ಬಾತ್ ರೂಂನಲ್ಲಿ ಈ 7 ವಸ್ತುಗಳಿದ್ದರೆ ಕಾಡಬಹುದು ದರಿದ್ರ!

Published : Aug 18, 2022, 11:01 AM IST

ವಾಸ್ತು ಶಾಸ್ತ್ರದಲ್ಲಿ, ಮನೆಯ ಸ್ನಾನ ಗೃಹದ ಬಗ್ಗೆ ಅನೇಕ ನಿಯಮಗಳನ್ನು ಹೇಳಲಾಗಿದೆ. ವಾಸ್ತು ಪ್ರಕಾರ, ಅತ್ಯಂತ ನಕಾರಾತ್ಮಕ ಶಕ್ತಿ ಸ್ನಾನಗೃಹದಿಂದ ಬಿಡುಗಡೆಯಾಗುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳದಿರುವುದು ಮುಖ್ಯ. ಹಾಗಾದ್ರೆ ಬನ್ನಿ ಯಾವೆಲ್ಲಾ ವಸ್ತುಗಳನ್ನು ಬಾತ್ ರೂಂ ನಲ್ಲಿ ಇಡಬಾರದು ಅನ್ನೋದನ್ನು ನೋಡೋಣ. 

PREV
18
ಬಾತ್ ರೂಂನಲ್ಲಿ ಈ 7 ವಸ್ತುಗಳಿದ್ದರೆ ಕಾಡಬಹುದು ದರಿದ್ರ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಒಳಗೆ ಮತ್ತು ಸುತ್ತಲೂ ಇರಿಸಲಾದ ಪ್ರತಿಯೊಂದೂ ವಸ್ತುವು ವ್ಯಕ್ತಿಯ ಜೀವನದ ಮೇಲೆ ಶುಭ ಅಥವಾ ಅಶುಭ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದೂ ದಿಕ್ಕಿನಲ್ಲೂ ಇರಿಸಲಾದ ಪ್ರತಿಯೊಂದೂ ವಸ್ತುಗಳಿಗೂ ನಿಯಮಗಳಿವೆ. ಇದನ್ನು ಅನುಸರಿಸುವುದು ಬಹಳ ಮುಖ್ಯ. ವಾಸ್ತು ಪ್ರಕಾರ, ಮನೆಯಲ್ಲಿರುವ ಎಲ್ಲವೂ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಬಿಡುಗಡೆ ಮಾಡುತ್ತದೆ. ಆದ್ದರಿಂದ, ಮನೆಯ ಮುಖ್ಯ ದ್ವಾರ, ದೇವಾಲಯ, ಮಲಗುವ ಕೋಣೆಯ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಇದಲ್ಲದೆ, ಮನೆಯಲ್ಲಿರುವ ಸ್ನಾನಗೃಹಕ್ಕೆ ವಿಶೇಷ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಏಕೆಂದರೆ ಈ ದಿಕ್ಕಿನಿಂದ ಅತ್ಯಂತ ನಕಾರಾತ್ಮಕ ಶಕ್ತಿಯು (Negative Energy) ಉತ್ಪತ್ತಿಯಾಗುತ್ತದೆ. ಬಾತ್ ರೂಮಿನಲ್ಲಿ ಇಡಬಾರದ ಅಂತಹ ಕೆಲವು ವಸ್ತುಗಳ ಬಗ್ಗೆ ತಿಳಿದುಕೊಳ್ಳಿ.

28
ಈ ವಸ್ತುಗಳನ್ನು ಬಾತ್ ರೂಮಿನಲ್ಲಿ ಇಡಬೇಡಿ

ತುಂಡಾದ ಚಪ್ಪಲಿಗಳು
ಸಾಮಾನ್ಯವಾಗಿ ಬಾತ್ ರೂಮಿನಲ್ಲಿ ಚಪ್ಪಲಿಗಳನ್ನು ಧರಿಸುತ್ತಾರೆ. ಆದರೆ ಮುರಿದ ಚಪ್ಪಲಿಗಳನ್ನು ಬಾತ್ ರೂಮಿನಲ್ಲಿ ಇಡಬಾರದು. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಸಹ ಉಂಟುಮಾಡಬಹುದು.

38
ಒಡೆದ ಕನ್ನಡಿ (cracked mirror)

ವಾಸ್ತು ಶಾಸ್ತ್ರದ ಪ್ರಕಾರ, ಒಡೆದ ಗಾಜನ್ನು ಬಾತ್ ರೂಮಿನಲ್ಲಿ ಇಡಬಾರದು. ಏಕೆಂದರೆ ಇದು ವಾಸ್ತು ದೋಷಗಳಿಗೆ ಕಾರಣವಾಗಬಹುದು. ಇದರಿಂದಾಗಿ ವ್ಯಕ್ತಿಯು ಹಣದ ಕೊರತೆ ಎದುರಿಸಬೇಕಾಗಬಹುದು. ಆದುದರಿಂದ ಒಡೆದ ಕನ್ನಡಿ ಇದ್ದರೆ ಅದನ್ನು ಕೂಡಲೇ ತೆಗೆಯಿರಿ. 

48
ಖಾಲಿ ಬಕೆಟ್

ವಾಸ್ತು ಶಾಸ್ತ್ರದ ಪ್ರಕಾರ, ಖಾಲಿ ಬಕೆಟ್‌ಗಳನ್ನು (empty bucket) ಎಂದಿಗೂ ಸ್ನಾನಗೃಹದಲ್ಲಿ ಇಡಬಾರದು. ಏಕೆಂದರೆ ಅದು ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವಾಗಲೂ ಬಾತ್ ರೂಮ್ ನಲ್ಲಿ ಬಕೆಟ್ ಅನ್ನು ತುಂಬಿಸಿಡಿ. ನೀವು ಬಕೆಟ್  ಟಬ್ ಇತ್ಯಾದಿಗಳನ್ನು ತುಂಬಿಡಲು ಬಯಸದಿದ್ದರೆ, ಅದನ್ನು ತಲೆಕೆಳಗಾಗಿ ತಿರುಗಿಸಿ.

58
ನಲ್ಲಿಯಿಂದ ತೊಟ್ಟಿಕ್ಕುವ ನೀರು

ವಾಸ್ತುವಿನ ಪ್ರಕಾರ, ನಲ್ಲಿಯಿಂದ ನೀರು ತೊಟ್ಟಿಕ್ಕುವುದು ದುರಾದೃಷ್ಟವನ್ನು ಹೆಚ್ಚಿಸುತ್ತದೆ. ಬಾತ್ ರೂಮ್ ಅಥವಾ ಮನೆಯ ಯಾವುದೇ ನಲ್ಲಿಯಿಂದ ನೀರು ಹನಿಯುತ್ತಿದ್ದರೆ, ಅದನ್ನು ತಕ್ಷಣವೇ ಸರಿಪಡಿಸಿ. ಇಲ್ಲವಾದರೆ ನೆಗೆಟಿವ್ ಎನರ್ಜಿ ಹೆಚ್ಚುತ್ತೆ.

68
ಒದ್ದೆ ಬಟ್ಟೆಗಳು (wet cloths)

ಸ್ನಾನ ಮಾಡುವಾಗ ಬಟ್ಟೆಗಳು ಒದ್ದೆಯಾಗಿದ್ದರೆ, ಅವುಗಳನ್ನು ತೊಳೆದು ಹಾಕಿ. ಒದ್ದೆಯಾದ ಬಟ್ಟೆಗಳನ್ನು ಬಾತ್ ರೂಮಿನಲ್ಲಿ ಎಂದಿಗೂ ಬಿಡಬೇಡಿ. ಏಕೆಂದರೆ ಅವು ಸೂರ್ಯನ ದೋಷಗಳನ್ನು ಉಂಟುಮಾಡುತ್ತವೆ.

78
ಮುರಿದ ಕೂದಲು

ಕೂದಲು ಉದುರುವಿಕೆಯ ಸಮಸ್ಯೆ ಸಾಮಾನ್ಯವಾಗಿದೆ ಆದರೆ ಮುರಿದ ಕೂದಲು ಸ್ನಾನಗೃಹದ ಚರಂಡಿಯಲ್ಲಿ ಬಿದ್ದಿದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕಿ. ಏಕೆಂದರೆ ಈ ಮುರಿದ ಕೂದಲು ಬಡತನದ ಸಂಕೇತ. ಇದರೊಂದಿಗೆ, ಶನಿ ಮತ್ತು ಮಂಗಳ ದೋಷವೂ ಸಂಭವಿಸುತ್ತದೆ.

88
ಸಸ್ಯಗಳು

ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಸಸ್ಯಗಳನ್ನು ಇಡುವುದನ್ನು ಸಹ ತಪ್ಪಿಸಬೇಕು. ನೀವು ಇಟ್ಟುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಒಮ್ಮೆ ವಾಸ್ತುವಿನ ತಜ್ಞರಿಂದ ಸಲಹೆ ಪಡೆಯಿರಿ. ಇಲ್ಲವಾದರೆ ನೆಗೆಟಿವಿಟಿ ಹೆಚ್ಚಬಹುದು ಎಚ್ಚರವಿರಲಿ.

Read more Photos on
click me!

Recommended Stories