ಮನೆಯಲ್ಲಿ ಶಿವನ ಈ ಚಿತ್ರಗಳನ್ನಿಟ್ಟರೆ ಸಂಪತ್ತು ವೃದ್ಧಿಯಾಗುತ್ತೆ

First Published | Aug 20, 2022, 5:27 PM IST

ಶ್ರಾವಣದಲ್ಲಿ, ಎಲ್ಲಾ ಭಕ್ತರು ಶಿವನ ಭಕ್ತಿಯಲ್ಲಿ ಮಗ್ನರಾಗಿರುತ್ತಾರೆ. ಮಹಾದೇವನು ತನ್ನ ಭಕ್ತರ ಎಲ್ಲಾ ಕಷ್ಟಗಳನ್ನು ಹೋಗಲಾಡಿಸ್ತಾನೆ ಎಂದು ಹೇಳಲಾಗುತ್ತೆ. ವಾಸ್ತು ಶಾಸ್ತ್ರವು ಶ್ರಾವಣ ಮಾಸದ ಬಗ್ಗೆ ಕೆಲವು ಸಲಹೆಗಳನ್ನು ಸಹ ಹೊಂದಿದೆ, ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತೆ, ಹಾಗೆಯೇ ತಾಯಿ ಲಕ್ಷ್ಮಿ ಸಹ ನಿಮ್ಮ ಬಗ್ಗೆ ಸಂತೋಷಪಡುತ್ತಾಳೆ. 

ಭಕ್ತರು ಶಿವನ ವಿವಿಧ ರೂಪಗಳನ್ನು ಪೂಜಿಸುತ್ತಾರೆ. ಕೆಲವರು ದೇವಾಲಯಗಳಿಗೆ ಹೋದರೆ, ಕೆಲವರು ಮನೆಯಲ್ಲಿ ಶಿವನ(Shiva) ವಿಗ್ರಹವನ್ನು ಇರಿಸಿ ಪೂಜಿಸುತ್ತಾರೆ. ವಾಸ್ತುವಿನ ಪ್ರಕಾರ, ಶ್ರಾವಣದ ತಿಂಗಳಲ್ಲಿ ಶಿವನ ವಿಗ್ರಹವನ್ನು ಮನೆಯಲ್ಲಿ ಇರಿಸೋದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತೆ ಮತ್ತು ಸಂಪತ್ತು-ಸಮೃದ್ಧಿ ಉಳಿಯುತ್ತೆ.
 

ನೀವು  ಶಿವನ ವಿಗ್ರಹ ಅಥವಾ ಚಿತ್ರ ಇರಿಸೋದಾದ್ರೆ ಈ ಟಿಪ್ಸ್ ಫಾಲೋ ಮಾಡಿ,
ಮನೆಯಲ್ಲಿ ಶಿವನ ವಿಗ್ರಹ ಸ್ಥಾಪಿಸಲು ಬಯಸಿದರೆ, ಪ್ರತಿಯೊಬ್ಬರ ಕಣ್ಣುಗಳು(Eyes) ಅದರ ಮೇಲೆ ಬೀಳುವ ಸ್ಥಳದಲ್ಲಿ ಶಿವನ ಚಿತ್ರ ಇರಿಸಿ. ಈ ರೀತಿಯಲ್ಲಿ ಚಿತ್ರ ಹಾಕೋದು ಮನೆಯಲ್ಲಿ ಸಕಾರಾತ್ಮಕತೆಯನ್ನು ಕಾಪಾಡುತ್ತೆ. ಯಾವುದೇ ಕೆಟ್ಟ ದೃಷ್ಟಿಯೂ ಮನೆಯ ಮೇಲೆ ಬೀಳೋದಿಲ್ಲ.

Tap to resize

 ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸೋದರಿಂದ ಮನೆಯಲ್ಲಿ ಧನಾತ್ಮಕತೆ ಹರಡುತ್ತೆ. ಆದರೆ, ಶಿವನ ಉಗ್ರ ರೂಪದ ಚಿತ್ರ ಎಂದಿಗೂ ಹಾಕದಂತೆ ವಿಶೇಷ ಕಾಳಜಿ ವಹಿಸಿ. ಮಹಾದೇವನ ರುದ್ರ(Rudra) ರೂಪದ ಚಿತ್ರವನ್ನು ಹಾಕೋದ್ರಿಂದ, ಮನೆಯಲ್ಲಿ ನಕಾರಾತ್ಮಕತೆ ನೆಲೆಸುತ್ತೆ. ಇದರಿಂದ ಮನೆಗೆ ಕೆಟ್ಟದಾಗುತ್ತೆ.

ಮನೆಯಲ್ಲಿ ಶಿವ ಮತ್ತು ಪಾರ್ವತಿಯ(Shiva Parvathi) ವಿಗ್ರಹವನ್ನು ಇಡೋದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ವಾಸ್ತುಪ್ರಕಾರ, ಶಿವನ ಅಂತಹ ಚಿತ್ರ ಹಾಕುವ ಮೂಲಕ, ತಾಯಿ ಲಕ್ಷ್ಮಿಯ ಕೃಪೆಯು ವ್ಯಕ್ತಿಯ ಮೇಲೆ ಉಳಿಯುತ್ತೆ. ಸಂತೋಷ ಮತ್ತು ಸಮೃದ್ಧಿಯ ಜೊತೆಗೆ, ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಹರಡುತ್ತೆ.

ಒಬ್ಬ ವ್ಯಕ್ತಿಯ ಕುಟುಂಬ(Family) ಸದಸ್ಯರಲ್ಲಿ ಸಾಕಷ್ಟು ಜಗಳ ಅಥವಾ ಅಶಾಂತಿ ಇದ್ದರೆ, ಮನೆಯಲ್ಲಿ ಶಿವನ ಕುಟುಂಬದ ಚಿತ್ರವನ್ನು ಸ್ಥಾಪಿಸಬೇಕು. ಅಂತಹ ಚಿತ್ರವನ್ನು ಹಾಕುವ ಮೂಲಕ, ಮಗುವು ಸುಸಂಸ್ಕೃತ ಮತ್ತು ತುಂಬಾ ವಿಧೇಯವಾಗಿರುತ್ತೆ.

ನೀವು ಶಿವನ ಚಿತ್ರವನ್ನು ಎಲ್ಲಿ ಹಾಕುತ್ತೀರೋ ಅಥವಾ ವಿಗ್ರಹವನ್ನು ಎಲ್ಲಿ ಇಟ್ಟರೂ ಅಲ್ಲಿ ಸ್ವಚ್ಛತೆಯ(Clean) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಆ ಸ್ಥಳದಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ, ನಿಮಗೆ ತೊಂದರೆಯಾಗಬಹುದು.

ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಿವನನ್ನು ಮನೆಯಲ್ಲಿ ಸ್ಥಾಪಿಸಿದರೆ ಸುಖ, ಶಾಂತಿ(Peace), ನೆಮ್ಮದಿ ನೆಲೆಸುತ್ತೆ. ಜೊತೆಗೆ ಮನೆಯಲ್ಲಿ ಸಕಾರಾತ್ಮಕತೆ ಸದಾ ಇರುತ್ತೆ. ಹಾಗಿದ್ದರೆ ಇನ್ನು ಮುಂದೆ ಮನೆಯಲ್ಲಿ ಶಿವನ ಮೂರ್ತಿ ಅಥವಾ ಚಿತ್ರಗಳನ್ನು ಇಡುವಾಗ ಈ ವಿಷಯಗಳ ಕಡೆಗೆ ಗಮನ ಹರಿಸಿ. 

Latest Videos

click me!