Hussain mansuri: ಯಾವುದೇ ಧರ್ಮ ಜಾತಿ ನೋಡದೆ ಬಡವರಿಗೆ, ಬೀದಿ ಬದಿ ಮಕ್ಕಳಿಗೆ ಕ್ಯಾನ್ಸರ್ ರೋಗಿಗಳಿಗೆ ಹೀಗೆ ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಮುಂಬೈನ ಖ್ಯಾತ ಮಾನವತಾವಾದಿ ತೊಂದರೆಗೊಳಗಾಗಿದ್ದಾರೆ, ಅವರು ಕುಂಟುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಾಯ್ತು ?
ಹುಸೈನ್ ಮನ್ಸೂರಿ(Hussain mansuri) ಯಾರಿಗೆ ತಾನೇ ಗೊತ್ತಿಲ್ಲ? ಸೋಷಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರಿಗೆ ಅವರ ಪರಿಚಯ ಇದ್ದೇ ಇರುತ್ತೆ. ಅವರಲ್ಲಿನ ಮಾನವೀಯ ಗುಣಗಳಿಂದಾಗಿ ದೇಶಾದ್ಯಂತ ಧರ್ಮಾತೀತವಾಗಿ ಕೋಟ್ಯಂತರ ಜನ ಫಾಲೋವರ್ಸ್‌ಗಳಿದ್ದಾರೆ. ಬಡವರು, ಕ್ಯಾನ್ಸರ್ ರೋಗಿಗಳು, ಬೀದಿ ಬದಿ ಮಕ್ಕಳು, ಅನಾಥರಿಗೆ ಸಹಾಯ ಮಾಡುವ ವಿಡಿಯೋ ಮೂಲಕವೇ ಅವರು ತುಂಬಾ ಪ್ರಸಿದ್ಧರು.
25
What Happened Hussain mansuri? ಹುಸೈನ್ ಮನ್ಸೂರಿಗೆ ಏನಾಯ್ತು?
ಇತ್ತೀಚೆಗೆ ಹುಸೈನ್ ಮಾನ್ಸೂರಿ ಇಬ್ಬರ ಸಹಾಯದಿಂದ ಕುಂಟುತ್ತ ನಡೆಯುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಕಾಲು, ಪಾದದ ಗಾಯಕ್ಕೆ ಪ್ಲಾಸ್ಟರ್ ಹಾಕಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅದಕ್ಕೆ ಕುಂಟುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ 'ಅಯ್ಯೋ ದೇವ್ರೇ, ದೇವ್ರಂಥ ಮನುಷ್ಯನಿಗೆ ಏನಾಯ್ತು?' ಅಂತಾ ಪ್ರತಿಯೊಬ್ಬರೂ ಅತ್ಯಂತ ಕಾಳಜಿಯಿಂದ ವಿಚಾರಿಸುತ್ತಿದ್ದಾರೆ.
35
ಹುಸೈನ್ ಮನ್ಸೂರಿಗೆ ಅಪಘಾತ?
ಹೌದು, ಹುಸೈನ್ ಮನ್ಸೂರಿಗೆ ಸಣ್ಣದಾಗಿ ಆಕ್ಸಿಡೆಂಟ್ ಆಗಿದೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ (ಜೂನ್ 11, 2026ರ ಪೋಸ್ಟ್) ಅವರೇ ಹೇಳಿಕೊಂಡಂತೆ,'ಚಾರ್ ದಿನ್ ಪೆಹ್ಲೆ ಆಕ್ಸಿಡೆಂಟ್ ಹೋ ಗಯಾ ಥಾ, ಡಿವೈಡರ್ ಪೆ ಚಲ್ ರಹಾ ಥಾ… ಪೈರ್ ಲಗ್ ಕೆ ಬೆಂಡ್ ಹೋ ಗಯಾ. ಸೋಮವಾರ್ ಕಾ ಆಪರೇಷನ್ ಹೈ.'(ನಾಲ್ಕು ದಿನಗಳ ಹಿಂದೆ ಆಕ್ಸಿಡೆಂಟ್ ಆಯ್ತು. ಡಿವೈಡರ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲಿಗೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿದಿದೆ. ಸೋಮವಾರ ಆಪರೇಷನ್ ಇದೆ) ಎಂದು ಬರೆದುಕೊಂಡಿದ್ದಾರೆ.
ಹುಸೈನ್ ಮನ್ಸೂರಿ ಮುಂಬೈನ ಖ್ಯಾತ ಮಾನವತಾವಾದಿ(ಫಿಲಾಂಟ್ರೋಪಿಸ್ಟ್), ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Influencer) ಬಡವರು, ಕ್ಯಾನ್ಸರ್ ರೋಗಿಗಳು, ಬೀದಿಬದಿ ಮಕ್ಕಳು, ಅನಾಥರು ಹೀಗೆ ನಿರ್ಗತಿಕರಿಗೆ ಬಡವರಿಗೆ ಸಹಾಯ ಮಾಡುವಲ್ಲಿ ಬಹಳ ಜನಪ್ರಿಯರು. ಅವರ ಇನ್ನೊಂದು ವಿಶೇಷ ಗುಣವೆಂದರೆ ಹೀಗೆ ಸಹಾಯ ಮಾಡುವಾಗ ಧರ್ಮ ಜಾತಿ, ಮೇಲು-ಕೀಳು ಅಂತಾ ಎಂದೂ ನೋಡಿದವರಲ್ಲ. ಪ್ರತಿಯೊಬ್ಬರಿಗೂ ಮಾನವೀಯತೆಯಿಂದ ಮಿಡಿಯುವ ಅವರ ವಿಡಿಯೋಗಳು ಎಂಥವರಿಗೂ ಮನಸು ಕರುಗುವಂತೆ ಮಾಡುತ್ತೆ.
55
ಹುಸೈನ್ ಮನ್ಸೂರಿಗೆ ಏನಾಯ್ತು?
ಬಡವರಿಗೆ ದೀನ-ದಲಿತರಿಗೆ ಸಹಾಯ ಮಾಡುವ ಹುಸೈನ್ ಮನ್ಸೂರಿ ಹುಟ್ಟಾ ಶ್ರೀಮಂತರೇನೂ ಅಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಕುಟುಂಬದಲ್ಲಿ ಹುಟ್ಟಿ, ಸ್ಲಂನಲ್ಲಿ ಬದುಕಿ ಬೆಳೆದವರು. ಅವರೇ ಹೇಳುವಂತೆ ಬಾಲ್ಯದ ಜೀವನ ತುಂಬಾ ಕಷ್ಟಕರವಾಗಿತ್ತು. ಹಸಿವು, ಸೆಕೆಂಡ್ ಹ್ಯಾಂಡ್ ಬಟ್ಟೆ ತೊಡುವುದರಲ್ಲೇ ಬಾಲ್ಯ ಕಳೆದುಹೋಯ್ತು. ಕನಿಷ್ಟ ಮೂಲಭೂತ ಅಗತ್ಯಗಳಿಗೆ ಪರದಾಡುವಂತ ಸ್ಥಿತಿ ಇತ್ತು. ಇದೆಲ್ಲದರ ನಡುವೆ ತಂದೆ-ತಾಯಿ ಕಷ್ಟದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುವಾಗ ಪಡಬಾರದ ಕಷ್ಟಪಟ್ಟ ಬಗ್ಗೆಯೂ ಸ್ಮರಿಸಿದ್ದಾರೆ.
ಇಂಥ ಕಡುಬಡತನದಲ್ಲಿ ಬೆಳೆದ ಹುಸೇನ್ ಮನ್ಸೂರಿ ಕಡು ಬಡವರು, ಅನಾಥರು ಕಂಡಾಗ ಬಾಲ್ಯದ ಜೀವನ ನೆನಪಾಗಿ ಸಹಾಯಕ್ಕೆ ದಾವಿಸುತ್ತಾರೆ. ಹೀಗೆ ಸಹಾಯ ಮಾಡುತ್ತಲೇ ಅವರಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಿಗಳಾಗಿದ್ದಾರೆ ಕೋಟ್ಯಂತರ ಫಾಲೋವರ್ಸ್‌ಗಳಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ತತ್ವದಂತೆ ಸೋಷಿಯಲ್ ಮೀಡಿಯಾದಿಂದ ಬರುವ ಹಣವನ್ನು ಬಡವರಿಗಾಗಿ ಖರ್ಚು ಮಾಡುತ್ತಲೇ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಇಂಥ ಮಾನವೀಯ ಗುಣವುಳ್ಳುವರು ಅಪಘಾತಕ್ಕೀಡಾಗಿದ್ದಾರೆ ಅವರು ಬೇಗ ಗುಣಮುಖರಾಗಲಿ ಎಂಬ ಹಾರೈಕೆ ನಮ್ಮದು, ಹುಸೈನ್ ಮನ್ಸೂರಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ