ಹೊಸಪೇಟೆ-ಅರಸೀಕೆರೆ ಡೆಮು ವಿಶೇಷ ರೈಲು ಆರಂಭಕ್ಕೆ ಜನರ ಸಂಭ್ರಮ; ಮತ್ತೊಂದು ಬೇಡಿಕೆಯಿಟ್ಟ ಸ್ಥಳೀಯರು!

Published : Aug 28, 2026, 10:24 AM IST

ಹೊಸಪೇಟೆಜಂಕ್ಷನ್‌ನಿಂದ ಅರಸೀಕೆರೆ ಜಂಕ್ಷನ್‌ಗೆ ನೂತನ ಡೆಮು ರೈಲು ಸಂಚಾರ ಆರಂಭವಾಗಿದ್ದು, ಇದು ವಾರದಲ್ಲಿ 5 ದಿನ ಸಂಚರಿಸಲಿದೆ. ಈ ರೈಲು ಬಡ, ಮಧ್ಯಮ ವರ್ಗದ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ದೈನಂದಿನ ನೌಕರರಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಿದೆ.

PREV
14

ಹೊಸಪೇಟೆ: ವಿಜಯನಗರ, ಬಳ್ಳಾರಿ, ದಾವಣಗೆರೆ ಮತ್ತು ಹಾಸನ ಜಿಲ್ಲೆಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದ್ದು, ಹೊಸಪೇಟೆ ಜಂಕ್ಷನ್‌ನಿಂದ ಅರಸೀಕೆರೆ ಜಂಕ್ಷನ್ ನಡುವೆ ನೂತನ ಡೆಮು (DEMU) ರೈಲು ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

24

ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಸಾರ್ವಜನಿಕರು ಹಾಗೂ ಪ್ರಯಾಣಿಕರು ನೂತನ ಡೆಮು ರೈಲಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ ಸಂಭ್ರಮದಿಂದ ಬೀಳ್ಕೊಟ್ಟರು. ವಾರದಲ್ಲಿ 5 ದಿನ ಸಂಚರಿಸಲಿರುವ ಈ ವಿಶೇಷ ರೈಲು (ರೈಲು ಸಂಖ್ಯೆ: 07343 / 07344) ಬಡ ಮತ್ತು ಮಧ್ಯಮ ವರ್ಗದ ಜನರಿಗೆ, ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯದ ನೌಕರರಿಗೆ ಅತಿ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಅತ್ಯಂತ ಸಹಕಾರಿಯಾಗಲಿದೆ.

34

ಹೊಸಪೇಟೆ - ಅರಸೀಕೆರೆ ಡೆಮು ರೈಲು ಸಂಪೂರ್ಣ ವೇಳಾಪಟ್ಟಿ (Time Table):

ನಿಲ್ದಾಣದ ಹೆಸರು (Station Name) ರೈಲು ಸಂ. 07343 (ಹೊಸಪೇಟೆ - ಅರಸೀಕೆರೆ) ಆಗಮನ / ನಿರ್ಗಮನ ರೈಲು ಸಂ. 07344 (ಅರಸೀಕೆರೆ - ಹೊಸಪೇಟೆ) ಆಗಮನ / ನಿರ್ಗಮನ

ಹೊಸಪೇಟೆ ಜಂಕ್ಷನ್ (HPT) ಬೆಳಿಗ್ಗೆ 06:30 (ಹೊರಡುವುದು) ರಾತ್ರಿ 09:30 (ತಲುಪುವುದು)

ತುಂಗಭದ್ರಾ ಡ್ಯಾಂ (TBDM) 06:37 / 06:38 20:45 / 20:46

ವ್ಯಾಸನಕೇರಿ (VYS) 06:47 / 06:48 20:30 / 20:31

ವ್ಯಾಸ ಕಾಲೋನಿ (VC) 06:57 / 06:58 20:12 / 20:13

ಮಾರಿಯಮ್ಮನಹಳ್ಳಿ (MMI) 07:07 / 07:08 19:59 / 20:00

ಹಂಪಾಪಟ್ಟಣ (HPM) 07:24 / 07:25 19:46 / 19:47

ಹಗರಿಬೊಮ್ಮನಹಳ್ಳಿ (HBI) 07:39 / 07:40 19:30 / 19:31

ಕೊಟ್ಟೂರು (KTY) 08:33 / 08:35 18:53 / 18:55

ಬೆನ್ನೆಹಳ್ಳಿ (BEHI) 08:43 / 08:45 18:25 / 18:26

ಹರಪನಹಳ್ಳಿ (HPHI) 08:59 / 09:00 18:11 / 18:12

ತೆಲಿಗಿ (TLGI) 09:16 / 09:17 17:55 / 17:56

ಅಮರಾವತಿ ಕಾಲೋನಿ ಜಂ. (AVC) 09:36 / 09:38 17:30 / 17:32

ದಾವಣಗೆರೆ (DVG) 09:55 / 09:57 17:18 / 17:20

ತೊಳಹುಣಸೆ (THN) 10:08 / 10:09 17:05 / 17:06

ಹನುಮನಹಳ್ಳಿ (HNH) 10:13 / 10:14 16:59 / 17:00

ಕೊಡಗನೂರು (KAG) 10:23 / 10:24 16:54 / 16:55

ಮಾಯಿಕೊಂಡ (MYK) 10:31 / 10:32 16:45 / 16:46

ಚಿಕ್ಕಜಾಜೂರು ಜಂಕ್ಷನ್ (JRU) 10:50 / 10:55 16:25 / 16:30

ಹೊಳಲ್ಕೆರೆ (HLK) 11:05 / 11:06 16:12 / 16:13

ನುಲೇನೂರು (NLNR) 11:09 / 11:10 16:05 / 16:06

ರಾಮಗಿರಿ (RGI) 11:16 / 11:17 16:00 / 16:01

ಹೊಸದುರ್ಗ ರೋಡ್ (HSD) 11:29 / 11:30 15:48 / 15:49

ಶಿವನಿ (SHV) 11:40 / 11:41 15:38 / 15:39

ಅಜ್ಜಂಪುರ (AJP) 11:51 / 11:52 15:28 / 15:29

ಬೀರೂರು ಜಂಕ್ಷನ್ (RRB) 12:09 / 12:11 15:10 / 15:12

ಕಡೂರು (DRU) 12:21 / 12:22 15:00 / 15:01

ದೇವನೂರು (VNR) 12:43 / 12:44 14:44 / 14:45

ಬಾಣಾವರ (BVR) 12:53 / 12:54 14:34 / 14:35

ಅರಸೀಕೆರೆ ಜಂಕ್ಷನ್ (ASK) ಮಧ್ಯಾಹ್ನ 02:20 (ತಲುಪುವುದು) ಮಧ್ಯಾಹ್ನ 02:30 (ಹೊರಡುವುದು)

44

ಬಳ್ಳಾರಿವರೆಗೆ ವಿಸ್ತರಣೆಗೆ ಸಾರ್ವಜನಿಕರ ಆಗ್ರಹ:

ಈ ನೂತನ ಡೆಮು ರೈಲು ಆರಂಭವಾಗಿರುವುದು ಈ ಭಾಗದ ಜನರಿಗೆ ಹರ್ಷ ತಂದಿದ್ದರೂ, ಇದನ್ನು ಕೇವಲ ಹೊಸಪೇಟೆಗೆ ಸೀಮಿತಗೊಳಿಸದೆ ಬಳ್ಳಾರಿ ನಗರದವರೆಗೂ ವಿಸ್ತರಿಸಬೇಕು (ಸುಮಾರು 55 ಕಿ.ಮೀ) ಎಂಬ ಕೂಗು ಪ್ರಯಾಣಿಕರಿಂದ ಬಲವಾಗಿ ಕೇಳಿಬರುತ್ತಿದೆ. ಬಳ್ಳಾರಿವರೆಗೆ ವಿಸ್ತರಿಸಿದರೆ ಜಿಲ್ಲಾ ಕೇಂದ್ರಕ್ಕೆ ತೆರಳುವ ಉದ್ಯೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಾರ್ವಜನಿಕರು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Read more Photos on
click me!

Recommended Stories