ಚೈತನ್ಯ ಹೆಚ್ಚಿಸುವ ಪಾನೀಯವಾಗಿ ಕುಡಿತಾರೆ ಹಾವಿನ ರಕ್ತ; ಇದರಲ್ಲಿ ವಿಷ ಇರುತ್ತಾ? ಇಲ್ವಾ?

Published : Jul 01, 2026, 12:53 PM IST

ಏಷ್ಯಾದ ಕೆಲವು ದೇಶಗಳಲ್ಲಿ, ಹಾವಿನ ರಕ್ತವನ್ನು ಸಾಂಪ್ರದಾಯಿಕ ಔಷಧಿಯಾಗಿ ಮತ್ತು ಚೈತನ್ಯ ಹೆಚ್ಚಿಸುವ ಪಾನೀಯವಾಗಿ ಸೇವಿಸಲಾಗುತ್ತದೆ. ಚೀನಾ, ವಿಯೆಟ್ನಾಂನಂತಹ ದೇಶಗಳಲ್ಲಿ ಇದನ್ನು ವೈನ್ ಜೊತೆ ಬೆರೆಸಿ ಕುಡಿಯುವ ಸಂಪ್ರದಾಯವಿದೆ. 

PREV
14
ಹಾವುಗಳ ರಕ್ತ

ಹಾವುಗಳ ಅಂದ್ರೆ ಜನರು ಕಿಲೋಮೀಟರ್‌ಗಟ್ಟಲೇ ದೂರ ಓಡಿ ಹೋಗುತ್ತಾರೆ. ಹಾವುಗಳು ಕಡಿತದಿಂದ ಹೆದರುವ ಜನರು ಒಂದು ಕಡೆಯಾದ್ರೆ, ಚೀನಾದಂತಹ ದೇಶಗಳಲ್ಲಿ ಇವುಗಳನ್ನೇ ಆಹಾರವನ್ನಾಗಿ ಸೇವಿಸುತ್ತಾರೆ. ಇಂಡೋನೇಷ್ಯಾದಂತಹ ದೇಶಗಳಲ್ಲಿ ಹಾವುಗಳ ಸಾಕಾಣಿಕೆಯನ್ನು ಸಹ ಮಾಡಲಾಗುತ್ತದೆ. ಈ ಲೇಖನದಲ್ಲಿ ಹಾವುಗಳ ರಕ್ತವನ್ನು ಕುಡಿಯುವ ಜನರ ಬಗ್ಗೆ ಹೇಳುತ್ತಿದ್ದೇವೆ. ಈ ಜನರು ಎಲ್ಲಿರುತ್ತಾರೆ? ಹಾವುಗಳ ರಕ್ತ ಸೇವಿಸಿದ್ರೆ ಸಾವು ಬರಲ್ಲವಾ? ಹಾವಿನ ರಕ್ತದಲ್ಲಿ ವಿಷದ ಅಂಶವಿರುತ್ತಾ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ ಬನ್ನಿ.

24
ರಕ್ತದಿಂದ ತಯಾರಿಸಿದ ಪಾನೀಯ

ಏಷ್ಯಾದ ಅನೇಕ ದೇಶಗಳಲ್ಲಿ ಹಾವುಗಳ ರಕ್ತ ಮತ್ತು ರಕ್ತದಿಂದ ತಯಾರಿಸಿದ ಪಾನೀಯಗಳನ್ನು ಸಾಂಪ್ರದಾಯಿಕ ಔಷಧಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಾಂಪ್ರದಾಯಿಕ ಆಚರಣೆಗಳಲ್ಲಿ ಹಾವಿನ ರಕ್ತ ಸೇವಿಸುವ ಉದಾಹರಣೆಗಳಿವೆ. ಮಾನವನ ಜೀರ್ಣಾಂಗ ವ್ಯವಸ್ಥೆ ಹೇಗೆ ಹಾವಿನ ರಕ್ತವನ್ನು ಸ್ವೀಕರಿಸುತ್ತೆ ಎಂಬುದರ ಮಾಹಿತಿ ಇಲ್ಲಿದೆ.

34
ಹಾವಿನ ರಕ್ತ, ಮಾಂಸ ಮತ್ತು ಹಾವಿನ ವೈನ್

ಚೀನಾ, ವಿಯೆಟ್ನಾಂ, ಹಾಂಗ್ ಕಾಂಗ್ ಮತ್ತು ಇಂಡೋನೇಷ್ಯಾದಂತಹ ದೇಶಗಳು ಹಾವಿನ ರಕ್ತ, ಮಾಂಸ ಮತ್ತು ಹಾವಿನ ವೈನ್ ಅನ್ನು ಸೇವಿಸುವ ಸಂಪ್ರದಾಯಗಳನ್ನು ಹೊಂದಿವೆ. ಹಾವು ಕಚ್ಚಿದಾಗ ಅಥವಾ ಹಾವಿಮ ವಿಷವು ಗಾಯದ ಮೇಲೆ ಬಿದ್ದಾಗ ಅದು ರಕ್ತವನ್ನು ಪ್ರವೇಶಿಸಿ ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹಾವಿನ ರಕ್ತವನ್ನು ಕುಡಿದಾಗ ದೇಹ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ.

44
ಹಾವಿನ ರಕ್ತವೂ, ಹಾವಿನ ವಿಷಕ್ಕಿಂತ ಭಿನ್ನ

ಹಾವಿನ ಪಾನೀಯಗಳನ್ನು ಕುಡಿಯುವವರು ರಕ್ತಗಳನ್ನು ಶುದ್ಧೀಕರಣದ ಬಳಿಕವೇ ಕುಡಿಯುಯತ್ತಾರೆ. ಚೀನಾದಲ್ಲಿ, ಹಾವಿನ ರಕ್ತ ಮತ್ತು ಮಾಂಸವನ್ನು ಸಾಂಪ್ರದಾಯಿಕವಾಗಿ ಆರೋಗ್ಯ ವರ್ಧಕವಾಗಿ ಸೇವಿಸಲಾಗುತ್ತದೆ. ಹಾವಿನ ರಕ್ತದ ಸೇವನೆ ಚೈತನ್ಯವನ್ನು ಹೆಚ್ಚಳ ಮಾಡುತ್ತೆ ಎಂದು ಹೇಳಲಾಗುತ್ತದೆ. ವಿಯೆಟ್ನಾಂ ಮತ್ತು ಹಾಂಗ್‌ಕಾಂಗ್‌ನಲ್ಲಿ ವೈನ್ ಜೊತೆ ಹಾವಿನ ರಕ್ತ ಮಿಕ್ಸ್ ಮಾಡಿಕೊಂಡು ವಿಶೇಷ ಪಾನೀಯ ರೂಪದಲ್ಲಿ ಸೇವನೆ ಮಾಡುತ್ತಾರೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories