ಯುಟ್ಯೂಬರ್ ಪ್ರಕಾಶ್ ಕಲಬುರಗಿ ನಿಶ್ಚಿತಾರ್ಥ ವಿಡಿಯೋ : ಮಲ್ಲಿಗೆ ಮುಡಿದು ಬಂದ ವಧು!

Published : Sep 16, 2026, 11:25 AM IST

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಪ್ರಕಾಶ್ ಕಲಬುರಗಿ ಅವರ ನಿಶ್ಚಿತಾರ್ಥದ ವಿಡಿಯೋವೊಂದು ವೈರಲ್ ಆಗಿದೆ. ಶಾಸ್ತ್ರೋಕ್ತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಧುವನ್ನು ನೋಡಿದ ತಕ್ಷಣ ಪ್ರಕಾಶ್ ಓಡಿಹೋಗಿದ್ದಾರೆ.

PREV
15
ಪ್ರಕಾಶ್ ಕಲಬುರಗಿ ನಿಶ್ಚಿತಾರ್ಥ

ಕನ್ನಡದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಪ್ರಕಾಶ್ ಕಲಬುರಗಿ ತಮ್ಮ ತಮಾಷೆ ವಿಡಿಯೋಗಳ ಮೂಲಕವೇ ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಪ್ರಕಾಶ್ ಕಲಬುರಗಿಯವರ ನಿಶ್ವಿತಾರ್ಥದ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ರೀಲ್ಸ್ ನೋಡಿದ ಜನರು, ಯಪ್ಪಾ, ಇದೆಂಥಾ ವಿಡಿಯೋ? ಇಲ್ಲಿಯೂ ಇಷ್ಟೊಂದು ತಮಾಷೆ ಎಂದು ಕಮೆಂಟ್ ಮಾಡಿದ್ದಾರೆ.

25
ಗೆಳೆಯರು ಮತ್ತು ಕುಟುಂಬದ ಜೊತೆ ಆಗಮಿಸಿದ ಪ್ರಕಾಶ್

ಇತ್ತೀಚಿನ ದಿನಗಳಲ್ಲಿ ಹೆಣ್ಣು ನೋಡುವ ಶಾಸ್ತ್ರ ಮತ್ತು ಸರಳವಾಗಿ ನಡೆಯುವ ನಿಶ್ಚಿತಾರ್ಥದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಅದೇ ಮಾದರಿಯಲ್ಲಿಯೇ ಪ್ರಕಾಶ್ ಕಲಬುರಗಿಯವರ ನಿಶ್ಚಿತಾರ್ಥದ ವಿಡಿಯೋ ಸಹ ವೈರಲ್ ಆಗುತ್ತಿದೆ. ತಮ್ಮ ಗೆಳೆಯರೊಂದಿಗೆ ಬರುವ ಪ್ರಕಾಶ್ ಅವರಿಗೆ ಹೆಣ್ಣಿನ ಕಡೆಯುವರು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿಕೊಳ್ಳುತ್ತಾರೆ.

35
ಪ್ರಕಾಶ್ ಮುಖದಲ್ಲಿ ವರನ ಕಳೆ

ಪ್ರಕಾಶ್ ಮನೆಯೊಳಗೆ ಬರುತ್ತಿದ್ದಂತೆ ಅಲ್ಲಿದ್ದ ಹಿರಿಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಂತರ ಮಹಿಳೆಯರು ಪರಸ್ಪರರು ಅರಿಶಿನ-ಕುಂಕುಮ ವಿತರಿಸಿಕೊಳ್ಳುತ್ತಾರೆ. ಓರ್ವ ವ್ಯಕ್ತಿ ಬಂದು ಪ್ರಕಾಶ್‌ ಅವರ ಹಣೆಗೆ ವಿಭೂತಿ ಮತ್ತು ಕುಂಕುಮ ಹಚ್ಚಿ ಸಿಹಿ ತಿನ್ನಿಸುತ್ತಾರೆ. ಆ ಬಳಿಕ ವರ ಪ್ರಕಾಶ್ ಅವರಿಗೆ ಟೋಪಿ ಮತ್ತು ಕೊರಳಿಗೆ ಟವರ್ ಹಾಕಿ ಗೌರವಿಸಲಾಗುತ್ತದೆ. ಟೋಪಿ, ಟವಲ್ ಮತ್ತು ಕುಂಕುಮ ಹಚ್ಚಿಕೊಳ್ಳುತ್ತಿದ್ದಂತೆ ಪ್ರಕಾಶ್ ಮುಖದಲ್ಲಿ ವರನ ಕಳೆ ಎದ್ದು ಕಾಣುತ್ತದೆ.

45
ಹುಡುಗಿಯನ್ನು ನೋಡ್ತಿದ್ದಂತೆ ಕಾಲ್ಕಿತ್ತ ಪ್ರಕಾಶ್

ಇನ್ನೇನು ಹುಡುಗಿ ಯಾರು ಎಂದು ತಿಳಿದುಕೊಳ್ಳುವಷ್ಟರಲ್ಲಿ ತಮ್ಮೆಲ್ಲಾ ವೀಕ್ಷಕರಿಗೆ ಪ್ರಕಾಶ್ ಕಲಬುರಗಿ ಅವರು ಕಚಗುಳಿಯ ಶಾಕ್ ನೀಡಿದ್ದಾರೆ. ಹುಡುಗಿಯನ್ನು ನೋಡುತ್ತಿದ್ದಂತೆ ಪ್ರಕಾಶ್ ತಮ್ಮ ಗೆಳೆಯರೊಂದಿಗೆ ಓಡಿ ಹೊರಗೆ ಬಂದಿದ್ದಾರೆ. ಇವರ ಹಿಂದೆಯೇ ಹುಡುಗಿ ಸಹ ಓಡಿ ಬರೋದನ್ನು ವೈರಲ್ ವಿಡಿಯೋದಲ್ಲ ನೋಡಬಹುದಾಗಿದೆ. ಪ್ರಕಾಶ್ ಓಡಿ ಬಂದಿದ್ಯಾಕೆ? ವಧು ಯಾರು ಎಂಬುದನ್ನು ನೋಡೋಣ ಬನ್ನಿ.

55
ವಧುವಾಗಿ ಬಂದ ಗೆಳೆಯ ರವಿ

ಪ್ರಕಾಶ್ ಜೊತೆಯಲ್ಲಿ ರವಿ ಎಂಬ ಅದ್ಭುತ ಕಲಾವಿದರ ಕಾಣಿಸುತ್ತಾರೆ. ಪ್ರಕಾಶ್ ಮತ್ತು ರವಿ ಇಬ್ಬರು ನೈಟಿಯೊಂದನ್ನು ಧರಿಸಿ, ಹೆಗಲ ಮೇಲೆ ದುಪ್ಪಟ್ಟಾ ಹಾಕಿಕೊಂಡು ಮಹಿಳೆಯರ ರೀತಿ ಗಾಸಿಪ್ ಮಾಡುವ ರೀಲ್ಸ್ ಮಾಡುತ್ತಾರೆ. ಈ ರೀಲ್ಸ್‌ಗಳಲ್ಲಿ ಇಬ್ಬರ ಕಾಂಬಿನೇಷನ್ ಸಖತ್ ಫೇಮಸ್ ಆಗಿದೆ.

ಪ್ರಕಾಶ್ ತಮ್ಮ ನಿಶ್ಚಿತಾರ್ಥ ಎಂದು ಹಂಚಿಕೊಂಡಿರೋ ವಿಡಿಯೋದಲ್ಲಿ ಹುಡುಗಿಯಾಗಿ ಬಂದಿದ್ದು ಇದೇ ರವಿ. ಆರಂಭದಿಂದಲೂ ಇದೊಂದು ನಿಜವಾದ ನಿಶ್ಚಿತಾರ್ಥದಂತೆ ಕಂಡ್ರೂ ಕೊನೆಗೆ ವಧುವಿನ ರೂಪದಲ್ಲಿರುವ ರವಿ ಅವರನ್ನು ನೋಡಿ ವೀಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

Read more Photos on
click me!

Recommended Stories