Job seekers ಸಾಮಾನ್ಯವಾಗಿ ಕಂಪನಿಯಿಂದ rejection mail ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ job seeker ಕೊಟ್ಟ reply ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಮೇಲ್ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಕಂಪನಿಯಿಂದ “ನೀವು ಆಯ್ಕೆಯಾಗಿಲ್ಲ” ಅನ್ನೋ ಮೇಲ್ ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ ಉದ್ಯೋಗ ಹುಡುಕೋರ ಕೊಟ್ಟ ಉತ್ತರವೇ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ.
24
ಅಭ್ಯರ್ಥಿ ಪಂಚಿಂಗ್ ಉತ್ತರ
ಕಂಪನಿಯಿಂದ “ಈ ಹುದ್ದೆಗೆ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ” ಎಂದು ಮೇಲ್ ಬಂದಿತ್ತು. ಆದರೆ ಅದಕ್ಕೆ ಅಭ್ಯರ್ಥಿ ಕೊಟ್ಟ ಉತ್ತರ ಮಾತ್ರ ಸಿಕ್ಕಾಪಟ್ಟೆ ವಿಭಿನ್ನವಾಗಿತ್ತು.
“ನಿಮ್ಮ ರಿಜೆಕ್ಷನ್ ಅನ್ನು ನಾನು ಒಪ್ಪೋದಿಲ್ಲ” ಎಂದು ಆರಂಭಿಸಿದ ಆತ, “ಇಷ್ಟು ದಿನ ಕಂಪನಿಗಳು ಮಾತ್ರ ಅಭ್ಯರ್ಥಿಗಳನ್ನು ತಿರಸ್ಕರಿಸುತ್ತಿದ್ದವು, ಈಗ ಅಭ್ಯರ್ಥಿಗಳಿಗೂ ಕಂಪನಿಯನ್ನು ತಿರಸ್ಕರಿಸುವ ಹಕ್ಕಿದೆ” ಎಂದು ಫನ್ನಿಯಾಗಿ ಬರೆದಿದ್ದಾನೆ.
34
ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಈ ಮೇಲ್‌ನ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ನಕ್ಕಿದ್ದಾರೆ. ಕೆಲವರು “ಇದು ನಿಜವಾದ ರಿವರ್ಸ್ ಆಟ” ಎಂದರೆ, ಇನ್ನೂ ಕೆಲವರು “ಈ ಆತ್ಮವಿಶ್ವಾಸ ಇದ್ದರೆ ಇನ್ನೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತೆ” ಎಂದು ಕಾಮೆಂಟ್ ಮಾಡಿದ್ದಾರೆ.
44
ಉದ್ಯೋಗ
ಇತ್ತೀಚೆಗೆ ಉದ್ಯೋಗ ಹುಡುಕಾಟದಲ್ಲಿ ಹಲವರು ಎದುರಿಸುತ್ತಿರುವ ನಿರಾಕರಣೆ, ಉತ್ತರವೇ ಬರದ ಇಂಟರ್ವ್ಯೂಗಳು ಮತ್ತು ಒತ್ತಡದ ನಡುವೆ ಈ ಫನ್ನಿ ಉತ್ತರ ಹಲವರಿಗೆ ರಿಲೇಟ್ ಆಗಿದೆ.
ಒಟ್ಟಿನಲ್ಲಿ, ಒಂದು ಸಾಮಾನ್ಯ ರಿಜೆಕ್ಷನ್ ಮೇಲ್‌ಗೆ ಬಂದ ಈ ಮಜಾದಾರ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಗೆ ಫುಲ್ ಎಂಟರ್ಟೈನ್‌ಮೆಂಟ್ ನೀಡುತ್ತಿದೆ.