ಸಮುದ್ರ ಮಂಥನದಲ್ಲಿ ಹೊರ ಬಂದ ಈ ವಸ್ತುಗಳನ್ನ ಮನೆಗೆ ತಂದ್ರೆ ಅದೃಷ್ಟವೋ ಅದೃಷ್ಟ

First Published | Jul 27, 2023, 3:14 PM IST

ಶ್ರಾವಣ ತಿಂಗಳು ತುಂಬಾ ಪವಿತ್ರವಾಗಿದೆ. ಈ ಪವಿತ್ರ ತಿಂಗಳಲ್ಲಿ ಅಮೃತವನ್ನು ಕುಡಿಯಲು ದೇವತೆ ಮತ್ತು ರಾಕ್ಷಸರ ನಡುವೆ ಸಮುದ್ರ ಮಂಥನ ನಡೆಯಿತು ಎಂದು ಹೇಳಲಾಗುತ್ತೆ . ಸಮುದ್ರ ಮಂಥನದಿಂದ 14 ಅಮೂಲ್ಯ ರತ್ನಗಳನ್ನು ಹೊರತೆಗೆಯಲಾಯಿತು. ಈ ರತ್ನಗಳನ್ನು ಶ್ರಾವಣದಲ್ಲಿ ಮನೆಗೆ ತರುವ ಮೂಲಕ, ಅದೃಷ್ಟವನ್ನು ಜಾಗೃತಗೊಳಿಸಬಹುದು. 
 

ತಾಯಿ ಲಕ್ಷ್ಮಿ(Goddess Lakshmi)  
ತಾಯಿ ಲಕ್ಷ್ಮಿ ಸಮುದ್ರ ಮಂಥನದಿಂದ ಜನಿಸಿದಳು. ಆದ್ದರಿಂದ, ನೀವು ಶ್ರಾವಣ ಮಾಸದಲ್ಲಿ ಮನೆಗೆ ತಾಯಿ ಲಕ್ಷ್ಮಿಯ ವಿಗ್ರಹವನ್ನು ತನ್ನಿ. ಇದು ನಿಮಗೆ ಅದೃಷ್ಟ ತರುತ್ತೆ.  ಅಲ್ಲದೇ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತೆ. 

ಪಾಂಚಜನ್ಯ ಶಂಖ(Shankh)
ಸಮುದ್ರ ಮಂಥನದಲ್ಲಿ ಬಂದ 14 ರತ್ನಗಳಲ್ಲಿ ಪಾಂಚಜನ್ಯ ಶಂಖವೂ ಒಂದು. ವಿಷ್ಣು ಈ ಅಮೂಲ್ಯ ಶಂಖವನ್ನು ತನ್ನೊಂದಿಗೆ ಇಟ್ಟುಕೊಂಡನು. ಇದನ್ನು ಮನೆಯ ದೇವಾಲಯದಲ್ಲಿ ಇಡೋದು ಶುಭ ಸಂಕೇತ. ವಿಷ್ಣುವಿನ ಅನುಗ್ರಹ ಸದಾ ಇರುತ್ತೆ.
 

Tap to resize

ಐರಾವತ ಆನೆ(Elephant)
ಐರಾವತ ಆನೆ ಕೂಡ ಸಮುದ್ರ ಮಂಥನದಿಂದ ಹೊರಬಂದಿತು. ಈ ಬಿಳಿ ಬಣ್ಣದ ಆನೆಯು ಇಂದ್ರದೇವನ ವಾಹನವಾಗಿದೆ. ಶ್ರಾವಣದಲ್ಲಿ,  ಸ್ಫಟಿಕ ಅಥವಾ ಕಲ್ಲಿನ ಬಿಳಿ ಆನೆಯನ್ನು ಇಟ್ಟು ಪೂಜಿಸೋದು ಒಳ್ಳೇದು. 

ಅಮೃತ ಕಲಶ (Kalash)
ಧನ್ವಂತರಿ ದೇವರು ಸಮುದ್ರ ಮಂಥನದಿಂದ ಅಮೃತ ಕಲಶದೊಂದಿಗೆ ಹೊರಬಂದರು ಎನ್ನಲಾಗುತ್ತದೆ.. ಅಂದಿನಿಂದ, ಶುಭ ಕಾರ್ಯಗಳಲ್ಲಿ ಕಲಶವನ್ನು ಸ್ಥಾಪಿಸುವ ಸಂಪ್ರದಾಯವು ನಡೆಯುತ್ತಿದೆ. ಇದನ್ನು ನೀವು ಮನೆಯಲ್ಲಿ ಸ್ಥಾಪಿಸಿದರೆ ಉತ್ತಮ.

ಮನೆಗೆ ಅಮೃತ ಕಲಶ 
ಮನೆಯಲ್ಲಿ ಅಮೃತ ಕಲಶವನ್ನು ಸ್ಥಾಪಿಸೋದು ಎಂದಿಗೂ ದುಃಖ ಮತ್ತು ತೊಂದರೆಯನ್ನು ತರೋದಿಲ್ಲ ಎನ್ನುವ ನಂಬಿಕೆ ಇದೆ. ಇದನ್ನು ಸ್ಥಾಪಿಸುವ ಮೂಲಕ, ಉತ್ತಮ ಆರೋಗ್ಯದ ವರವನ್ನು ಪಡೆಯಲಾಗುತ್ತೆ.

ಪಾರಿಜಾತ (Parijatha) ಹೂವು
ಪಾರಿಜಾತ ಮರವೂ ಸಮುದ್ರ ಮಂಥನದಿಂದ ಹೊರಬಂದಿತು. ಇದರ ಹೂವುಗಳನ್ನು ಶಿವನಿಗೆ ಅರ್ಪಿಸುವುದು ತುಂಬಾ ಪ್ರಯೋಜನಕಾರಿ. ಇದನ್ನು ಮನೆಯಲ್ಲಿ ನೆಡಬಹುದು. ಇದು ಕೃಷ್ಣನಿಗೆ ಸಹ ಪ್ರಿಯವಾದ ಹೂವು.

ಕುದುರೆ( Horse)
ಆಕಾಶದಲ್ಲಿ ಹಾರುತ್ತಿದ್ದ ಬಿಳಿ ಹಾರುವ ಕುದುರೆ ಕೂಡ ಸಮುದ್ರದ ಮಂಥನದಿಂದ ಹೊರಬಂದಿತು. ಈ ಬಿಳಿ ಕುದುರೆಯ ಚಿತ್ರವನ್ನು ಮನೆಯಲ್ಲಿ ಇಡೋದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಅನುಮತಿಸೋದಿಲ್ಲ ಎಂಬ ನಂಬಿಕೆ ಇದೆ.
 

Latest Videos

click me!