ಈ ವಸ್ತುಗಳು ಕೈಯಿಂದ ಬಿದ್ದರೆ ಅಪಶಕುನವಂತೆ…. ಮುಂದೇನಾಗುತ್ತೆ ಗೊತ್ತಾ?

First Published | Jul 26, 2023, 3:04 PM IST

ನಿಮಗೆ ಗೊತ್ತಾ? ವಾಸ್ತು ಪ್ರಕಾರ ಕೆಲವೊಂದು ವಸ್ತುಗಳು ಕೈಯಿಂದ ಬೀಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ರೆ ಯಾವ ವಸ್ತುಗಳು ಕೈಯಿಂದ ಬೀಳಬಾರದು ಅನ್ನೊದನ್ನು ನೋಡೋಣ. 
 

ವಾಸ್ತು ಶಾಸ್ತ್ರ (vastu tips) ಜೀವನದಲ್ಲಿ ಮುಖ್ಯವಾದ ಒಂದು ಶಾಸ್ತ್ರ. ಯಾರು ವಾಸ್ತು ಶಾಸ್ತ್ರವನ್ನು ಬಹಳಷ್ಟು ನಂಬುತ್ತಾರೆಯೋ, ಅವರು ತಮ್ಮ ಎಲ್ಲಾ ಕೆಲಸಗಳನ್ನು ಜ್ಯೋತಿಷ್ಯದ ಪ್ರಕಾರ ಮಾಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಕೆಲಸ ಸರಿಯಾಗಿಲ್ಲದಿದ್ದರೆ, ಈ ಜನರು ಜ್ಯೋತಿಷ್ಯದ ಪ್ರಕಾರ ಅದನ್ನು ಮಾಡಲು ಇಷ್ಟಪಡುತ್ತಾರೆ. ಅನೇಕ ಬಾರಿ ನಾವು ಅವಸರದಲ್ಲಿರುವಾಗ ಅಥವಾ ಏನಾದರೂ ಕೆಲಸ ಮಾಡುವಾಗ ಕೆಲವು ವಸ್ತುಗಳು ನಮ್ಮ ಕೈಯಿಂದ ಬೀಳುತ್ತವೆ. ಅವು ದೊಡ್ಡ ವಸ್ತುಗಳು ಅಲ್ಲದೇ ಇದ್ದರೂ ಅವು ಅಶುಭದ ಸಂಕೇತ.

ವಸ್ತುಗಳು ಬೀಳುವುದು ಅಶುಭ ಸಂಕೇತ
ಕೈಯಿಂದ ವಸ್ತುಗಳು ಬೀಳುವುದು ಮುಂಬರುವ ಬಿಕ್ಕಟ್ಟಿನ ಸಂಕೇತ. ಹಾಗಾಗಿ ಎಂದಿಗೂ ಅವುಗಳನ್ನು ನಿರ್ಲಕ್ಷಿಸಬಾರದು. ಜ್ಯೋತಿಷ್ಯದ ಪ್ರಕಾರ, ಈ ವಸ್ತುಗಳ ಕೈಯಿಂದ ಬೀಳುವುದು ಅಶುಭ (bad luck) . ಇಂತಹ ಘಟನೆಗಳು ತಕ್ಷಣ ಬರುವ ಸಮಸ್ಯೆಗಳ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿವೆ. ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಎಂದು ಕರೆಯಲ್ಪಡುವ ವಿಷಯ ಯಾವುದು ಅನ್ನೋದನ್ನು ತಿಳಿಯೋಣ. 

Tap to resize

ಧಾನ್ಯ
ಭಾರತದಲ್ಲಿ, ಧಾನ್ಯಗಳನ್ನು ದೇವತೆ ಎಂದು ನಂಬಲಾಗುತ್ತೆ. ಆಹಾರ ತಿನ್ನುವಾಗ ಅಥವಾ ಬಡಿಸುವಾಗ ಆಹಾರ ಬೀಳುವುದು ಅಶುಭ. ಆಹಾರ ಬಡಿಸುವಾಗ ಆಹಾರ ಪದಾರ್ಥಗಳು ಕೈಯಿಂದ ಬಿದ್ದರೆ, ಅದು ಅನ್ನಪೂರ್ಣ ದೇವಿ ಅಥವಾ ತಾಯಿ ಲಕ್ಷ್ಮಿಗೆ (goddess Lakshmi) ಮಾಡಿದ ಅವಮಾನ. ಇದು ಮನೆಯಲ್ಲಿನ ಬಡತನವನ್ನು ಸೂಚಿಸುತ್ತದೆ.

ಎಣ್ಣೆ
ವಾಸ್ತು ಶಾಸ್ತ್ರದಲ್ಲಿ, ಎಣ್ಣೆ ನೆಲಕ್ಕೆ ಬೀಳುವುದು ಅಶುಭ. ತೈಲವು ಶನಿಯ ಸಂಕೇತ. ಆದ್ದರಿಂದ, ಕೈಯಿಂದ ಪದೇ ಪದೇ ಎಣ್ಣೆ ಬೀಳುವುದು ಹಣದ ನಷ್ಟವನ್ನು (money loss) ಸೂಚಿಸುತ್ತದೆ.

ಕರಿಮೆಣಸು (black pepper)
ಕರಿಮೆಣಸು ಕೈಯಿಂದ ಬೀಳುವುದು ಸಹ ಅಶುಭ. ಕರಿಮೆಣಸು ನೆಲಕ್ಕೆ ಬೀಳುವುದು ಸಂಬಂಧದಲ್ಲಿ ಕಹಿಯನ್ನು ಉಂಟುಮಾಡುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು (negative energy) ಹೆಚ್ಚಿಸುತ್ತದೆ. 

ಉಪ್ಪು
ನಮ್ಮ ಜೀವನದಲ್ಲಿ ಉಪ್ಪಿನ ಪಾತ್ರ ದೊಡ್ಡದು. ಉಪ್ಪು ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲದೆ ಅದೃಷ್ಟದೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಉಪ್ಪನ್ನು ಚಂದ್ರ ಮತ್ತು ಶುಕ್ರನ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಕೈಯಿಂದ ಉಪ್ಪು ಬಿದ್ದರೆ, ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಉಪ್ಪು ಬೀಳುವುದು ಜೀವನದ ಸಮಸ್ಯೆಗಳನ್ನು ಸೂಚಿಸುತ್ತದೆ.

ಹಾಲು
ಹಾಲು ಚಂದ್ರನ ಅಂಶ. ಗ್ಯಾಸ್ ಮೇಲೆ ಇಟ್ಟ ಹಾಲು ಕುದಿಯುತ್ತಿದ್ದರೆ, ಚೆಲ್ಲಿದರೆ ಅಥವಾ ಒಂದು ಲೋಟ ಹಾಲು ಕೈಯಿಂದ ತಪ್ಪಿ ಚೆಲ್ಲಿದರೆ, ಅದನ್ನು ಒಳ್ಳೆಯದಲ್ಲ.  ಹಾಲು ಚೆಲ್ಲುವುದು ಆರ್ಥಿಕ ಬಿಕ್ಕಟ್ಟನ್ನು ತರುತ್ತದೆ ಎಂದು ಹೇಳಲಾಗುತ್ತದೆ.

Latest Videos

click me!