ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಹವನಕ್ಕೆ ಸಾಕಷ್ಟು ಮಹತ್ವವಿದೆ. ಯಾವುದೇ ಮಂಗಳ ಕೆಲಸವನ್ನು ಪ್ರಾರಂಭಿಸಲು ಅಥವಾ ಯಾವುದೇ ದೋಷ ತೊಡೆದು ಹಾಕಲು ಮನೆಗಳಲ್ಲಿ ಹವನವನ್ನು ನಡೆಸಲಾಗುತ್ತದೆ. ವಿವಿಧ ರೀತಿಯ ಮಂತ್ರ ಬಳಸಿ ಅಗ್ನಿಯಲ್ಲಿ ಯಜ್ಞಗಳನ್ನು ಮಾಡಲಾಗುತ್ತದೆ. ಮಂತ್ರಗಳಿಂದ ತುಂಬಿರುವ ಈ ಹವನವು ಮನೆಯ ವಾತಾವರಣವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ನಕಾರಾತ್ಮಕ ಶಕ್ತಿಯನ್ನು ಸಹ ನಿವಾರಣೆ ಮಾಡುತ್ತೆ.
ಅದೇ ಸಮಯದಲ್ಲಿ, ವಾಸ್ತು ಶಾಸ್ತ್ರದ ಪ್ರಕಾರ, ಮಂತ್ರಗಳಿಂದ ತುಂಬಿದ ಹವನದ ಈ ಭಸ್ಮವು ಯಶಸ್ಸಿನ ಮೆಟ್ಟಿಲುಗಳನ್ನು ತಲುಪಬಹುದು ಮತ್ತು ಹಣದ ಕೊರತೆ (Financial Scarcity) ತೊಡೆದುಹಾಕಲು ಸಹಾಯ ಮಾಡುತ್ತೆ. ವಾಸ್ತು ಪ್ರಕಾರ ಹವನ ಭಸ್ಮಗಳನ್ನು ಯಾವ ರೀತಿ ಬಳಸುವ ಮೂಲಕ ಸಮಸ್ಯೆಗಳನ್ನು ನಿವಾರಿಸಬಹುದು.
ಹವನ ಭಸ್ಮದಿಂದ ಏನೇನು ಮಾಡಬಹುದು ನೋಡಿ…
ಮನೆಯೊಳಗೆ ಸಿಂಪಡಿಸಿ
ಹವನದ ನಂತರ, ಭಸ್ಮವು ತಣ್ಣಗಾದಾಗ, ಅದನ್ನು ತೆಗೆದುಕೊಂಡು ಹೋಗಿ ನಿಮ್ಮ ಕಚೇರಿ ಮತ್ತು ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಚಿಮುಕಿಸಿ. ಹಾಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಯನ್ನು (negative energy) ತೊಡೆದುಹಾಕಬಹುದು. ಮನೆಯಲ್ಲಿ ಪಾಸಿಟಿವಿಟಿ ತುಂಬುತ್ತದೆ ಎಂದು ನಂಬಲಾಗಿದೆ.
ದೃಷ್ಟಿ
ಮನೆ, ಪುಟಾಣಿ ಮಕ್ಕಳು ಅಥವಾ ಕೆಲವು ಸಂದರ್ಭಗಳಲ್ಲಿ ಮನೆಯ ಸದಸ್ಯರ ಮೇಲೆಯೂ ಕೆಲವೊಮ್ಮೆ ಯಾವುದಾದರು ವ್ಯಕ್ತಿಯ ಕೆಟ್ಟ ದೃಷ್ಟಿ ಬೀಳುತ್ತದೆ. ಇಂತಹ ಸಂದರ್ಭದಲ್ಲಿ ನೀವು, ಹವನದ ಭಸ್ಮದ ತಿಲಕವಿಡಬೇಕು. ಇದನ್ನು ಮಾಡುವುದರಿಂದ, ನೀವು ಯಾವುದೇ ರೀತಿಯ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವುದಿಲ್ಲ.
ಆರ್ಥಿಕ ಸಮಸ್ಯೆ ನಿವಾರಣೆಗಾಗಿ
ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ (economic problem) ಬರಬಾರದು ಎಂದು ಅಂದುಕೊಂಡರೆ, ಹವನದ ಬೂದಿಯನ್ನು ಕೆಂಪು ಬಟ್ಟೆಯಲ್ಲಿ (Red Cloth) ಕಟ್ಟಿ ಮತ್ತು ಅದನ್ನು ಸುರಕ್ಷಿತವಾಗಿ ಇರಿಸಿ ಅಥವಾ ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಇದನ್ನು ಮಾಡುವುದರಿಂದ, ನೀವು ಎಂದಿಗೂ ಹಣದ ಕೊರತೆ ಎದುರಿಸುವುದಿಲ್ಲ.
ಕೆಟ್ಟ ಕನಸುಗಳಿಗಾಗಿ.
ಕನಸು ಬೀಳುವುದು ಸಾಮಾನ್ಯ, ಆದರೆ ರಾತ್ರಿಯಲ್ಲಿ ನೀವು ಮಲಗಿದ ತಕ್ಷಣ ಭಯಾನಕ ಕನಸುಗಳ (Horror Dreams) ಪದೇ ಪದೇ ಬೀಳುತ್ತಿದ್ದು, ನಿಮ್ಮ ನಿದ್ರೆಗೆ ತೊಂದರೆಯಾಗುತ್ತಿದ್ದರೆ ಅಂತವರು, ಪ್ರತಿದಿನ ಹವನ ಭಸ್ಮದ ತಿಲಕವನ್ನು ಹಚ್ಚಿ ಮಲಗಬೇಕು. ಭಯಾನಕ ಕನಸುಗಳು ಬರುವುದನ್ನು ಕಡಿಮೆಯಾಗುತ್ತವೆ.