ಕ್ರಿಸ್ಮಸ್ ದಿನಕ್ಕೆ ಸಂಬಂಧಿಸಿದ ಅನೇಕ ಸಂಪ್ರದಾಯಗಳು ಮತ್ತು ಕಥೆಗಳಿವೆ. ಅವುಗಳಲ್ಲಿ ಕ್ರಿಸ್ಮಸ್ ಮರಗಳನ್ನು (christmas tree) ಅಲಂಕರಿಸುವ ಸಂಪ್ರದಾಯವೂ ಒಂದು. ಯೇಸುವಿನ ಹುಟ್ಟು ಹಬ್ಬ ಆಚರಿಸಲು ದೇವದೂತರು ಫರ್ನ್ ಮರಗಳನ್ನು ದೀಪಗಳು ಮತ್ತು ನಕ್ಷತ್ರಗಳಿಂದ ಅಲಂಕರಿಸುತ್ತಾರೆ ಎಂಬ ನಂಬಿಕೆ ಇದೆ.
ಯೇಸು ಕ್ರಿಸ್ತನ ಜನನದ ನೆನಪಿಗಾಗಿ, ಜನರು ಕ್ರಿಸ್ಮಸ್ ದಿನದಂದು ಕ್ರಿಸ್ಮಸ್ ಮರವನ್ನು ವಿವಿಧ ರೀತಿಯಲ್ಲಿ ಅಲಂಕರಿಸುತ್ತಾರೆ. ಆದರೆ ಕ್ರಿಸ್ಮಸ್ ಮರ ವಿವಿಧ ವಾಸ್ತುದೋಷಗಳನ್ನು (vastu dosha) ಸಹ ತೆಗೆದುಹಾಕುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನೋಡೋಣ...
ಕ್ರಿಸ್ಮಸ್ ಮರವು ತ್ರಿಕೋನಾಕಾರದಲ್ಲಿದ್ದು ಮೇಲ್ಮುಖವಾಗಿರುತ್ತದೆ. ಇದನ್ನು ವಾಸ್ತುವಿನಲ್ಲಿ ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಕ್ರಿಸ್ಮಸ್ ಮರವನ್ನು ಮನೆಯಲ್ಲಿಡುವುದರಿಂದ ಪ್ರಗತಿ ಹೆಚ್ಚುತ್ತದೆ.
ಮನೆಯಲ್ಲಿ ಕ್ರಿಸ್ಮಸ್ ಮರವನ್ನು ಅಲಂಕರಿಸಿದರೆ, ನಕಾರಾತ್ಮಕತೆ (negativity) ನಿವಾರಣೆ ಮಾಡಿ ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಮನೆಯಲ್ಲಿ ಕ್ರಿಸ್ಮಸ್ ಮರವನ್ನು ಸರಿಯಾದ ಜಾಗದಲ್ಲಿ ಅಲಂಕರಿಸುವುದು ಮುಖ್ಯವಾಗಿದೆ.
ಕ್ರಿಸ್ಮಸ್ ಮರವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕನ್ನು ಸಕಾರಾತ್ಮಕತೆಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ಮರವನ್ನು ಉತ್ತರ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ.
ಕ್ರಿಸ್ ಮಸ್ ಮರಗಳನ್ನು ವರ್ಣರಂಜಿತ ದೀಪಗಳಿಂದ (colorful lightings)ಅಲಂಕರಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳ ಆಯಸ್ಸು ಹೆಚ್ಚುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಕ್ರಿಸ್ಮಸ್ ಮರದ ಮೇಲಿನ ನಕ್ಷತ್ರಗಳು (stars) ಜೀವನದಲ್ಲಿ ಉತ್ಸಾಹವನ್ನು ತುಂಬುತ್ತದೆ. ನೀವು ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ಅನುಭವಿಸುತ್ತೀರಿ. ಕ್ರಿಸ್ಮಸ್ ನಿಮ್ಮ ಜೀವನದಲ್ಲಿ ಶುಭವನ್ನು ತರುತ್ತದೆ, ಆದುದರಿಂದ ನಕ್ಷತ್ರಗಳನ್ನು ಇಡಲು ಮರೆಯಬೇಡಿ.
क्रिसमस मूड में कार्तिक आर्यन।
ಕ್ರಿಸ್ಮಸ್ ಮರಗಳ ಮೇಲಿನ ಆಟಿಕೆಗಳನ್ನು ಮಕ್ಕಳಿಗೆ ಹಂಚಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಪ್ರಗತಿ ಹೆಚ್ಚುತ್ತದೆ. ಮನೆಯಲ್ಲಿ ಸಂತಸ ಸದಾ ನೆಲೆಸಿರುತ್ತದೆ. ಇದನ್ನು ಉತ್ತಮ ರೀತಿಯಲ್ಲಿ ಆಚರಣೆ ಮಾಡಿ, ಮನೆಯಲ್ಲಿ ಸಂಭ್ರಮ ಹೆಚ್ಚಿಸಿ.