Published : May 30, 2025, 04:23 PM ISTUpdated : May 30, 2025, 04:27 PM IST
ಮನೆಯ ಮುಖ್ಯ ದ್ವಾರವು ವಾಸ್ತು ಪ್ರಕಾರ ಇಂಥದ್ದೇ ದಿಕ್ಕಲ್ಲಿದ್ದರೆ ಶುಭ. ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟ ಎದುರಾಗಬಹುದು. ವಾಸ್ತು ಪ್ರಕಾರ ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆ ಮುಖ್ಯ ದ್ವಾರವಿದ್ದರೆ ಶುಭ.
ಮನೆ ವಾಸ್ತು ಸರಿ ಇದ್ದರೆ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಲಾಭಗಳಿವೆ. ಅದೇ ಹಾಗಿಲ್ಲದಿದ್ದಲ್ಲಿ ಅನೇಕ ರೀತಿಯ ತೊಂದರೆಯೂ ಸುಖಾ ಸುಮ್ನೆ ಎದುರಿಸಬೇಕಾಗಬಹುದು. ಪೂರ್ವ, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಲಕ್. ಹಾಗೆಯೇ ದಕ್ಷಿಣದಲ್ಲಿದ್ದರೆ ಅಶುಭ. ಆದರೆ ರಾಶಿಗೂ, ದಿಕ್ಕಿಗೂ ಸಂಬಂಧವಿರುವ ಕಾರಣ ರಾಶಿಯನುಸಾರ ಕೆಲವರಿಗೆ ಕೆಲವು ದಿಕ್ಕಿನ ಮನೆಗಳು ಲಕ್ ತರುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಮನೆ ಯಾವ ರಾಶಿಗೆ ಶುಭ ತರುತ್ತದೆ?
212
ಮೇಷ
ಮಂಗಳ ಗ್ರಹ ಅಧಿಪತಿ ಆಗಿರುವ ಮೇಶ ರಾಶಿಗೆ ದಕ್ಷಿಣ ದಿಕ್ಕಲ್ಲಿರುವ ಮನೆ ಶುಭವನ್ನುಂಟು ಮಾಡುತ್ತದೆ. ದಕ್ಷಿಣ ದಿಕ್ಕಲ್ಲಿರುವ ಮನೆಯಲ್ಲಿರುವುದರಿಂದ ಈ ರಾಶಿಯವರ ಸಮಗ್ರ ವಿಕಾಸದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.
312
ವೃಷಭ
ವೃಷಭ ರಾಶಿಗೆ ಮನೆಯ ಮುಖ್ಯದ್ವಾರ ದಕ್ಷಿಣ ದಿಕ್ಕಿಗಿದ್ದರೆ ಅಶುಭ. ಹೀಗಿದ್ದಾಗ ಯಾವುದೇ ಕೆಲಸಗಳು ಸುಗಮವಾಗಿ ಪೂರ್ಣವಾಗುವುದಿಲ್ಲ. ಪ್ರತಿಯೊಂದಕ್ಕೂ ಸಂಕಷ್ಟ ಎದುರಿಸುತ್ತಾರೆ.
ಮಿಥುನ ರಾಶಿಯವರಿಗೂ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಆಗುವುದಿಲ್ಲ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರು ದಕ್ಷಿಣ ದಿಕ್ಕಿಗಿರುವ ಮನೆಯಲ್ಲಿ ವಾಸಿಸಿದರೆ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿರುತ್ತದೆ.
512
ಕರ್ಕಾಟಕ ರಾಶಿ
ವೈದಿಕ ಜ್ಯೋತಿಷ್ಯದ ಪ್ರಕಾರ ಕರ್ಕ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಶುಭ. ಅತ್ಯಂತ ಶುಭ ನೀಡುವ ದಕ್ಷಿಣ ದಿಕ್ಕಿನಲ್ಲಿ ಬಾಗಿಲಿನ ಮನೆಯಲ್ಲಿ ಈ ರಾಶಿಯವರು ವಾಸ ಮಾಡಿದರೆ ಸಮಾಜದಲ್ಲಿ ಗೌರವ ಹೆಚ್ಚುವುದಲ್ಲದೆ, ಸ್ವಾಸ್ಥ್ಯದಲ್ಲಿ ಲಾಭ, ಆರ್ಥಿಕ ಸಮೃದ್ಧಿ ಮತ್ತು ವೃತ್ತಿಯಲ್ಲಿ ಏಳಿಗೆ ಕಾಣುತ್ತಾರೆ.
612
ಸಿಂಹ (Leo)
ಸಿಂಹ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಹೆಚ್ಚು ಶುಭ. ವೈದಿಕ ಜ್ಯೋತಿಷ್ಯದಲ್ಲಿ ಸಿಂಹ ರಾಶಿಯವರಿಗೆ ಇಂಥ ಮನೆ ಭಾಗ್ಯ ತರುತ್ತದೆ. ಸುಖ-ಸಮೃದ್ಧಿ ಮತ್ತು ಸಾಮಾಜಿಕ ಘನತೆ ವೃದ್ಧಿಸುತ್ತದೆ.
712
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ದಕ್ಷಿಣ ದಿಕ್ಕಲ್ಲಿರುವ ಮನೆ ಸಮಸ್ಯೆಗಳ ಆಗರ. ಹಾಗಾಗಿ ಈ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ವಾಸಕ್ಕೆ ಯೋಗ್ಯವಲ್ಲ. ಹಾಗೆ ವಾಸಿಸಿದಲ್ಲಿ ಸುಮ್ಮನೆ ಸಮಸ್ಯೆಗಳನ್ನು ಮೈ ಮೇಲೆ ಎಳೆದು ಕೊಳ್ಳಬೇಕಾಗುತ್ತದೆ.
812
ತುಲಾ ರಾಶಿ
ತುಲಾ ರಾಶಿಯವರಿಗೆ ದಕ್ಷಿಣ ದ್ವಾರವಿರುವ ಮನೆ ಮಿಶ್ರ ಫಲ ನೀಡುತ್ತದೆ. ದಕ್ಷಿಣಕ್ಕೆ ಬಾಗಿಲಿರುವ ಮನೆಯಲ್ಲಿ ಈ ರಾಶಿಯವರು ಸಾಧಾರಣ ಮಟ್ಟಿಗೆ ಅಭಿವೃದ್ಧಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
912
ವೃಶ್ಚಿಕ ರಾಶಿ
ದಕ್ಷಿಣ ದಿಕ್ಕಿನಲ್ಲಿರುವ ಮನೆ ವೃಶ್ಚಿಕ ಈ ರಾಶಿಯವರಿಗೆ ಶುಭ. ಈ ದಿಕ್ಕಿನಲ್ಲಿ ಮನೆ ಬಾಗಿಲು ಇರುದರಿಂದ ಈ ರಾಶಿಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ. ವೃತ್ತಿಯಲ್ಲಿ ಯಶಸ್ಸು ಕಾಣಬಹುದಾಗಿದ್ದು, ಆತ್ಮಬಲ ಹೆಚ್ಚುತ್ತದೆ.
1012
ಧನು ರಾಶಿ
ಧನು ರಾಶಿಯವರಿಗೆ ಪೂರ್ವ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರವಿದ್ದರೆ ಶುಭ. ಜ್ಞಾನ ಹಾಗೂ ಅಧ್ಯಾತ್ಮ ಬೆಳವಣಿಗೆಯೊಂದಿಗೆ ಈ ಈಸ್ಟ್ ಫೇಸಿಂಗ್ ಬಾಗಿಲು ಧನು ರಾಶಿಯವರಿ ಅದೃಷ್ಟದ ಬಾಗಿಲನ್ನೇ ತೆರೆಯುತ್ತದೆ.
1112
ಕುಂಭ ರಾಶಿ
ಈ ರಾಶಿಯವರಿಗೆ ದಕ್ಷಿಣಕ್ಕೆ ಮುಖ್ಯ ದ್ವಾರವಿರುವ ಮನೆ ಶುಭವಲ್ಲ. ಕುಂಭ ರಾಶಿಯವರು ಇಂಥ ಮನೆಯಲ್ಲಿ ವಾಸಿಸಿದರೆ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದಕ್ಕೂ ಕಷ್ಟ ಪಡಬೇಕು. ಎಷ್ಟೇ ಪರಿಶ್ರಮವನ್ನು ಹಾಕಿ ಕೆಲಸ ಮಾಡಿದ್ರೂ ತಕ್ಕ ಫಲ ಸಿಗುವುದಿಲ್ಲ.
1212
ಮೀನ ರಾಶಿ
ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆ ಮೀನ ರಾಶಿಯವರಿಗೆ ಶುಭ. ಇಂಥ ಮನೆಯಲ್ಲಿ ವಾಸಿಸಿದರೆ ಅದೃಷ್ಟದ ಬಾಗಿಲೂ ತೆರೆಯುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದಲ್ಲದೇ, ಸಾಮಾಜಿಕ ಮತ್ತು ಆರ್ಥಿಕವಾಗಿಯೂ ಉತ್ತಮ ಸ್ಥಿತಿಯಲ್ಲಿರುತ್ತಾರೆ.