ಇದಪ್ಪಾ ಅದೃಷ್ಟ ಅಂದ್ರೆ...ಮಳೆ ಬಂತೆಂದು ಅಂಗಡಿಯೊಳಗೆ ಹೋದ್ಲು, ಬರುವಾಗ ಕೋಟ್ಯಾಧಿಪತಿಯಾದ್ಲು!

Published : Aug 23, 2025, 01:30 PM IST

ಒರ್ವ ಮಹಿಳೆ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಆದರೆ ತಾನು ಮನೆಗೆ ಹಿಂದಿರುಗಿದಾಗ ಕೋಟ್ಯಾಧಿಪತಿಯಾಗಿ ಹಿಂತಿರುಗುತ್ತೇನೆಂದು ಸ್ವತಃ ಆಕೆಗೆ ಗೊತ್ತಿರಲಿಲ್ಲ…!

PREV
16
ಮಾಂತ್ರಿಕ ಘಟನೆ

ನೀವು ಅದೃಷ್ಟ ನಂಬ್ತೀರಾ?, ಒಂದು ವೇಳೆ ನಂಬದಿದ್ರೆ ಈ ಘಟನೆಯ ಬಗ್ಗೆ ಓದಿದ ನಂತರ ಖಂಡಿತ ನಂಬಲು ಶುರು ಮಾಡ್ತೀರ. ಈ ಮಾಂತ್ರಿಕ ಘಟನೆ ನಡೆದಿರುವುದು ಚೀನಾದಲ್ಲಿ. ಅಲ್ಲಿ ಒರ್ವ ಮಹಿಳೆ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಆದರೆ ತಾನು ಮನೆಗೆ ಹಿಂದಿರುಗಿದಾಗ ಕೋಟ್ಯಾಧಿಪತಿಯಾಗಿ ಹಿಂತಿರುಗುತ್ತೇನೆಂದು ಸ್ವತಃ ಆಕೆಗೆ ಗೊತ್ತಿರಲಿಲ್ಲ.

26
ಏನಾಗುತ್ತೆಂದು ಆಕೆಗೇ ಗೊತ್ತಿರಲಿಲ್ಲ

ಮಹಿಳೆ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಬರಲು ಪ್ರಾರಂಭಿಸಿತು. ಮಳೆ ಬಂತೆಂದು ಆಕೆ ತಕ್ಷಣ ಅಂಗಡಿಗೆ ಹೋದಳು. ಅಲ್ಲಿ ಆಕೆ ಸಮಯ ಕಳೆಯಲು ಲಾಟರಿ ಟಿಕೆಟ್ ಖರೀದಿಸಿದಳು. ನಂತರ ಏನಾಗುತ್ತೆಂದು ಆಕೆಗೇ ಗೊತ್ತಿರಲಿಲ್ಲ ಬಿಡಿ.

36
ಏನಿದು ಘಟನೆ?

ವರದಿಯ ಪ್ರಕಾರ, ಅದು ಆಗಸ್ಟ್ 8. ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಯುಕ್ಸಿಯಲ್ಲಿ ಮಹಿಳೆಯೊಬ್ಬರು ಮಳೆಯಲ್ಲಿ ಸಿಲುಕಿಕೊಂಡರು. ಮಳೆಯಿಂದ ತಪ್ಪಿಸಿಕೊಳ್ಳಲು ಹತ್ತಿರದ ಲಾಟರಿ ಅಂಗಡಿಗೆ ಹೋದಳು. ಅಲ್ಲಿ ಅಂಗಡಿಯವರ ಬಳಿ "ನಿಮ್ಮ ಬಳಿ ಸ್ಕ್ರ್ಯಾಚ್ ಕಾರ್ಡ್‌ಗಳಿವೆಯೇ? ಮಳೆ ನಿಲ್ಲುವವರೆಗೆ, ನಾನು ಸ್ವಲ್ಪ ಆಟವಾಡುತ್ತೇನೆ" ಎಂದಳು.

46
ಗೆದ್ದಿದ್ದೆಷ್ಟು?

ನಂತರ ಏನಾಯಿತು...ಆ ಮಹಿಳೆ ಸುಮಾರು 30 ಟಿಕೆಟ್‌ಗಳಿದ್ದ ಒಂದು ಸಂಪೂರ್ಣ ಕಿರುಪುಸ್ತಕವನ್ನು ಖರೀದಿಸಿದಳು. ಪ್ರತಿ ಟಿಕೆಟ್‌ನ ಬೆಲೆ 30 ಯುವಾನ್ (ಸುಮಾರು 250 ರೂ.). ಅಂದರೆ ಅವಳು ಟಿಕೆಟ್‌ಗಳಿಗಾಗಿ ಒಟ್ಟು 900 ಯುವಾನ್ (ಸುಮಾರು 12,500 ರೂ.) ಖರ್ಚು ಮಾಡಿದಳು. ಆದರೆ ಆರನೇ ಟಿಕೆಟ್ ಅನ್ನು ಸ್ಕ್ರಾಚ್ ಮಾಡಿದ ತಕ್ಷಣ ಬಂತು ನೋಡಿ ಅದೃಷ್ಟ . ಹೌದು, ಅವಳು 10 ಲಕ್ಷ ಯುವಾನ್ (ಸುಮಾರು 1.4 ಕೋಟಿ ರೂ. ಅಥವಾ US$ 140,000) ಬಹುಮಾನವನ್ನು ಗೆದ್ದಳು. 

56
'ನಾನು ಕನಸಲ್ಲೂ ಕಂಡಿರಲಿಲ್ಲ...'

ಬಹುಮಾನ ಗೆದ್ದಾಗ ಆ ಮಹಿಳೆ ತುಂಬಾ ಆಶ್ಚರ್ಯಚಕಿತಳಾದಳು, ಅವಳ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. "ಹೀಗೆ ಆಗುತ್ತದೆ ಎಂದು ನಾನು ಕನಸು ಕೂಡ ಕಂಡಿರಲಿಲ್ಲ. ಬಹುಶಃ ನೀರು ನಿಜವಾಗಿಯೂ ಸಮೃದ್ಧಿಯನ್ನು ತರುತ್ತದೆ" ಎಂದಿದ್ದಾಳೆ.

66
ಎರಡು ರೀತಿಯ ಲಾಟರಿಗಳಿವೆ

ಒಟ್ಟು ಎರಡು ರೀತಿಯ ಲಾಟರಿಗಳಿವೆ ಮೊದಲನೆಯದು ಪ್ರತಿದಿನ ಅಥವಾ ಪ್ರತಿ ವಾರ ಡ್ರಾ ಮಾಡಲಾಗುವ ಲಾಟರಿ ಮತ್ತು ಎರಡನೆಯದು ಸ್ಕ್ರ್ಯಾಚ್ ಕಾರ್ಡ್, ಅದನ್ನು ಖರೀದಿಸಿದಾಗ ನೀವು ಏನನ್ನಾದರೂ ಗೆದ್ದಿದ್ದೀರಾ ಅಥವಾ ಇಲ್ಲವೇ ಎಂದು ನಿಮಗೆ ತಕ್ಷಣ ತಿಳಿಯುತ್ತದೆ.

Read more Photos on
click me!

Recommended Stories