ನಿದ್ದೆಯಲ್ಲಿ ಕನಸ್ಸೊಂದು ಬಿದ್ದಿತ್ತು. ಬಹುತೇಕರು ನಿದ್ದೆ ಕನಸ್ಸನ್ನು ಬೆನ್ನಟ್ಟಿ ಹೋಗುವುದಿಲ್ಲ. ಆದರೆ ಯುವಕ ಹಾಗೇ ಮಾಡಲಿಲ್ಲ. ಹಾದಿ ಹಿಡಿದು ಹೊರಟ ಯುವಕ ಕನಸ್ಸಿನಂತೆ ನದಿಯೊಳಗಿನ ಕಲ್ಲು ಒಡೆದಾಗ ಸಿಕ್ಕಿತ್ತು ಚಿನ್ನದ ಸಂಪತ್ತು.
ಚಿನ್ನದ ಬೆಲೆ ದುಬಾರಿಯಾಗಿರುವ ಕಾರಣ ಒಂದು ಗ್ರಾಂ ಚಿನ್ನ ಕೂಡ ಅತ್ಯಂತ ಮುಖ್ಯ. ಹೀಗೆ ಯುವಕನಿಗೆ ತನ್ನ ಮನೆಯ ಪಕ್ಕದಲ್ಲಿರುವ ನದಿಯಲ್ಲಿ ಚಿನ್ನದ ಸಂಪತ್ತು ಇರುವ ಕುಸಿತ ಕನಸ್ಸು ಬಿದ್ದಿದೆ. ಬೆಳಗಿನ ಜಾವ ಬಿದ್ದ ಕನಸ್ಸಿನ ಬಗ್ಗೆ ಯುವಕ ಆತ್ಮವಿಶ್ವಾಸದಲ್ಲಿದ್ದ. ಈ ಕನಸ್ಸಿನಂತೆ ಯುವಕ ನದಿಯೊಳಗೆ ಇಳಿದು ಕಲ್ಲು ಒಡೆದಾಗ ಅಚ್ಚರಿ ಕಾದಿತ್ತು.
26
ಕಲ್ಲು ಒಡೆದು ಚಿನ್ನ ಪತ್ತೆ ಹಚ್ಚಿದ ಯುವಕ
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇದು ಎಲ್ಲಿ ನಡೆದ ಘಟನೆ ಅನ್ನೋ ಕುರಿತು ಖಚಿತತೆ ಇಲ್ಲ. ಈ ವಿಡಿಯೋದಲ್ಲಿ ಯುವಕ ವಿಡಿಯೋ ಮೂಲಕ ನದಿಯಲ್ಲಿ ಕುಳಿತು ಚಿನ್ನದ ಸಂಪತ್ತು ಈ ಕಲ್ಲಿನಲ್ಲಿ ಅಡಗಿದೆ ಅನ್ನೋ ಕನಸ್ಸು ಬಿದ್ದಿತ್ತು. ಹೀಗಾಗಿ ಇದೇ ಜಾಗದಲ್ಲಿ ಕಲ್ಲು ಒಡೆದು ನೋಡುವುದಾಗಿ ತೋರಿಸಿದ್ದಾನೆ.
36
ಚಿನ್ನ ಸಂಗ್ರಹಿಸಿದ ಯುವಕ
ಕಲ್ಲು ಒಡೆಯಲು ಬೇಕಾದ ಸಾಮಾಗ್ರಿಯೊಂದಿಗೆ ಬಂದ ಯುವಕ ಬಳಿಕ ನಿಧಾನವಾಗಿ ಕಲ್ಲು ಒಡೆದಿದ್ದಾನೆ. ಕಲ್ಲು ಒಡೆದಾಗ ಒಳಗೆ ಚಿನ್ನ ಪತ್ತೆಯಾಗಿದೆ. ಕೆಲ ಗ್ರಾಂಗಳಷ್ಟು ಚಿನ್ನ ಕಲ್ಲಿನ ಒಳಗೆ ಹುದುಗಿರುವುದು ಪತ್ತೆಯಾಗಿದೆ. ನದಿಯೊಳಗೆ ಹುದುಗಿದ್ದ ಚಿನ್ನವನ್ನು ಯುವಕ ಸಂಗ್ರಹಿಸಿದ್ದಾನೆ.
ಇದೇ ನದಿಯ ಇದೇ ಭಾಗದಲ್ಲಿ ಚಿನ್ನ ಇರುವ ಕುರಿತು ಕನಸು ಬಿದ್ದಿತ್ತು. ಹೀಗಾಗಿ ತನ್ನ ಕನಸು ನನಸು ಮಾಡಲು ಮುಂದಾಗಿದ್ದ. ಅಚ್ಚರಿ ಎಂಬಂತೆ ಕನಸ್ಸಿನಲ್ಲಿ ಕಂಡಂತೆ ಚಿನ್ನ ಕಲ್ಲಿನೊಳಗೆ ಪತ್ತೆಯಾಗಿತ್ತು. ಕನಸ್ಸಿನಲ್ಲಿ ಹೆಚ್ಚಿನ ಚಿನ್ನದ ಸಂಪತ್ತು ಇರುವುದು ಕಂಡಿತ್ತು. ಇದೀಗ ಮತ್ತಷ್ಟು ಕಲ್ಲುಗಳನ್ನು ಒಡೆಯಲು ಯುವಕ ಮುಂದಾಗಿದ್ದಾನೆ.
56
ನಿಜಕ್ಕೂ ನಡೆಯಿತಾ ಪವಾಡ
ಈ ವಿಡಿಯೋ ಸತ್ಯಾಸತ್ಯತೆ ಕುರಿತು ಎಷ್ಯಾನೆಟ್ ಸುವರ್ಣನ್ಯೂಸ್ ಖಚಿತಪಡಿಸುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇತ್ತ ಹಲವರು ಇದು ರೀಲ್ಸ್‌ಗಾಗಿ, ವೈರಲ್ ಆಗಲು ಮಾಡಿದ ವಿಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ.
66
ಚಿನ್ನದ ಕನಸು
ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಹಲವು ವಿಡಿಯೋಗಳು ಹರಿದಾಡುತ್ತಿದೆ. ಇದೀಗ ಯುವಕನ ಕನಸ್ಸಿನಂತೆ ಹಲವರು ತಮಗೆ ಬಿದ್ದ ಚಿನ್ನದ ಕನಸು ಪರೀಕ್ಷಿಸಲು ಮುಂದಾಗಿದ್ದಾರೆ. ನಿಮಗೂ ಹೀಗೆ ಚಿನ್ನದ ಕನಸ್ಸು ಬಿದ್ದರೆ ಹಿಂಬಾಸಿದರೆ ಅಪಾಯದ ಸಾಧ್ಯತೆಯೂ ಇದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ.