Weight Loss girl death: ನಿದ್ದೆ ಮಾಡಿದ್ದಕ್ಕೆ ಹೊಡೆದ ಬಾಯ್‌ಫ್ರೆಂಡ್, ಸ್ಥಳದಲ್ಲೇ ಪ್ರಾಣಬಿಟ್ಟ ಗರ್ಲ್‌ಫ್ರೆಂಡ್!

Published : Jun 18, 2026, 05:59 PM IST

ತೂಕ ಇಳಿಸಲು ಸಹಾಯ ಮಾಡುವಾಗ ತನ್ನ ಗರ್ಲ್‌ಫ್ರೆಂಡ್ ನಿದ್ದೆ ಮಾಡಿದ್ದಕ್ಕೆ ಹೊಡೆದನು. ಆದರೆ, ತಕ್ಷಣವೇ ಹುಡಗಿ ಸತ್ತೇ ಹೋದಳು. ಹಲವು ವರ್ಷಗಳ ವಿಚಾರಣೆ ಬಳಿಕ, ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಶವವನ್ನು ಬಚ್ಚಿಡಲು ಯತ್ನಿಸಿದ್ದಾಗ ಸಿಕ್ಕಿಬಿದ್ದಿರುವ ರೋಚಕ ಘಟನೆ ಇಲ್ಲಿದೆ.

PREV
14

ಗರ್ಲ್‌ಫ್ರೆಂಡ್‌ಗೆ ಹೊಡೆದು ಸಾಯಿಸಿದ ಪ್ರಕರಣದಲ್ಲಿ, ಹಾಂಕಾಂಗ್ ನ್ಯಾಯಾಲಯವು ಆಕೆಯ ಬಾಯ್‌ಫ್ರೆಂಡ್‌ ಅನ್ನು ದೋಷಿ ಎಂದು ಘೋಷಿಸಿದೆ. ‘ತೂಕ ಇಳಿಸಲು ಸಹಾಯ ಮಾಡುವಾಗ ನನ್ನ ಗರ್ಲ್‌ಫ್ರೆಂಡ್ ನಿದ್ದೆ ಮಾಡಿದಳು, ಅದಕ್ಕೆ ಅವಳಿಗೆ ಹೊಡೆದೆ. ಆದರೆ, ಆಕೆ ಸತ್ತುಹೋದಳು’ ಅಂತ ಆರೋಪಿ ಹೇಳಿಕೆ ನೀಡಿದ್ದ. ಆದರೆ, ಆರೋಪಿಯ ಮಾತುಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದು ಹಾಂಕಾಂಗ್ ನ್ಯಾಯಾಲಯ ವಿಚಾರಣೆ ವೇಳೆ ಹೇಳಿದೆ.

24

ವರ್ಷಗಳ ವಿಚಾರಣೆ ಬಳಿಕ ತಪ್ಪೊಪ್ಪಿಗೆ

29 ವರ್ಷದ ನಿರುದ್ಯೋಗಿ ಎನ್‌ಜಿ ಕಾ-ಸಿಂಗ್, ತನ್ನ 30 ವರ್ಷದ ಗರ್ಲ್‌ಫ್ರೆಂಡ್‌ನನ್ನು ಕೊಂದಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ಈತ 2022ರಿಂದ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, 2022ರಲ್ಲಿ ತಮ್ಮ ಫ್ಲಾಟ್‌ನಲ್ಲಿ ಎನ್‌ಜಿ ಕಾ-ಸಿಂಗ್ ತನ್ನ ಸಂಗಾತಿಯನ್ನು ಕೊಂದಿದ್ದಾನೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು. ಇದೀಗ ಆರೋಪಿ ತಾನೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

‘ಆರೋಪಿ ಪೂರ್ತಿ ಸತ್ಯ ಹೇಳುತ್ತಿದ್ದಾನೆ ಎಂದು ನಾವು ನಂಬುವುದಿಲ್ಲ’ ಎಂದು ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಡ್ರೆ ಪರ್ವಾನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎನ್‌ಜಿ ತನ್ನ ಪ್ರೇಯಸಿ ಯಿಪ್‌ಳನ್ನು ಕೊಂದಿದ್ದಾಗಿ ಒಪ್ಪಿಕೊಂಡರೂ, ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ವಾದಿಸಿದ್ದಾನೆ. ಯಿಪ್‌ಳ ದೇಹದ ಮೇಲೆ ಶೇ. 55ರಷ್ಟು ಸುಟ್ಟ ಗಾಯಗಳಿದ್ದವು.

34

ನಿದ್ದೆ ಮಾಡಬಾರದೆಂದು ಕೋಲಿನಿಂದ ತಿವಿದಿದ್ದ

ತನ್ನ ತೂಕ ಇಳಿಸಲು ಸಹಾಯ ಮಾಡುವಾಗ ಆಕೆ ನಿದ್ದೆ ಮಾಡುವುದನ್ನು ತಡೆಯಲು, ಕೋಲಿನಿಂದ ಪದೇ ಪದೇ ತಿವಿದಿದ್ದಾಗಿ ಆತ ನ್ಯಾಯಾಲಯದಲ್ಲಿ ಹೇಳಿದ್ದಾನೆ. "ನಾನು ನಿಲ್ಲಿಸಬೇಕು ಅಂದುಕೊಂಡಿದ್ದೆ, ಆದರೆ ನಮ್ಮ ಜೊತೆ ವಾಸವಿದ್ದ ನನ್ನ ಸಹೋದರಿ ಮುಂದುವರಿಸಲು ಹೇಳಿದಳು" ಅಂತಲೂ ಆತ ಹೇಳಿದ್ದಾನೆ. ಮರುದಿನವೂ ಆತ ತನ್ನ ಗರ್ಲ್‌ಫ್ರೆಂಡ್‌ಗೆ ಹೊಡೆಯುವುದನ್ನು ಮುಂದುವರಿಸಿದ್ದ.

ಆದರೆ, ಯಿಪ್ ಒಮ್ಮೆಯೂ ಹೊಡೆಯುವುದನ್ನು ನಿಲ್ಲಿಸಲು ಹೇಳಲಿಲ್ಲವಂತೆ. ಅಷ್ಟೇ ಅಲ್ಲ, ಯಿಪ್ ಡ್ರೈ ಕ್ಲೀನರ್ ಬಾಟಲಿಯನ್ನು ನೆಲದ ಮೇಲೆ ಸುರಿದಳು, ಅದರಲ್ಲಿ ಕಾಲಿಟ್ಟು ಜಾರಿ ಹಲವು ಬಾರಿ ಬಿದ್ದು, ಗೋಡೆಗೆ ತಲೆ ಹೊಡೆದುಕೊಂಡಳು ಅಂತಲೂ ಆತ ಕಥೆ ಕಟ್ಟಿದ್ದಾನೆ. ಕೊನೆಗೆ, 2022ರ ಏಪ್ರಿಲ್ 28ರ ಮುಂಜಾನೆ 5 ಗಂಟೆಗೆ, ತನಗೆ ತುಂಬಾ ನೋವಾಗುತ್ತಿದೆ, ಜೀವ ಉಳಿಸು ಎಂದು ಯಿಪ್ ತನ್ನಲ್ಲಿ ಹೇಳಿಕೊಂಡಳು ಎಂಬುದಾಗಿ ಆತ ತಿಳಿಸಿದ್ದಾನೆ.

44

ಶವ ಬಚ್ಚಿಡಲು ಯತ್ನ

ಯಿಪ್ ಸತ್ತ ನಂತರ, ಎನ್‌ಜಿ ಆಕೆಯ ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ, ಒಂದು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಆಗ, ಯಿಪ್‌ಳ ಕಾಲು ಹೊರಗೆ ಕಾಣಿಸುತ್ತಿತ್ತು. ಇದನ್ನು ನೋಡಿದ ದಾರಿಹೋಕರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎನ್‌ಜಿ ಬಂಧನವಾಯಿತಾದರೂ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಕೊನೆಗೆ, ಹಲವು ವರ್ಷಗಳ ಕಾಲ ನಡೆದ ವಿಚಾರಣೆ ಬಳಿಕ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಶೀಘ್ರದಲ್ಲೇ ಹಾಂಕಾಂಗ್ ನ್ಯಾಯಾಲಯವು ಈತನಿಗೆ ಶಿಕ್ಷೆ ಪ್ರಕಟಿಸಲಿದೆ.

Read more Photos on
click me!

Recommended Stories