌ಬುಕ್ ಜಾಹೀರಾತಿಗಾಗಿ ಗರಿಷ್ಠ ಹಣ ಖರ್ಚು ಮಾಡಿದ ಪಕ್ಷಗಳ ಪಟ್ಟಿ ಬಿಡುಗಡೆಯಾಗಿದೆ. 

ವಿಧನಾಸಭಾ ಚುನಾವಣೆಗೆ 4 ರಾಜ್ಯ ಒಂದು ಕೇಂದ್ರಾಡಳಿತ ಪ್ರದೇಶ ಸಜ್ಜಾಗಿದೆ. ರಾಜಕೀಯ ಪಕ್ಷಗಳು ಕೂಡ ಭರ್ಜರಿ ಪ್ರಚಾರ ನಡೆಸಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲೂ ಜಾಹೀರಾತು ಸೇರಿದಂತೆ ಹಲವು ರೀತಿಯಲ್ಲಿ ಮತದಾರರ ಒಲೈಕೆಯನ್ನು ನಡೆಸಿದೆ.
undefined
ಚುನಾವಣೆ ಎದುರಿಸುತ್ತಿರುವ 5 ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಫೇಸ್‌ಬುಕ್ ಜಾಹೀರಾತಿಗಾಗಿ ಗರಿಷ್ಠ ಹಣ ಖರ್ಚು ಮಾಡಿದೆ. ಇನ್ನುಳಿದ ರಾಜ್ಯಗಳು ಮಿತಿಯಲ್ಲಿದ್ದರೆ, ಬಂಗಾಳದಲ್ಲಿ ಹಣ ಹೊಳೆ ಹರಿದಿದೆ.
undefined
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅತೀ ಹೆಚ್ಚು ಹಣ ಫೇಸ್‌ಬುಕ್ ಜಾಹೀರಾತಿಗೆ ಖರ್ಚು ಮಾಡಿದೆ ಅನ್ನೋ ವರದಿ ಬಹಿರಂಗವಾಗಿದೆ.
undefined
ಚುನಾವಣೆ ಗೆಲ್ಲಲು 5 ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳು 3.74 ಕೋಟಿ ರೂಪಾಯಿ ಫೇಸ್‌ಬುಕ್ ಜಾಹೀರಾತಿಗಾಗಿ ಖರ್ಚು ಮಾಡಿದೆ. ತಮಿಳುನಾಡು 3.3 ಕೋಟಿ, ಅಸ್ಸಾಂ 61.77 ಲಕ್ಷ ರೂಪಾಯಿ, ಕೇರಳ 38.86 ಲಕ್ಷ ರೂಪಾಯಿ, ಪುದುಚೇರಿ 3.34 ಲಕ್ಷ ರೂಪಾಯಿ ಖರ್ಚು ಮಾಡಿದೆ.
undefined
ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಅತೀ ಹೆಚ್ಚು ಹಣವನ್ನು ಫೇಸ್‌ಬುಕ್ ಜಾಹೀರಾತಿಗೆ ಖರ್ಚು ಮಾಡಿದೆ. 1.69 ಕೋಟಿ ರೂಪಾಯಿ ಹಣವನ್ನು ತೃಣಮೂಲ ಕಾಂಗ್ರೆಸ್ ಕಳೆದ 90 ದಿನದಲ್ಲಿ ಫೇಸ್‌ಬುಕ್ ಜಾಹೀರಾತಿಗಾಗಿ ಖರ್ಚು ಮಾಡಿದೆ.
undefined
ಮೋದಿ ಅಪಾಯ(ಖೋಟಿಕಾರೊಕ್ ಮೋದಿ )ಎಂಬ ಜಾಹೀರಾತು ಮೂಲಕ ಮೋದಿ ಬಂಗಾಳ ಹಾಗೂ ದೇಶಕ್ಕೆ ಅಪಾಯ ಎಂದು ಜಾಹೀರಾತಿನ ಮೂಲಕ ಹೇಳಲು ತೃಣಮೂಲ ಕಾಂಗ್ರೆಸ್ 33.12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
undefined
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಿಜೆಪಿಗಿಂತ ತೃಣಮೂಲ ಕಾಂಗ್ರೆಸ್ ಅತೀ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಬಿಜೆಪಿಗೆ ಫೇಸ್‌ಬುಕ್‌ನಲ್ಲಿ 1.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನು ಟಿಎಂಸಿಗೆ ಫೇಸ‌್‌ಬುಕ್‌ನಲ್ಲಿ 1.3 ಮಿಲಿಯನ್ ಫಾಲೋವರ್ಸ್ ಇದ್ದಾರೆ.
undefined
ಕಳೆದ 90 ದಿನಗಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ಗೆಲುವಿಗೆ ಸಾಮಾಜಿಕ ಜಾಲತಾಣದಲ್ಲಿ ಇಷ್ಟು ಹಣ ಖರ್ಚು ಮಾಡಿದೆ. ಇದು ಕೇವಲ ಫೇಸ್‌ಬುಕ್ ಪುಟದಲ್ಲಿ ಚುನಾವಣೆ ಜಾಹೀರಾತಿಗಾಗಿ ಖರ್ಚು ಮಾಡಿದ ಹಣವಾಗಿದೆ.
undefined
click me!