ಯಾರಾದ್ರೂ ಮನೆಯಿಂದ ಹೊರ ಹೋಗುವಾಗ ಯಾಕೆ ಗುಡಿಸಬಾರದು?

First Published Aug 5, 2023, 3:41 PM IST

ಪೊರಕೆಗಳಿಗೆ ಸಂಬಂಧಿಸಿದ ಕೆಲವು ನಂಬಿಕೆಗಳಿವೆ, ಅವುಗಳನ್ನು ನಾವು ಶತಮಾನಗಳಿಂದ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಅಂತೆಯೇ, ಇದಕ್ಕೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳಿವೆ, ಅದು ನಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಕೆಲವು ದುಃಖವನ್ನು ತರುತ್ತೆ.
 

ನಮ್ಮ ಜೀವನದಲ್ಲಿ ವಾಸ್ತುವಿಗೆ (vast tips) ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ, ಅದು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ. ಇಂತಹ ಅನೇಕ ನಂಬಿಕೆಗಳು ಶತಮಾನಗಳಿಂದ ನಡೆಯುತ್ತಿವೆ. ನಾವು ಅವುಗಳನ್ನು ಅನುಸರಿಸುತ್ತಿದ್ದೇವೆ. ಯಾರಾದರೂ ಮನೆಗೆ ಬಂದ ತಕ್ಷಣ ಪೊರಕೆ ಬಳಸಬಾರದು, ಕೆಲವರು ಮನೆಯಿಂದ ಹೊರಗೆ ಹೋಗುವಾಗ ಪೊರಕೆ ಬಳಸುತ್ತಿರಬಾರದು ಎಂದು ನಿಮ್ಮ ಮನೆಯ ಹಿರಿಯರು ಅನೇಕ ಬಾರಿ ಹೇಳುವುದನ್ನು ನೀವು ಕೇಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಎಲ್ಲರ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ, ಪೊರಕೆಯನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತೆ, ಆದರೆ, ಮನೆಯಿಂದ ಹೊರಡುವಾಗ ಪೊರಕೆ ಬಳಸೋದನ್ನು ಏಕೆ ನಿಷೇಧಿಸಲಾಗಿದೆ? ಇದರ ಬಗ್ಗೆ ತಿಳಿಯೋಣ.

ಪೊರಕೆಗೆ ಸಂಬಂಧಿಸಿದ ಪೌರಾಣಿಕ ನಂಬಿಕೆಗಳು 
ಹಿಂದೂ ಧರ್ಮದಲ್ಲಿ ಅನೇಕ ರೀತಿಯ ನಂಬಿಕೆಗಳಿವೆ. ದೈನಂದಿನ ಜೀವನದಲ್ಲಿ ಇಂತಹ ಅನೇಕ ವಿಷಯಗಳಿವೆ, ಅವುಗಳನ್ನು ಶುಭ ಅಥವಾ ಅಶುಭ ಚಿಹ್ನೆಗಳಿಗೆ ಸಂಬಂಧಿಸಿದ್ದು ಎನ್ನಲಾಗುತ್ತೆ.. ಪೊರಕೆಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಪೊರಕೆಯನ್ನು (broomstick) ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಪೊರಕೆಗೆ ಅಗೌರವ ತೋರುವ ಮನೆಗೆ ಲಕ್ಷ್ಮಿ ದೇವಿಯು (Goddess Lakshmi) ಎಂದಿಗೂ ಬರುವುದಿಲ್ಲ ಎಂದು ನಂಬಲಾಗಿದೆ. ಪೊರಕೆಯನ್ನು ಎಂದಿಗೂ ಕಾಲಿನಲ್ಲಿ ಮೆಟ್ಟಬಾರದು ಮತ್ತು ಅದನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಪೊರಕೆಯನ್ನು ಎಂದಿಗೂ ಹಾಸಿಗೆಯ ಕೆಳಗೆ ಇಡಬಾರದು ಎಂದು ಹೇಳಲಾಗುತ್ತದೆ. ಇದು ನಿಮಗೆ ಮಾನಸಿಕ ಒತ್ತಡವನ್ನು ನೀಡುತ್ತದೆ.. 
 

ಹೊರ ಹೋಗುವಾಗ ಯಾರಾದ್ರೂ ಗುಡಿಸುತ್ತಿದ್ದರೆ: ನೀವು ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೆ ಮತ್ತು ದಾರಿಯಲ್ಲಿ ಯಾರಾದರು ಗುಡಿಸೋದನ್ನು ನೀವು ನೋಡಿದ್ರೆ, ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ ಎಂದು ವಾಸ್ತು ತಜ್ಞರು (vastu expert) ಹೇಳುತ್ತಾರೆ. ನೀವು ಹೊರಹೋಗುವ ಯಾವುದೇ ಕೆಲಸದಲ್ಲಿ ಇದು ಯಶಸ್ಸನ್ನು ನೀಡುವುದಿಲ್ಲ ಎಂದು ನಂಬಲಾಗಿದೆ. ಆದರೆ ಇದು ಎಲ್ಲರಿಗೂ ಅಪಶಕುನವಾಗೋದಿಲ್ಲ. 

ಮನೆಯಲ್ಲಿ ಯಾವ ಸಮಯದಲ್ಲಿ ಗುಡಿಸಬಾರದು?: ಒಬ್ಬ ಸದಸ್ಯನು ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಆ ಸಮಯದಲ್ಲಿ ಮನೆಯಲ್ಲಿ ಪೊರಕೆ ಹಿಡಿಯಬಾರದು. ಯಾರಾದರೂ ಮನೆಯಿಂದ ಹೊರಬಂದ ತಕ್ಷಣ ಅಥವಾ ಅದೇ ಸಮಯದಲ್ಲಿ ಗುಡಿಸಿದರೆ, ಮನೆಯಿಂದ ಹೊರಗೆ ಹೋಗುವ ವ್ಯಕ್ತಿಗೆ ಕೆಟ್ಟದಾಗುತ್ತದೆ ಎನ್ನಲಾಗುತ್ತೆ. 
 

ಅಂದಹಾಗೆ, ಮುಂಜಾನೆಯನ್ನು ಕಸ ಗುಡಿಸಲು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಗುಡಿಸುವುದು ಮನೆಗೆ ಸಮೃದ್ಧಿಯನ್ನು ತರುತ್ತದೆ. ಇದಲ್ಲದೆ, ಬೆಳಿಗ್ಗೆ ನಾಲ್ಕು ಗಂಟೆಗಳ ಕಾಲ ಕಸ ಗುಡಿಸಲು ಉತ್ತಮವೆಂದು ಪರಿಗಣಿಸಲಾಗಿದೆ. 
 

ಈ ಸಮಯದಲ್ಲಿ ಮನೆಯಲ್ಲಿ ಗುಡಿಸಬೇಡಿ: ವಾಸ್ತು ಪ್ರಕಾರ, ಸಂಜೆ ಕಸ ಗುಡಿಸಬಾರದು. ಸೂರ್ಯಾಸ್ತದ (after sun set) ನಂತರ ಗುಡಿಸಿದರೆ, ಮಾತಾ ಲಕ್ಷ್ಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದು ನಂಬಲಾಗಿದೆ. ಇದನ್ನು ಮಾಡುವುದರಿಂದ, ನಿಮ್ಮ ಮನೆಯ ಆರ್ಥಿಕ ಸ್ಥಿತಿ ಹದಗೆಡಬಹುದು ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಸಕಾರಾತ್ಮಕ ಶಕ್ತಿಯು ಹೊರಹೋಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ. ಈ ಕಾರಣಕ್ಕಾಗಿ, ಈ ಸಮಯದಲ್ಲಿ ಕಸ ಗುಡಿಸದಿರುವುದು ಉತ್ತಮ.  

ಪೊರಕೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳನ್ನು ತಿಳಿಯಿರಿ: ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ಪೊರಕೆಯನ್ನು ಎಂದಿಗೂ ಮನೆಯ ಮುಂದೆ ಇಡಬಾರದು. ನೀವು ಮನೆಯನ್ನು ಸ್ವಚ್ಛಗೊಳಿಸಿದ, ತಕ್ಷಣವೇ ಅದನ್ನು ಹೊರಗಿನವರು ನೋಡದ ಸ್ಥಳದಲ್ಲಿ ಇರಿಸಿ. 

ಮುರಿದ ಪೊರಕೆಯನ್ನು ಮನೆಯಲ್ಲಿ ಎಂದಿಗೂ ಇಡಬೇಡಿ. ಪೊರಕೆ ಮುರಿದರೆ, ಅದನ್ನು ತಕ್ಷಣ ಮನೆಯಿಂದ ತೆಗೆದುಹಾಕಬೇಕು ಮತ್ತು ಹೊಸ ಪೊರಕೆಯನ್ನು ತರಬೇಕು ಮತ್ತು ಶುಕ್ರವಾರ ಹೊಸ ಪೊರಕೆಯನ್ನು ತರುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಮುರಿದ ಪೊರಕೆಯನ್ನು ಮನೆಯಲ್ಲಿ ಇಡುವುದರಿಂದ ಅನೇಕ ವಿಪತ್ತುಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. 

ಪೊರಕೆಗಳಿಗೆ ಸಂಬಂಧಿಸಿದ ವಾಸ್ತು ನಂಬಿಕೆಗಳು 
ನಾವು ವಾಸ್ತುವನ್ನು ನಂಬಿದರೆ, ಹೊಸ ವರ್ಷದ ದಿನದಂದು ಪೊರಕೆಯನ್ನು ತರೋದರಿಂದ ಹಿಂದಿನ ವರ್ಷದ ಎಲ್ಲಾ ದುರಾದೃಷ್ಟಗಳು (unluck) ನಿವಾರಣೆಯಾಗುತ್ತವೆ.
ಪ್ರತಿದಿನ ಹಾಸಿಗೆಯ ಕೆಳಗೆ ಗುಡಿಸುವುದು ನಿಮ್ಮ ದುಃಸ್ವಪ್ನಗಳನ್ನು ತೆಗೆದುಹಾಕುತ್ತದೆ ಎಂದು ಹೇಳಲಾಗುತ್ತದೆ.
ಯಾರಾದರೂ ಅನಾರೋಗ್ಯದಿಂದ ಬಳಲುತ್ತಿರುವಾಗ ಮನೆಯ ನೆಲವನ್ನು ಗುಡಿಸೋದ್ರಿಂದ, ಅವರ ಕಾಯಿಲೆ ಶೀಘ್ರದಲ್ಲೇ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ. 

click me!