ಈ ಸಮಯದಲ್ಲಿ ಒಗೆದ ಬಟ್ಟೆಗಳನ್ನ ಹೊರಗೆ ಹಾಕುತ್ತಿದ್ದೀರಾ? ವಾಸ್ತು ಮಾತ್ರವಲ್ಲ, ವಿಜ್ಞಾನವೂ ಹೇಳೋದು 'ಇದು ತಪ್ಪಂತೆ'

Published : Aug 21, 2026, 02:33 PM IST

Vastu tips for laundry: ಸಮಯದ ಅಭಾವದಿಂದ ನೀವು ಈ ಸಮಯದಲ್ಲಿ ಬಟ್ಟೆಗಳನ್ನು ಹೊರಗೆ ಒಣಗಿಸುತ್ತಿದ್ದೀರಾ? ಹಾಗಿದ್ದರೆ ಎಚ್ಚರ! ಈ ಸಣ್ಣ ತಪ್ಪು ನಿಮ್ಮ ಮನೆಯ ಸಕಾರಾತ್ಮಕ ಶಕ್ತಿಯನ್ನು ಕುಂದಿಸಿ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

PREV
14
ವಾಸ್ತು ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ

ವಾಸ್ತು ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ
ಇಂದಿನ ಒತ್ತಡದ ಜೀವನದಲ್ಲಿ ಅನೇಕರಿಗೆ ಮನೆಯ ಕೆಲಸಗಳನ್ನು ಮಾಡಲು ಸರಿಯಾದ ಸಮಯ ಸಿಗುವುದಿಲ್ಲ. ಹೀಗಾಗಿ, ತಮಗೆ ಬಿಡುವಾದ ಸಮಯದಲ್ಲಿ ಜನರು ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಬೆಳಗ್ಗೆ ಸಮಯವಿಲ್ಲದ ಕಾರಣ ರಾತ್ರಿ ಬಟ್ಟೆಗಳನ್ನು ಒಗೆದು ಮನೆಯ ಹೊರಗೆ ಒಣಗಲು ಹಾಕುತ್ತಾರೆ. ಈ ಬಟ್ಟೆಗಳು ಇಡೀ ರಾತ್ರಿ ಹೊರಗೆ ತೂಗಾಡುತ್ತಿದ್ದು, ಮರುದಿನ ಬೆಳಗ್ಗೆ ಅಥವಾ ಮಧ್ಯಾಹ್ನ ಅವುಗಳನ್ನು ಒಳಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ವೇಳೆ ಬಟ್ಟೆಗಳನ್ನು ಹೊರಗೆ ಒಣಗಿಸುವುದು ಮನೆಗೆ ಒಳ್ಳೆಯದಲ್ಲ ಎಂದು ಪಂಡಿತರು ಎಚ್ಚರಿಸಿದ್ದಾರೆ. ಇದರ ಹಿಂದಿರುವ ವಾಸ್ತು ಮತ್ತು ವೈಜ್ಞಾನಿಕ ಕಾರಣಗಳು ಇಲ್ಲಿವೆ..

24
ನಕಾರಾತ್ಮಕ ಶಕ್ತಿಯ ಪ್ರವೇಶ

ನಕಾರಾತ್ಮಕ ಶಕ್ತಿಯ ಪ್ರವೇಶ
ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ವೇಳೆ ಮನೆಯ ಹೊರಗೆ ಬಟ್ಟೆಗಳನ್ನು ಒಣಗಿಸುವುದು ಒಳ್ಳೆ ಅಭ್ಯಾಸವಲ್ಲ, ಇದು ಮನೆಯ ವಾತಾವರಣವನ್ನು ಹಾಳುಮಾಡುವುದಲ್ಲದೆ, ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯ (Positive Energy) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಗಲಿನ ವೇಳೆ ಬರುವ ಶಕ್ತಿಗೂ ಮತ್ತು ರಾತ್ರಿ ವೇಳೆ ಇರುವ ಶಕ್ತಿಗೂ ಬಹಳ ವ್ಯತ್ಯಾಸವಿರುತ್ತದೆ. ರಾತ್ರಿ ಹೊತ್ತು ಒದ್ದೆ ಬಟ್ಟೆಗಳನ್ನು ದೀರ್ಘಕಾಲದವರೆಗೆ ಹೊರಗೆ ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ (Negative Energy) ಪ್ರವೇಶಿಸಲು ಅವಕಾಶವಾಗುತ್ತದೆ. ಇದು ಮನೆಯಲ್ಲಿ ಅಶಾಂತಿ, ಒತ್ತಡ ಮತ್ತು ಮನಸ್ಸಿನ ಭಾರಕ್ಕೆ ಕಾರಣವಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ, ಸೂರ್ಯಾಸ್ತಕ್ಕೆ ಮುನ್ನವೇ ಬಟ್ಟೆಗಳನ್ನು ಒಳಗೆ ತರುವುದು ಶ್ರೇಯಸ್ಕರ.

34
ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು (ವೈಜ್ಞಾನಿಕ ಕಾರಣ)

ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು (ವೈಜ್ಞಾನಿಕ ಕಾರಣ)
ವೈಜ್ಞಾನಿಕವಾಗಿ ನೋಡುವುದಾದರೆ, ರಾತ್ರಿಯಿಡೀ ಬಟ್ಟೆಗಳನ್ನು ಹೊರಗೆ ಒಣಗಲು ಬಿಡುವುದು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ರಾತ್ರಿಯ ತಂಪಾದ ವಾತಾವರಣದಲ್ಲಿ ಬಟ್ಟೆಗಳು ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಸಿಕೊಳ್ಳುತ್ತವೆ. ಇಂತಹ ತೇವಾಂಶಭರಿತ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ (ಶಿಲೀಂಧ್ರ) ಸುಲಭವಾಗಿ ವೃದ್ಧಿಯಾಗುತ್ತವೆ. ಅಂತಹ ಬಟ್ಟೆಗಳನ್ನು ಧರಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಅಥವಾ ಅಲರ್ಜಿಗಳು ಕಾಣಿಸಿಕೊಳ್ಳಬಹುದು.

44
ಸೂರ್ಯನ ಬೆಳಕಿನ ಮಹತ್ವ

ಸೂರ್ಯನ ಬೆಳಕಿನ ಮಹತ್ವ
ಹಗಲಿನ ಹೊತ್ತು ಸೂರ್ಯನ ರಶ್ಮಿಗಳು ಬಟ್ಟೆಗಳ ಮೇಲೆ ಬಿದ್ದಾಗ, ಅವು ಬಟ್ಟೆಯಲ್ಲಿರುವ ಕ್ರಿಮಿಗಳನ್ನು ಕೊಲ್ಲುತ್ತವೆ ಮತ್ತು ಬಟ್ಟೆಗಳಿಗೆ ಸಕಾರಾತ್ಮಕ ಕಳೆಯನ್ನು ನೀಡುತ್ತವೆ. ಸೂರ್ಯನ ಬೆಳಕಿನಲ್ಲಿ ಒಣಗಿದ ಬಟ್ಟೆಗಳನ್ನು ಧರಿಸುವುದು ಆರೋಗ್ಯಕ್ಕೂ ಮತ್ತು ಮನಸ್ಸಿಗೂ ಹಿತಕರ. ಆದ್ದರಿಂದ, ಬಟ್ಟೆಗಳನ್ನು ಯಾವಾಗಲೂ ಸೂರ್ಯನ ಬೆಳಕು ತಗಲುವಂತೆ ಹೊರಗೆ ಒಣಗಿಸಿ ಮತ್ತು ಸೂರ್ಯಾಸ್ತದ ಮೊದಲು ಅವುಗಳನ್ನು ಒಳಗೆ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ಕಾಪಾಡಲು ಸಹಾಯ ಮಾಡುತ್ತದೆ.

Read more Photos on
click me!

Recommended Stories