AI ಫೋಟೋದಿಂದ 45 ವರ್ಷದ ಹಿಂದಿನ ಕಳ್ಳತನ ಪತ್ತೆ: ವೈರಲ್ ಕಥೆಗೆ ಪೊಲೀಸರಿಂದಲೇ ಸಿಕ್ತು ಬಿಗ್ ಟ್ವಿಸ್ಟ್!

Published : Sep 18, 2026, 01:18 PM IST

Viral crime news fact check kannada: 1980ರ ದಶಕದ AI ಫೋಟೋ ಟ್ರೆಂಡ್‌ ಬಳಸಿ ಫೋಟೋ ಹಾಕಿದ ಮಹಿಳೆಯೊಬ್ಬಳು, 45 ವರ್ಷದ ಹಿಂದೆ ನಡೆದ ಚಿನ್ನದ ಸರ ಕಳ್ಳತನ ಕೇಸ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ ಎಂಬ ಸುದ್ದಿ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಘಟನೆ ನಿಜವೇ?

PREV
15
ಈ ಇಡೀ ಕಥೆ ಸಂಪೂರ್ಣ ನಕಲಿ

ಈ ಇಡೀ ಕಥೆ ಸಂಪೂರ್ಣ ಫೇಕ್
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿಕೊಂಡು ಪೊಲೀಸರು 45 ವರ್ಷದ ಹಿಂದಿನ ಹಳೆಯ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ ಎಂಬ ಅತ್ಯಂತ ರೋಚಕ ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿರುವ ಈ ಕಥೆ ಸಿನಿಮೀಯ ರೀತಿಯಲ್ಲಿದ್ದರೂ, ಇದರ ಬೆನ್ನುಹತ್ತಿದಾಗ ಒಂದು ದೊಡ್ಡ ಸತ್ಯ ಬಯಲಾಗಿದೆ. ಅದೇನೆಂದರೆ ಈ ಇಡೀ ಕಥೆ ಸಂಪೂರ್ಣ ಫೇಕ್ (Fake)!

25
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಕಥೆಯೇನು?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಕಥೆಯೇನು?
ವೈರಲ್ ಆದ ಪೋಸ್ಟ್‌ಗಳ ಪ್ರಕಾರ, 1980ರ ದಶಕದ ಆರಂಭದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ ಆಭರಣದ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬಳು ಚಿನ್ನದ ಸರವನ್ನು ಕದ್ದು ಯಾರಿಗೂ ಸಿಗದೆ ಪರಾರಿಯಾಗಿದ್ದಳು. ನಂತರ ತನ್ನ ಗುರುತನ್ನೇ ಬದಲಾಯಿಸಿಕೊಂಡು ದಶಕಗಳ ಕಾಲ ಯಾರಿಗೂ ತಿಳಿಯದಂತೆ ಬದುಕುತ್ತಿದ್ದಳು.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 1980ರ ದಶಕದ ರೆಟ್ರೋ ಶೈಲಿಯ ಫೋಟೋಗಳನ್ನು ಸೃಷ್ಟಿಸುವ '80s AI ಫೋಟೋ ಟ್ರೆಂಡ್' ಭಾರಿ ಜನಪ್ರಿಯತೆ ಪಡೆದಿತ್ತು. ಆ ಮಹಿಳೆಯೂ ತಮಾಷೆಗಾಗಿ ಈ ಟ್ರೆಂಡ್ ಬಳಸಿ ತನ್ನ ಹಳೆಯ ಶೈಲಿಯ ಎಐ ಫೋಟೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಕಾಕತಾಳೀಯ ಎಂಬಂತೆ, ಅಂದು ಚಿನ್ನ ಕಳೆದುಕೊಂಡಿದ್ದ ಅದೇ ಜ್ಯುವೆಲರಿ ಮಾಲೀಕನ ಕಣ್ಣಿಗೆ ಈ ಫೋಟೋ ಬಿದ್ದಿದ್ದು, 45 ವರ್ಷಗಳ ಹಿಂದೆ ಚಿನ್ನ ಕದ್ದ ಮಹಿಳೆ ಈಕೆಯೇ ಎಂದು ಆತ ಗುರುತಿಸಿದ್ದ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆ ಮಹಿಳೆಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ, ವಿಚಾರಣೆ ವೇಳೆ ಆಕೆ ಹಳೆಯ ಕಳ್ಳತನವನ್ನು ಒಪ್ಪಿಕೊಂಡಿದ್ದಾಳೆ ಎಂದು ಸುದ್ದಿ ಹಬ್ಬಿಸಲಾಗಿತ್ತು.

35
ಫ್ಯಾಕ್ಟ್ ಚೆಕ್‌ನಲ್ಲಿ ಬಯಲಾದ ಅಸಲಿ ಸತ್ಯವೇನು?

ಫ್ಯಾಕ್ಟ್ ಚೆಕ್‌ನಲ್ಲಿ ಬಯಲಾದ ಅಸಲಿ ಸತ್ಯವೇನು?
ಈ ವೈರಲ್ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಉಜ್ಜಯಿನಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದು ಸಾಬೀತಾಗಿದೆ. ಉಜ್ಜಯಿನಿ ಪೊಲೀಸರಿಂದ ಇಂತಹ ಯಾವುದೇ 45 ವರ್ಷಗಳ ಹಳೆಯ ಕೇಸ್ ರೀ-ಓಪನ್ ಆದ ಬಗ್ಗೆಯಾಗಲಿ ಅಥವಾ ಮಹಿಳೆಯೊಬ್ಬಳನ್ನು ಬಂಧಿಸಿದ ಬಗ್ಗೆಯಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

45
ಕಾಲ್ಪನಿಕ ಕಥೆ

ಕಾಲ್ಪನಿಕ ಕಥೆ
ಯಾರೋ ಸೋಶಿಯಲ್ ಮೀಡಿಯಾದಲ್ಲಿ ಕೇವಲ ವ್ಯಂಗ್ಯ ಅಥವಾ ಮನರಂಜನೆಗಾಗಿ (Satirical/Fictional Post) ಬರೆದ ಕಥೆಯನ್ನು ಕೆಲವರು ನೈಜ ಘಟನೆ ಎಂದು ಭಾವಿಸಿ, ಸತ್ಯಾಸತ್ಯತೆ ಪರಿಶೀಲಿಸದೆ ಹಂಚಿಕೊಂಡಿದ್ದಾರೆ.

55
ಕಪೋಲಕಲ್ಪಿತ ಸುಳ್ಳು ಸುದ್ದಿ

ಕಪೋಲಕಲ್ಪಿತ ಸುಳ್ಳು ಸುದ್ದಿ
AI ಟ್ರೆಂಡ್‌ ಒಂದು ಹಳೆಯ ಅಪರಾಧವನ್ನು ಪತ್ತೆಹಚ್ಚಲು ಸಹಾಯ ಮಾಡಿತು ಎಂಬ ಕಥೆ ಕೇಳಲು ಸಿನಿಮಾದಂತೆ ಅತ್ಯಂತ ರೋಚಕವಾಗಿದ್ದರೂ, ವಾಸ್ತವದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಇದು ಕೇವಲ ಇಂಟರ್ನೆಟ್‌ನಲ್ಲಿ ಹರಿದಾಡಿದ ಕಪೋಲಕಲ್ಪಿತ ಸುಳ್ಳು ಸುದ್ದಿಯಾಗಿದೆ.

Read more Photos on
click me!

Recommended Stories