ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟಿಗ ಕ್ರಶ್ ಆಗಿದ್ದ ಸ್ಮೃತಿ ಮಂಧನಾ ಅವರನ್ನೇ ಹಿಂದಿಕ್ಕುವಂತಹ ಸುಂದರಿ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದಾರೆ. ಅಷ್ಟಕ್ಕೂ ಯಾರೀಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
2026ನೇ ಸಾಲಿನ ಮಹಿಳಾ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಮೊದಲ ಪಂದ್ಯದಲ್ಲೇ ಓರ್ವ ಸುಂದರ ಮಹಿಳಾ ಕ್ರಿಕೆಟರ್, ತಮ್ಮ ಕ್ರಿಕೆಟ್ ಟ್ಯಾಲೆಂಟ್ ಜತೆಗೆ ಅದ್ಭುತ ಬ್ಯೂಟಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಇದಷ್ಟೇ ಅಲ್ಲದೇ ಮೇಧಾವಿ ಬಿಧುರಿ ದಿನಬೆಳಗಾಗುವುದರೊಳಗಾಗಿ ಫ್ಯಾನ್ಸ್ ಕ್ರಶ್ ಎನಿಸಿದ್ದಾರೆ.
26
ಪಡ್ಡೆ ಹುಡುಗರ ನಿದ್ದೆ ಕದ್ದ ಮೇಧಾವಿ
20 ವರ್ಷದ ಡೆಲ್ಲಿ ಮೂಲದ ಯುವ ಕ್ರಿಕೆಟರ್ ಮೇಧಾವಿ ಬಿಧುರಿ, ವಿಕೆಟ್ ಕಬಳಿಸುತ್ತಿದ್ದಂತೆಯೇ 6-7 ಸೆಲಿಬ್ರೇಷನ್ ಮಾಡುವುದು ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೈದಾನದಲ್ಲಿ ಮೇಧಾವಿಯ ಬ್ಯೂಟಿ ಹಾಗೂ ಸ್ಟೈಲ್ ಪಡ್ಡೆಹುಡುಗರ ನಿದ್ದೆಗೆಡಿಸುವಂತೆ ಮಾಡಿದೆ.
36
ಅಷ್ಟಕ್ಕೂ ಯಾರೀಕೆ ಮೇಧಾವಿ?
ಅಂದಹಾಗೆ ಮೇಧಾವಿ ಬಿಧುರಿ ಡೆಲ್ಲಿ ಕ್ರಿಕೆಟ್‌ನಲ್ಲಿ ಅಪರಿಚಿತ ಹೆಸರೇನೂ ಅಲ್ಲ. ಮೇಧಾವಿ ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ಮಹಿಳಾ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮೇಧಾವಿ ಬಿಧುರಿ, ಓರ್ವ ಬಲಗೈ ಲೆಗ್‌ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ 2024ರ ವುಮೆನ್ಸ್ ಪ್ರೀಮಿಯರ್ ಲೀಗ್(WPL) ಟೂರ್ನಿಯ ಆಟಗಾರ್ತಿಯರ ಹರಾಜಿಗೆ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದರು.
ಮೇಧಾವಿ ಬಿಧುರಿ ಮೈದಾನದಲ್ಲಿ ತಮ್ಮ ಅದ್ಭುತ ಬೌಲಿಂಗ್ ಜತೆಗೆ ತಮ್ಮ ಬ್ಯೂಟಿ ಹಾಗೂ ಸ್ಟೈಲ್ ಮೂಲಕವೂ ಅಭಿಮಾನಿಗಳ ಹೃದಯವನ್ನು ಸದ್ದಿಲ್ಲದೇ ಕದಿಯುತ್ತಿದ್ದಾರೆ. ಒಂದು ವೈರಲ್ ಪೋಸ್ಟ್‌ನಲ್ಲಿ ಮೇಧಾವಿ ಅವರನ್ನು ಡೆಲ್ಲಿ ಪ್ರೀಮಿಯರ್ ಲೀಗ್‌ನ ಹೊಸ ಕ್ರಶ್ ಎಂದು ಬಣ್ಣಿಸಲಾಗಿದೆ. ಮೇಧಾವಿ ಈಗ ತಮ್ಮ ಬ್ಯೂಟಿ ಜತೆಗೆ ಸ್ಟೈಲ್‌ನಲ್ಲೂ ನಂಬರ್ ಒನ್ ಎನಿಸಿಕೊಂಡಿದ್ದಾರೆ.
56
ಹೊಸ ನ್ಯಾಷನಲ್ ಕ್ರಶ್ ಮೇಧಾವಿ..?
ಇದೇ ಕಾರಣಕ್ಕೆ ಇದೀಗ ಮೇಧಾವಿ ಬಿಧುರಿ, ನ್ಯಾಷನಲ್ ಕ್ರಶ್ ಎನಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಕೆಲವು ಅಭಿಮಾನಿಗಳಂತೂ ಮೇಧಾವಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಸ್ಮೃತಿ ಮಂಧನಾ ಅವರಿಗಿಂತಲೂ ಮೇಧಾವಿ ಬಿಧುರಿ ಭಾರತದ ಅತ್ಯಂತ ಸುಂದರ ಮಹಿಳಾ ಕ್ರಿಕೆಟರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
66
ಏನಿದು ಮೇಧಾವಿಯ 6-7 ಸೆಲಿಬ್ರೇಷನ್?
ವುಮೆನ್ಸ್ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಿಧುರಿ, ಎದುರಾಳಿ ನಿಶಿಕಾ ವಿಕೆಟ್ ಕಬಳಿಸಿದ ಬಳಿಕ ಮಾಡಿದ 6-7 ಸೆಲಿಬ್ರೇಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾಕೆಂದರೆ ಆಕೆಯ ಜೆರ್ಸಿ ನಂಬರ್ 67. ಇನ್ನು ಈ ಜೆರ್ಸಿ ನಂಬರ್ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ಬಿಧುರಿಯ ಜೆರ್ಸಿ ನಂಬರ್ 12 ಆಗಿತ್ತು. ಆದರೆ ಆ ನಂಬರ್ ಬೇರೆ ಆಟಗಾರ್ತಿ ಮೊದಲೇ ಧರಿಸುತ್ತಿದ್ದುದರಿಂದ, ಈಕೆಗೆ ತಮ್ಮ ತಂಗಿ ಜೆರ್ಸಿ ನಂಬರ್ 67 ಬಳಸುವಂತೆ ಹೇಳಲಾಯಿತು. ಇದನ್ನೇ ಆಕೆ ವಿಕೆಟ್ ಪಡೆದಾಗ 6-7 ಸೆಲಿಬ್ರೇಷನ್ ಮಾಡಲಾರಂಭಿಸಿದರು.