ಅಮೆರಿಕಾದಲ್ಲಿ ಕರೆಂಟ್ ವೈರ್ ಕಾಣಿಸಲ್ಲ ಯಾಕೆ? ಭಾರತದಲ್ಲೂ ಇದು ಸಾಧ್ಯವೇ?

Published : Jun 21, 2026, 04:09 PM IST

ಅಮೆರಿಕಾದಂತಹ ದೇಶಗಳಲ್ಲಿ ರಸ್ತೆ ಬದಿ ಎಲ್ಲೆಂದರಲ್ಲಿ ಕರೆಂಟ್ ಕಂಬ, ತಂತಿಗಳು ಕಾಣಿಸುವುದೇ ಇಲ್ಲ. ಇದಕ್ಕೆ ಕಾರಣವೇನು? ಭಾರತದಲ್ಲೂ ಈ ರೀತಿ ಭೂಗತ ಕೇಬಲ್ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿದೆಯೇ? ಇಲ್ಲಿದೆ ಮಾಹಿತಿ.

PREV
15
ಅಮೆರಿಕಾದಲ್ಲಿ ಕರೆಂಟ್ ತಂತಿಗಳು ಯಾಕೆ ಕಾಣಿಸಲ್ಲ?
ಅಮೆರಿಕ, ಯುಕೆ ಯಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಿನ ವಿದ್ಯುತ್ ತಂತಿಗಳು ಭೂಮಿಯೊಳಗಿರುತ್ತವೆ. ಹಾಗಾಗಿ ಅಲ್ಲಿನ ಬೀದಿಗಳಲ್ಲಿ ಕಂಬಗಳು, ಅಪಾಯಕಾರಿಯಾಗಿ ನೇತಾಡುವ ವೈರ್‌ಗಳು ಕಾಣಿಸುವುದಿಲ್ಲ. ಆದರೆ ಎಲ್ಲಾ ಕಡೆಯೂ ಹೀಗಿಲ್ಲ. ಕೆಲವು ಪ್ರಮುಖ ನಗರ, ವಾಣಿಜ್ಯ ಪ್ರದೇಶ ಮತ್ತು ಆಧುನಿಕ ಬಡಾವಣೆಗಳಲ್ಲಿ ಮಾತ್ರ ಭೂಗತ ಕೇಬಲ್ ಅಳವಡಿಸಿದ್ದಾರೆ. ಕಂಬಗಳ ಮೇಲಿರುವ ವೈರ್‌ಗಳನ್ನೂ ಅಮೆರಿಕಾದಲ್ಲಿ ಬಹಳ ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ. ಎಲ್ಲೆಂದರಲ್ಲಿ ವೈರ್ ಎಳೆಯುವುದು, ಮರಗಳಿಗೆ ತಾಗುವಂತೆ ಅಳವಡಿಸುವುದು ಅಲ್ಲಿಲ್ಲ.
25
ವಿದ್ಯುತ್ ವಿತರಣಾ ಲೈನ್‌

ಅಮೆರಿಕಾದಲ್ಲಿ ಶೇ. 50ಕ್ಕಿಂತ ಹೆಚ್ಚು ವಿದ್ಯುತ್ ವಿತರಣಾ ಲೈನ್‌ಗಳು ಅಂಡರ್‌ಗ್ರೌಂಡ್‌ನಲ್ಲಿವೆ. ಇದರಿಂದ ಚಂಡಮಾರುತ, ಬಿರುಗಾಳಿಗೆ ಕಂಬಗಳು ಮುರಿದುಬಿದ್ದು ವಿದ್ಯುತ್ ವ್ಯತ್ಯಯ ಆಗುವ ಅಪಾಯವಿರುವುದಿಲ್ಲ. ನಗರಗಳು ಸುಂದರವಾಗಿ, ಸ್ವಚ್ಛವಾಗಿ ಕಾಣಿಸುತ್ತವೆ. ಕಾಡಿನಲ್ಲಿ ಬೆಂಕಿ ಅವಘಡದ ಸಾಧ್ಯತೆ ಕಡಿಮೆಯಾಗುತ್ತದೆ. ಆರಂಭದಲ್ಲಿ ಹೆಚ್ಚು ಖರ್ಚಾದರೂ, ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ನಿರ್ವಹಣಾ ವೆಚ್ಚ ಕೂಡಾ ಕಡಿಮೆಯಾಗುತ್ತದೆ.

35
ಭಾರತದಲ್ಲಿ ಇದು ಸಾಧ್ಯವೇ?
ಭಾರತದಲ್ಲೂ ಭೂಗತ ಕೇಬಲಿಂಗ್ ಸಂಪೂರ್ಣವಾಗಿ ಸಾಧ್ಯವಿದೆ. ಈಗಾಗಲೇ ಹಲವು ನಗರಗಳಲ್ಲಿ ಈ ಬದಲಾವಣೆ ವೇಗವಾಗಿ ನಡೆಯುತ್ತಿದೆ. ಆದರೆ ಅಮೆರಿಕಾದಂತೆ ಹಳ್ಳಿಯಿಂದ ನಗರದವರೆಗೆ ಎಲ್ಲೆಡೆ ಜಾರಿಗೆ ತರಲು ಸಾಕಷ್ಟು ಸಮಯ ಬೇಕು. ಕಿರಿದಾದ ರಸ್ತೆ, ಜನದಟ್ಟಣೆ, ಈಗಾಗಲೇ ಇರುವ ನೀರಿನ ಪೈಪ್, ಒಳಚರಂಡಿ, ಗ್ಯಾಸ್ ಪೈಪ್‌ಲೈನ್‌ಗಳ ನಡುವೆ ಹೊಸದಾಗಿ ಕೇಬಲ್ ಅಳವಡಿಸಲು ಅಗೆಯುವುದು ಕಷ್ಟದ ಕೆಲಸ. ಆದರೆ, ವಿಶಾಲವಾದ ಪ್ರದೇಶಗಳಲ್ಲಿ ಇದು ಸಾಧ್ಯವಿದೆ ಮತ್ತು ಈಗಾಗಲೇ ನಡೆಯುತ್ತಿದೆ.
45
అమెరికాలో సాధ్యం మనదగ్గర ఏంటి ప్రాబ్లమ్.. ?
ಅಮೆರಿಕಾದಲ್ಲಿ ಭೂಪ್ರದೇಶ ಹೆಚ್ಚು, ಜನಸಂಖ್ಯೆ ಕಡಿಮೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ನಿರ್ವಹಣೆ ಕಷ್ಟ. ಎಲ್ಲೆಂದರಲ್ಲಿ ಅಗೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ಅಮೆರಿಕ, ಯುರೋಪ್ ದೇಶಗಳು ನಗರಗಳನ್ನು ಯೋಜಿಸುವಾಗಲೇ ಭೂಗತ ಲೈನ್‌ಗಳನ್ನು ಅಳವಡಿಸಿವೆ. ಆದರೆ ನಮ್ಮ ದೇಶದಲ್ಲಿ ನಗರಗಳು ಈಗಾಗಲೇ ನಿರ್ಮಾಣವಾಗಿ, ಜನರಿಂದ ತುಂಬಿಹೋಗಿವೆ. ಹಾಗಾಗಿ, ಹೊಸದಾಗಿ ವಿಸ್ತರಣೆಯಾಗುತ್ತಿರುವ ನಗರ ಪ್ರದೇಶಗಳಲ್ಲಿ ಸರ್ಕಾರಗಳು ಭೂಗತ ವಿದ್ಯುತ್ ವ್ಯವಸ್ಥೆ ಅಳವಡಿಸುತ್ತಿವೆ.
55
4ರಿಂದ 10 ಪಟ್ಟು ಹೆಚ್ಚು ದುಬಾರಿ
ಭೂಗತ ಕೇಬಲ್ ಅಳವಡಿಕೆ, ಮೇಲ್ಮೈ ಕೇಬಲ್‌ಗಿಂತ 4ರಿಂದ 10 ಪಟ್ಟು ಹೆಚ್ಚು ದುಬಾರಿ. ಆದರೆ ದೀರ್ಘಾವಧಿಯಲ್ಲಿ ನಿರ್ವಹಣಾ ವೆಚ್ಚ ಕಡಿಮೆ. ಭಾರತದಲ್ಲಿ ಹೈದರಾಬಾದ್, ವಿಶಾಖಪಟ್ಟಣಂನಲ್ಲಿ ಈ ಯೋಜನೆ ಜಾರಿಯಲ್ಲಿದೆ. ಗುಜರಾತ್ ಸರ್ಕಾರ 'ವೈರ್-ಫ್ರೀ ಸಿಟಿ ಮಿಷನ್' ಮೂಲಕ ಪ್ರಮುಖ ನಗರಗಳಲ್ಲಿ ಇದನ್ನು ಜಾರಿಗೊಳಿಸುತ್ತಿದೆ. ನಮ್ಮ ಬೆಂಗಳೂರಿನಲ್ಲೂ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಅಧಿಕೃತ ಯೋಜನೆಗಳು ಸಿದ್ಧವಾಗಿವೆ.
Read more Photos on
click me!

Recommended Stories