ಯಾರು ಈ ನಬಿಲ್ ಸೆಬ್ತಿ?
ಕೆಲವು ವರ್ಷಗಳ ಹಿಂದೆ 'ಅರಬ್ ಐಡಲ್' (Arab Idol) ಎನ್ನುವ ರಿಯಾಲಿಟಿ ಶೋನ ಆಡಿಷನ್‌ನಲ್ಲಿ ಭಾಗವಹಿಸಿದ್ದ ನಬಿಲ್ ಸೆಬ್ತಿ, ಹಾಡು ಹೇಳುವಾಗ ಮಧ್ಯದಲ್ಲೇ ತಡೆದುಕೊಳ್ಳಲಾಗದೆ ನಕ್ಕಿದ್ದರು. ಆ ಅವರ ವಿಚಿತ್ರವಾದ ಹಾಗೂ ಮುಗ್ಧವಾದ ನಗು ಎಷ್ಟು ವೈರಲ್ ಆಗಿತ್ತೆಂದರೆ, ಜಗತ್ತಿನ ಪ್ರತಿಯೊಬ್ಬ ನೆಟ್ಟಿಗನೂ ಆ ವಿಡಿಯೋ ನೋಡಿ ನಕ್ಕಿದ್ದನು. ಅಂದಿನಿಂದ ಇಂದಿನವರೆಗೆ ಯಾವುದೇ ತಮಾಷೆಯ ಸಂದರ್ಭ ಅಥವಾ ಮೀಮ್‌ಗಳಲ್ಲಿ ನಬಿಲ್ ಅವರ ಆ ನಗುವಿನ ವಿಡಿಯೋ ಕ್ಲಿಪ್ ಬಳಸಲಾಗುತ್ತಿದೆ.